ಭಾರತೀಯ ಮಾರುಕಟ್ಟೆಗೆ 2023 ಜುಲೈ ತಿಂಗಳಲ್ಲಿ ಕೆಲವು ಬಲಿಷ್ಠ ಸ್ಮಾರ್ಟ್ಫೋನ್ಗಳು (Smartphones) ಎಂಟ್ರಿ ಕೊಟ್ಟಿದೆ. ಸ್ಯಾಮ್‌ಸಂಗ್ (Samsung), ಮೋಟೋರೊಲಾ ದಂತಹ ಪ್ರಸಿದ್ಧ ಕಂಪನಿಗಳು ಈ ತಿಂಗಳು ತನ್ನ ಆಕರ್ಷಕ ಮೊಬೈಲ್ಗಳನ್ನು ಅನಾವರಣ ಮಾಡಿದೆ. ನಥಿಂಗ್ ಕಂಪನಿ (Nothing Phone 2) ಕೂಡ ತನ್ನ ಎರಡನೇ ಆವೃತ್ತಿಯನ್ನು ಫೋನನ್ನು ಈ ತಿಂಗಳ ಆರಂಭದಲ್ಲಿ ರಿಲೀಸ್ ಮಾಡಿತ್ತು. ಹಾಗಾದರೆ, ಈ ಜುಲೈ ತಿಂಗಳಲ್ಲಿ ಎಷ್ಟು ಸ್ಮಾರ್ಟ್ಫೋನ್ಗಳು ಭಾರತದಲ್ಲಿ ಬಿಡುಗಡೆ ಆಗಿದೆ?, ಅವುಗಳು ಯಾವುವು? ಎಂಬುದನ್ನು ನೋಡೋಣ.
ಸಿಯೋಲ್‌ನಲ್ಲಿ ನಡೆದ ಅನ್ಪ್ಯಾಕ್ಡ್ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್ ತನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು Z ಫ್ಲಿಪ್ 5 ಅನಾವರಣ ಮಾಡಿತು. ಫೋಲ್ಡ್ 5 7.6-ಇಂಚಿನ QXGA+ AMOLED ಒಳಗಿನ ಡಿಸ್ ಪ್ಪೇ ಜೊತೆಗೆ 6.2-ಇಂಚಿನ ಕವರ್ ಡಿಸ್ ಪ್ಲೇಯನ್ನು ಹೊಂದಿದೆ. ಫ್ಲಿಪ್ ಫೋನ್ 6.7-ಇಂಚಿನ ಪೂರ್ಣ-HD+ ಒಳಗಿನ AMOLED 120Hz ಡಿಸ್ ಪ್ಲೇ ಮತ್ತು 3.4-ಇಂಚಿನ AMOLED ಹೊರ 60Hz ಡಿಸ್ ಪ್ಲೇ ನೀಡಲಾಗಿದೆ. ಈ ಸ್ಮಾರ್ಟ್ಫೋನ್ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಆಕರ್ಷಕ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಎರಡೂ ಫೋನ್‌ಗಳು IPX8 ರೇಟ್ ಮಾಡಲ್ಪಟ್ಟವು, 12MP ಮುಖ್ಯ ಕ್ಯಾಮೆರಾಗಳನ್ನು ಹೊಂದಿದೆ. ಮತ್ತು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಮೋಟೋರೊಲಾ ತನ್ನ ಮುಂದಿನ-ಪೀಳಿಗೆಯ ಫ್ಲಿಪ್ ಫೋನ್‌ಗಳಾದ ರೇಜರ್ 40 ಮತ್ತು ರೇಜರ್ 40 ಆಲ್ಟ್ರಾವನ್ನು ಅನಾವರಣಗೊಳಿಸಿದೆ. ಇದು 6.9-ಇಂಚಿನ ಫೋಲ್ಡಬಲ್ ಡಿಸ್ಪ್ಲೇಗಳೊಂದಿಗೆ 165Hz ವರೆಗೆ ರಿಫ್ರೆಶ್ ದರವನ್ನು ಹೊಂದಿದೆ. ಎರಡೂ ಫೋನ್‌ಗಳು 32MP ಮುಂಭಾಗದ ಕ್ಯಾಮರಾ ಮತ್ತು ಮಾರುಕಟ್ಟೆಯಲ್ಲಿ ಇತರ ಫೋಲ್ಡೆಬಲ್ ಸ್ಮಾರ್ಟ್ಫೋನ್ಗಳಿಗೆ ಸ್ಪರ್ಧಿಸಲು ಫ್ಲೆಕ್ಸ್ ಮೋಡ್-ರೀತಿಯ ಹಿಂಜ್ ಅನ್ನು ಒಳಗೊಂಡಿವೆ. Razr 40 ದೊಡ್ಡದಾದ 4,200mAh ಬ್ಯಾಟರಿಯನ್ನು ಪ್ಯಾಕ್ ಮಾಡಿದ್ದರೆ, Razr 40 Ultra 3,800mAh ಬ್ಯಾಟರಿಯೊಂದಿಗೆ ಬಂದಿದೆ. ಎರಡೂ ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Infinix GT 10 Pro: 108MP ಕ್ಯಾಮೆರಾ: ಬಹಿರಂಗವಾಯಿತು ಇನ್ಫಿನಿಕ್ಸ್ GT 10 ಪ್ರೊ ಸ್ಮಾರ್ಟ್‌ಫೋನ್ ಫೀಚರ್ಸ್
ಒಪ್ಪೋ ಇತ್ತೀಚೆಗಷ್ಟೆ ರೆನೋ 10 ಸರಣಿಯು ಮೂರು ಮಾದರಿಗಳನ್ನು ಪರಿಚಯಿಸಿದೆ. ಇದರಲ್ಲಿ ಒಪ್ಪೋ 10, ಒಪ್ಪೋ 10 Pro ಮತ್ತು ಒಪ್ಪೋ 10 Pro+ ಇದೆ. ಒಪ್ಪೋ 10 Pro+ 64MP ಸಂವೇದಕ ಮತ್ತು OIS ನೊಂದಿಗೆ ಅತ್ಯಧಿಕ-ರೆಸಲ್ಯೂಶನ್ನ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಇದು ಪ್ರಮುಖ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 100W ವೇಗದ ಚಾರ್ಜಿಂಗ್‌ನೊಂದಿಗೆ 4,700mAh ಬ್ಯಾಟರಿ ಮತ್ತು 32MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.
ಒಪ್ಪೋ 10 Pro ಸ್ನಾಪ್‌ಡ್ರಾಗನ್ 778G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 4,600mAh ಬ್ಯಾಟರಿ, 50MP ಮುಖ್ಯ ಕ್ಯಾಮೆರಾ ಮತ್ತು 80W ವೇಗದ ಚಾರ್ಜಿಂಗ್ ಇದೆ. ಡೈಮೆನ್ಸಿಟಿ 7050 ಚಿಪ್‌ಸೆಟ್‌ನೊಂದಿಗೆ ರಿಲೀಸ್ ಆದ ಬೇಸ್ ಮಾಡೆಲ್ ರೆನೋ 10 64MP ಮುಖ್ಯ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದೆ.
ನಥಿಂಗ್ ತನ್ನ ಎರಡನೇ ಸ್ಮಾರ್ಟ್‌ಫೋನ್ ಅನ್ನು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಈ ತಿಂಗಳು ರಿಲೀಸ್ ಮಾಡಿದೆ. ನಥಿಂಗ್ ಫೋನ್ (2) ಸ್ನಾಪ್‌ಡ್ರಾಗನ್ 8+ Gen 1 ಫ್ಲ್ಯಾಗ್‌ಶಿಪ್ ಚಿಪ್‌ಸೆಟ್, ದೊಡ್ಡದಾದ 4,700mAh ಬ್ಯಾಟರಿ ಮತ್ತು ವೇಗವಾದ 45W ಚಾರ್ಜಿಂಗ್ ಅನ್ನು ಒಳಗೊಂಡಿದೆ. 6.7-ಇಂಚಿನ LTPO AMOLED 120Hz ಡಿಸ್ಪ್ಲೇ ನೀಡಲಾಗಿದೆ. ಕ್ಯಾಮರಾಕ್ಕೆ ಸಂಬಂಧಿಸಿದಂತೆ, ನಥಿಂಗ್ ಫೋನ್ (2) ಹಿಂಭಾಗದಲ್ಲಿ ಡ್ಯುಯಲ್ 50MP ಕ್ಯಾಮೆರಾಗಳು ಮತ್ತು 32MP ಸೆಲ್ಫೀ ಕ್ಯಾಮೆರಾ ಆಯ್ಕೆ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ