ಕೊನೆಗೂ ಹೊಸ ವರ್ಷದ ಬಂಪರ್ ಪ್ಲ್ಯಾನ್ ಬಿಡುಗಡೆ ಮಾಡಿದ ಜಿಯೋ: ಇಂದೇ ರಿಚಾರ್ಜ್ ಮಾಡಿ

ಹೊಸ ವರ್ಷ 2025 ಸಮೀಪಿಸುತ್ತಿದೆ. ಎಲ್ಲ ಇ ಕಾಮರ್ಸ್ ತಾಣಗಳು ನ್ಯೂ ಈಯರ್ ಆಫರ್​ಗೆ ತಯಾರಿ ನಡೆಸುತ್ತಿದೆ. ಅತ್ತ ಟೆಲಿಕಾಂ ವಲಯದಲ್ಲಿ ಕೂಡ ಹೊಸ ವರ್ಷದ ಆಫರ್ ಶುರುವಾಗಿದೆ. ಸದ್ಯ ರಿಲಯನ್ಸ್ ಜಿಯೋ ಹೊಸ ವರ್ಷದ ಪ್ರಯುಕ್ತ ತನ್ನ ಬಳಕೆದಾರರಿಗೆ ಹೊಸ ಪ್ರಿಪೇಯ್ಡ್ ಯೋಜನೆಯೊಂದನ್ನು ತಂದಿದೆ. ಈ ಪ್ಲ್ಯಾನ್​ನಲ್ಲಿ ಏನೆಲ್ಲ ನೀಡಲಾಗಿದೆ?. ಇಲ್ಲಿದೆ ನೋಡಿ ಮಾಹಿತಿ.

ಕೊನೆಗೂ ಹೊಸ ವರ್ಷದ ಬಂಪರ್ ಪ್ಲ್ಯಾನ್ ಬಿಡುಗಡೆ ಮಾಡಿದ ಜಿಯೋ: ಇಂದೇ ರಿಚಾರ್ಜ್ ಮಾಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 13, 2024 | 5:02 PM

ಟೆಲಿಕಾಂ ಕ್ಷೇತ್ರದ ನಂಬರ್ ಒನ್ ಕಂಪನಿ ರಿಲಯನ್ಸ್ ಜಿಯೋ ಇದೀಗ ಹೊಸ ವರ್ಷದ ಪ್ರಯುಕ್ತ ತನ್ನ ಬಳಕೆದಾರರಿಗೆ ಹೊಸ ಪ್ರಿಪೇಯ್ಡ್ ಯೋಜನೆಯೊಂದನ್ನು ತಂದಿದೆ. ಈ ಪ್ಲ್ಯಾನ್​ನಲ್ಲಿ, ಜಿಯೋ ಬಳಕೆದಾರರು ಅನಿಯಮಿತ ಧ್ವನಿ ಕರೆ ಮತ್ತು ಎಸ್ ಎಮ್ ಎಸ್ ಸೇವೆಯನ್ನು ಪಡೆಯಬಹುದು. ಪ್ರತಿ ವರ್ಷ ಡಿಸೆಂಬರ್​ನಲ್ಲಿ ನ್ಯೂ ಈಯರ್ ಪ್ರಯುಕ್ತ ಜಿಯೋ ಏನಾದರು ಆಫರ್ ನೀಡುತ್ತದೆ. ಅದರಂತೆ ಹೊಸ ಕೊಡುಗೆಗಳಲ್ಲಿ, ಚಂದಾದಾರರಿಗೆ ರೂ. 2,150 ವರೆಗೆ ಪ್ರಯೋಜನಗಳನ್ನು ಪಡೆಯುವ ಅವಕಾಶವನ್ನು ಸಹ ನೀಡಲಾಗಿದೆ. ಶಾಪಿಂಗ್ ಸೈಟ್ ರಿಯಾಯಿತಿ, ಆಹಾರ ವಿತರಣಾ ಅಪ್ಲಿಕೇಶನ್‌ಗಳು ಮತ್ತು ಫ್ಲೈಟ್ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಸಹ ನೀಡುತ್ತದೆ.

ಜಿಯೋದಿಂದ 2025 ವೆಲ್‌ಕಮ್ ಆಫರ್‌:

ಗ್ರಾಹಕರು ಈ ಯೋಜನೆಗಳನ್ನು ಜನವರಿ 11, 2025 ರೊಳಗೆ ಖರೀದಿಸಬೇಕಾಗುತ್ತದೆ. ಈ ಸಮಯದಲ್ಲಿ ಮಾತ್ರ ಅವರು ಇದರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜಿಯೋ ಬಳಕೆದಾರರಿಗೆ ಹೊಸ ವರ್ಷದ ಸ್ವಾಗತ ಯೋಜನೆ 2025 ರ ಬೆಲೆಯನ್ನು ಹೊಂದಿದೆ. ಇದರ ವ್ಯಾಲಿಡಿಟಿಯನ್ನು ಬಳಕೆದಾರರಿಗೆ 200 ದಿನಗಳವರೆಗೆ ನೀಡಲಾಗುತ್ತದೆ.

ದೇಶಾದ್ಯಂತ ಎಲ್ಲಾ ಜಿಯೋ ಬಳಕೆದಾರರು ಇದರ ಲಾಭವನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ. ಈ ಯೋಜನೆಯಡಿಯಲ್ಲಿ, ಬಳಕೆದಾರರಿಗೆ 5G ಡೇಟಾ ಬೆಂಬಲವನ್ನು ನೀಡಲಾಗುತ್ತದೆ. ಅಲ್ಲದೆ, 500GB 4G ಡೇಟಾ ಅಥವಾ 2.5GB ದೈನಂದಿನ 4G ಡೇಟಾ ಬೆಂಬಲ ಲಭ್ಯವಿದೆ. ಈ ಯೋಜನೆಯಲ್ಲಿ, ಬಳಕೆದಾರರು ಅನಿಯಮಿತ ಕರೆ ಮತ್ತು SMS ಸೌಲಭ್ಯವನ್ನು ಪಡೆಯುತ್ತಾರೆ.

ಇದನ್ನೂ ಓದಿ: ನೀವು ಬಿಎಸ್​ಎನ್​ಎಲ್​ಗೆ ಪೋರ್ಟ್ ಮಾಡುತ್ತಿದ್ದರೆ ಮೊದಲು FRC ಬಗ್ಗೆ ತಿಳಿಯಿರಿ: ಇಲ್ಲಾಂದ್ರೆ ಸಿಮ್ ಆನ್ ಆಗಲ್ಲ

ಸ್ವಿಗ್ನಿ, ಎಜಿಯೋ ನಲ್ಲಿಯೂ ಸಹ ರಿಯಾಯಿತಿಯನ್ನು ಪಡೆಯಬಹುದು:

2025 ರ ರೀಚಾರ್ಜ್ ಯೋಜನೆಯನ್ನು ವಿಶೇಷವಾಗಿ ಜಿಯೋ ಬಳಕೆದಾರರಿಗಾಗಿ ತರಲಾಗಿದೆ. ಇದರಲ್ಲಿ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಚಂದಾದಾರಿಕೆ ಲಭ್ಯವಿದೆ. ಇದರೊಂದಿಗೆ, ಬಳಕೆದಾರರು 500 ರೂಪಾಯಿ ಮೌಲ್ಯದ Ajio ದ ಕೂಪನ್ ಅನ್ನು ಪಡೆಯುತ್ತಾರೆ, ಆದರೆ ಇದಕ್ಕಾಗಿ ಬಳಕೆದಾರರು ಕನಿಷ್ಠ 2,500 ರೂ. ಗಳ ಖರೀದಿಯನ್ನು ಮಾಡಬೇಕಾಗುತ್ತದೆ. ಬಳಕೆದಾರರಿಗೆ ಲಿಂಕ್ ನೀಡಲಾಗುವುದು ಮತ್ತು ಅದರ ಮೇಲೆ ಶಾಪಿಂಗ್ ಮಾಡಬಹುದು.

ಇನ್ನು ಸ್ವಿಗ್ಗಿಯಿಂದ ಆರ್ಡರ್ ಮಾಡಿದರೆ 150 ರೂಪಾಯಿ ರಿಯಾಯಿತಿ ಸಿಗುತ್ತದೆ, ಆದರೆ ಅದಕ್ಕಾಗಿ ನೀವು ಕನಿಷ್ಠ 499 ರೂಪಾಯಿ ಆರ್ಡರ್ ಮಾಡಬೇಕು. EaseMyTrip ಮೂಲಕ ನೀವು ಫ್ಲೈಟ್ ಟಿಕೆಟ್‌ಗಳನ್ನು ಬುಕ್ ಮಾಡುವಲ್ಲಿ 1,500 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ನೆಟ್‌ವರ್ಕ್ ಅನ್ನು ಸುಧಾರಿಸಲು ಜಿಯೋ ನಿರಂತರವಾಗಿ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ಕಂಪನಿಯು ಪ್ರಸ್ತುತ ಉಪಗ್ರಹ ನೆಟ್‌ವರ್ಕ್‌ನತ್ತ ಗಮನಹರಿಸುತ್ತಿದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ