ಟೆಲಿಕಾಂ ಕ್ಷೇತ್ರದ ನಂಬರ್ ಒನ್ ಕಂಪನಿ ರಿಲಯನ್ಸ್ ಜಿಯೋ ಇದೀಗ ಹೊಸ ವರ್ಷದ ಪ್ರಯುಕ್ತ ತನ್ನ ಬಳಕೆದಾರರಿಗೆ ಹೊಸ ಪ್ರಿಪೇಯ್ಡ್ ಯೋಜನೆಯೊಂದನ್ನು ತಂದಿದೆ. ಈ ಪ್ಲ್ಯಾನ್ನಲ್ಲಿ, ಜಿಯೋ ಬಳಕೆದಾರರು ಅನಿಯಮಿತ ಧ್ವನಿ ಕರೆ ಮತ್ತು ಎಸ್ ಎಮ್ ಎಸ್ ಸೇವೆಯನ್ನು ಪಡೆಯಬಹುದು. ಪ್ರತಿ ವರ್ಷ ಡಿಸೆಂಬರ್ನಲ್ಲಿ ನ್ಯೂ ಈಯರ್ ಪ್ರಯುಕ್ತ ಜಿಯೋ ಏನಾದರು ಆಫರ್ ನೀಡುತ್ತದೆ. ಅದರಂತೆ ಹೊಸ ಕೊಡುಗೆಗಳಲ್ಲಿ, ಚಂದಾದಾರರಿಗೆ ರೂ. 2,150 ವರೆಗೆ ಪ್ರಯೋಜನಗಳನ್ನು ಪಡೆಯುವ ಅವಕಾಶವನ್ನು ಸಹ ನೀಡಲಾಗಿದೆ. ಶಾಪಿಂಗ್ ಸೈಟ್ ರಿಯಾಯಿತಿ, ಆಹಾರ ವಿತರಣಾ ಅಪ್ಲಿಕೇಶನ್ಗಳು ಮತ್ತು ಫ್ಲೈಟ್ ಬುಕಿಂಗ್ ಪ್ಲಾಟ್ಫಾರ್ಮ್ಗಳಿಗೆ ಪ್ರವೇಶವನ್ನು ಸಹ ನೀಡುತ್ತದೆ.
ಗ್ರಾಹಕರು ಈ ಯೋಜನೆಗಳನ್ನು ಜನವರಿ 11, 2025 ರೊಳಗೆ ಖರೀದಿಸಬೇಕಾಗುತ್ತದೆ. ಈ ಸಮಯದಲ್ಲಿ ಮಾತ್ರ ಅವರು ಇದರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜಿಯೋ ಬಳಕೆದಾರರಿಗೆ ಹೊಸ ವರ್ಷದ ಸ್ವಾಗತ ಯೋಜನೆ 2025 ರ ಬೆಲೆಯನ್ನು ಹೊಂದಿದೆ. ಇದರ ವ್ಯಾಲಿಡಿಟಿಯನ್ನು ಬಳಕೆದಾರರಿಗೆ 200 ದಿನಗಳವರೆಗೆ ನೀಡಲಾಗುತ್ತದೆ.
ದೇಶಾದ್ಯಂತ ಎಲ್ಲಾ ಜಿಯೋ ಬಳಕೆದಾರರು ಇದರ ಲಾಭವನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ. ಈ ಯೋಜನೆಯಡಿಯಲ್ಲಿ, ಬಳಕೆದಾರರಿಗೆ 5G ಡೇಟಾ ಬೆಂಬಲವನ್ನು ನೀಡಲಾಗುತ್ತದೆ. ಅಲ್ಲದೆ, 500GB 4G ಡೇಟಾ ಅಥವಾ 2.5GB ದೈನಂದಿನ 4G ಡೇಟಾ ಬೆಂಬಲ ಲಭ್ಯವಿದೆ. ಈ ಯೋಜನೆಯಲ್ಲಿ, ಬಳಕೆದಾರರು ಅನಿಯಮಿತ ಕರೆ ಮತ್ತು SMS ಸೌಲಭ್ಯವನ್ನು ಪಡೆಯುತ್ತಾರೆ.
ಇದನ್ನೂ ಓದಿ: ನೀವು ಬಿಎಸ್ಎನ್ಎಲ್ಗೆ ಪೋರ್ಟ್ ಮಾಡುತ್ತಿದ್ದರೆ ಮೊದಲು FRC ಬಗ್ಗೆ ತಿಳಿಯಿರಿ: ಇಲ್ಲಾಂದ್ರೆ ಸಿಮ್ ಆನ್ ಆಗಲ್ಲ
2025 ರ ರೀಚಾರ್ಜ್ ಯೋಜನೆಯನ್ನು ವಿಶೇಷವಾಗಿ ಜಿಯೋ ಬಳಕೆದಾರರಿಗಾಗಿ ತರಲಾಗಿದೆ. ಇದರಲ್ಲಿ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ನ ಚಂದಾದಾರಿಕೆ ಲಭ್ಯವಿದೆ. ಇದರೊಂದಿಗೆ, ಬಳಕೆದಾರರು 500 ರೂಪಾಯಿ ಮೌಲ್ಯದ Ajio ದ ಕೂಪನ್ ಅನ್ನು ಪಡೆಯುತ್ತಾರೆ, ಆದರೆ ಇದಕ್ಕಾಗಿ ಬಳಕೆದಾರರು ಕನಿಷ್ಠ 2,500 ರೂ. ಗಳ ಖರೀದಿಯನ್ನು ಮಾಡಬೇಕಾಗುತ್ತದೆ. ಬಳಕೆದಾರರಿಗೆ ಲಿಂಕ್ ನೀಡಲಾಗುವುದು ಮತ್ತು ಅದರ ಮೇಲೆ ಶಾಪಿಂಗ್ ಮಾಡಬಹುದು.
ಇನ್ನು ಸ್ವಿಗ್ಗಿಯಿಂದ ಆರ್ಡರ್ ಮಾಡಿದರೆ 150 ರೂಪಾಯಿ ರಿಯಾಯಿತಿ ಸಿಗುತ್ತದೆ, ಆದರೆ ಅದಕ್ಕಾಗಿ ನೀವು ಕನಿಷ್ಠ 499 ರೂಪಾಯಿ ಆರ್ಡರ್ ಮಾಡಬೇಕು. EaseMyTrip ಮೂಲಕ ನೀವು ಫ್ಲೈಟ್ ಟಿಕೆಟ್ಗಳನ್ನು ಬುಕ್ ಮಾಡುವಲ್ಲಿ 1,500 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ನೆಟ್ವರ್ಕ್ ಅನ್ನು ಸುಧಾರಿಸಲು ಜಿಯೋ ನಿರಂತರವಾಗಿ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ಕಂಪನಿಯು ಪ್ರಸ್ತುತ ಉಪಗ್ರಹ ನೆಟ್ವರ್ಕ್ನತ್ತ ಗಮನಹರಿಸುತ್ತಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ