ನೀವು ಬಿಎಸ್ಎನ್ಎಲ್ಗೆ ಪೋರ್ಟ್ ಮಾಡುತ್ತಿದ್ದರೆ ಮೊದಲು FRC ಬಗ್ಗೆ ತಿಳಿಯಿರಿ: ಇಲ್ಲಾಂದ್ರೆ ಸಿಮ್ ಆನ್ ಆಗಲ್ಲ
ಹೊಸ ಸಂಖ್ಯೆಯನ್ನು ತೆಗೆದುಕೊಂಡಾಗ ಅಥವಾ ನೀವು ಒಂದು ಸಿಮ್ ಅನ್ನು ಮತ್ತೊಂದು ಸಿಮ್ಗೆ ಪೋರ್ಟ್ ಮಾಡಿದಾಗ, ಮೊದಲು ಮಾಡಬೇಕಾದದ್ದು FRC ರೀಚಾರ್ಜ್ ಆಗಿದೆ. FRC ಗಳು ನಿಮ್ಮ ಸಂಖ್ಯೆಯನ್ನು ಸಕ್ರಿಯಗೊಳಿಸುವ ಯೋಜನೆಗಳಾಗಿವೆ. ಇದನ್ನು ಮಾಡಿದರೆ ಮಾತ್ರ ನಿಮ್ಮ ಸಿಮ್ ಆ್ಯಕ್ಟಿವ್ ಆಗುತ್ತದೆ.
ಖಾಸಗಿ ಕಂಪನಿಗಳ ದುಬಾರಿ ಯೋಜನೆಗಳಿಂದ ನೀವು ಬೇಸರಗೊಂಡಿದ್ದರೆ, ನಿಮ್ಮ ಸಿಮ್ ಅನ್ನು ಬಿಎಸ್ಎನ್ಎಲ್ಗೆ ಪೋರ್ಟ್ ಮಾಡಬಹುದು. ಅಗ್ಗದ ರೀಚಾರ್ಜ್ ಯೋಜನೆಗಳಿಗಾಗಿ ಕಳೆದ 4 ತಿಂಗಳಲ್ಲಿ ಸುಮಾರು 55 ಲಕ್ಷ ಬಳಕೆದಾರರು BSNL ಗೆ ಸೇರಿದ್ದಾರೆ. ನೀವು ಕೂಡ ನಿಮ್ಮ ಸಂಖ್ಯೆಯನ್ನು ಬಿಎಸ್ಎನ್ಎಲ್ಗೆ ಪೋರ್ಟ್ ಮಾಡಲು ಪ್ಲ್ಯಾನ್ ಹಾಕಿಕೊಂಡಿದ್ದರೆ FRC ಅಂದರೆ ಫಸ್ಟ್ ರೀಚಾರ್ಜ್ ಕೂಪನ್ ಬಗ್ಗೆ ತಿಳಿದಿರಬೇಕು.
ಹೊಸ ಸಂಖ್ಯೆಯನ್ನು ತೆಗೆದುಕೊಂಡಾಗ ಅಥವಾ ನೀವು ಒಂದು ಸಿಮ್ ಅನ್ನು ಮತ್ತೊಂದು ಸಿಮ್ಗೆ ಪೋರ್ಟ್ ಮಾಡಿದಾಗ, ಮೊದಲು ಮಾಡಬೇಕಾದದ್ದು FRC ರೀಚಾರ್ಜ್ ಆಗಿದೆ. FRC ಗಳು ನಿಮ್ಮ ಸಂಖ್ಯೆಯನ್ನು ಸಕ್ರಿಯಗೊಳಿಸುವ ಯೋಜನೆಗಳಾಗಿವೆ. ಇದನ್ನು ಮಾಡಿದರೆ ಮಾತ್ರ ನಿಮ್ಮ ಸಿಮ್ ಆ್ಯಕ್ಟಿವ್ ಆಗುತ್ತದೆ.
ಮುನ್ನುಗ್ಗುತ್ತಿದೆ ಬಿ ಎಸ್ ಎನ್ ಎಲ್:
ಗ್ರಾಹಕರನ್ನು ಸೆಳೆಯಲು ಬಿಎಸ್ಎನ್ಎಲ್ ವೇಗವಾಗಿ ಹೊಸ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಬಿ ಎಸ್ ಎನ್ ಎಲ್ ಭಾರತದಾದ್ಯಂತ 4G ಟವರ್‌ಗಳ ಸ್ಥಾಪನೆಯ ಕೆಲಸವನ್ನು ವೇಗಗೊಳಿಸಿದೆ. ಇಷ್ಟೇ ಅಲ್ಲ, ಕಂಪನಿಯು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯ ಪ್ಲಾನ್‌ಗಳನ್ನು ನೀಡುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಸಂಖ್ಯೆಯನ್ನು BSNL ಗೆ ಪೋರ್ಟ್ ಮಾಡಿದರೆ ನೀವು ದುಬಾರಿ ರೀಚಾರ್ಜ್ ಯೋಜನೆಗಳ ಟೆನ್ಶನ್ನಿಂದ ಮುಕ್ತರಾಗಬಹುದು. ಬಿಎಸ್ಎನ್ಎಲ್ನ FRC ಯೋಜನೆಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಬಿಎಸ್ಎನ್ಎಲ್ 108 FRC ಯೋಜನೆ:
ಬಿಎಸ್ಎನ್ಎಲ್ನ ಅಗ್ಗದ FRC ಯೋಜನೆಯು ರೂ. 108 ನಲ್ಲಿ ಬರುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ, ಕಂಪನಿಯು ನಿಮಗೆ 28 ದಿನಗಳ ಮಾನ್ಯತೆಯನ್ನು ನೀಡುತ್ತದೆ. ನೀವು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಕರೆ ಮಾಡಬಹುದು. ಇದರಲ್ಲಿ ನೀವು 28 ದಿನಗಳವರೆಗೆ ಒಟ್ಟು 28GB ಡೇಟಾವನ್ನು ಪಡೆಯುತ್ತೀರಿ. ಅಂದರೆ ನೀವು ಪ್ರತಿದಿನ 1GB ಡೇಟಾವನ್ನು ಬಳಸಬಹುದು. ಈ ಯೋಜನೆಯಲ್ಲಿ ನೀವು ಉಚಿತ SMS ಸೌಲಭ್ಯವನ್ನು ಪಡೆಯುವುದಿಲ್ಲ.
ಇದನ್ನೂ ಓದಿ: ಏರ್‌ಟೆಲ್ ಇಲ್ಲಿಯವರೆಗೆ ಎಷ್ಟು ಸ್ಪ್ಯಾಮ್ ಕರೆಗಳನ್ನು ಪತ್ತೆ ಮಾಡಿದೆ ಗೊತ್ತೇ?: ಶಾಕಿಂಗ್ ವರದಿ ಇಲ್ಲಿದೆ
ಬಿಎಸ್ಎನ್ಎಲ್ 249 FCR ಯೋಜನೆ:
249 ರೂ. ಗಳ FRC ರೀಚಾರ್ಜ್ ಯೋಜನೆಯು ನಿಮಗೆ 45 ದಿನಗಳ ದೀರ್ಘಾವಧಿಯ ಮಾನ್ಯತೆಯನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ನಿಮಗೆ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಯನ್ನು ಮಾಡಬಹುದು. ಹೆಚ್ಚು ಡೇಟಾವನ್ನು ಬಳಸುವ ಬಳಕೆದಾರರಿಗೆ ಈ FRC ರೀಚಾರ್ಜ್ ಯೋಜನೆಯು ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿ ನಿಮಗೆ ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. ಅಂದರೆ ನೀವು 45 ದಿನಗಳಲ್ಲಿ ಒಟ್ಟು 90GB ಡೇಟಾವನ್ನು ಬಳಸಬಹುದು. ಬಿಎಸ್ಎನ್ಎಲ್ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 100 ಉಚಿತ SMS ನೀಡುತ್ತದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ