Best Laptops: ಭಾರತದಲ್ಲಿ 40,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ

| Updated By: Vinay Bhat

Updated on: Jul 07, 2022 | 11:47 AM

ಕೆಲ ಲ್ಯಾಪ್​ಟಾಪುಗಳಲ್ಲಿ ನಿಮಗೆ ಬೇಕಾದ ಎಲ್ಲ ಫೀಚರುಗಳು ಇರಲ್ಲ. ಹಾಗೆಯೇ ಎಲ್ಲವೂ ಇದ್ದರೆ ಬೆಲೆ ಸಿಕ್ಕಾಪಟ್ಟೆ ಜಾಸ್ತಿ ಇರುತ್ತದೆ. ಇಂಥ ಸಂದರ್ಭದಲ್ಲಿ ನೀವು 40,000 ರೂ. ಒಳಗೆ ಸಿಗುತ್ತಿರುವ ಈ ಒಳ್ಳೆಯ ಲ್ಯಾಪ್​ಟಾಪ್​​ಗಳತ್ತ ಖಂಡಿತವಾಗಿಯೂ ಗಮನಹರಿಸಬಹುದು.

Best Laptops: ಭಾರತದಲ್ಲಿ 40,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ
Laptops
Follow us on

ಲ್ಯಾಪ್​​ಟಾಪ್ (Laptop) ಖರೀದಿಸುವುದಕ್ಕೆ ಮೊದಲೆಲ್ಲ ಬಳಕೆದಾರರಿಗೆ ಬೆಲೆಯೇ ಒಂದು ದೊಡ್ಡ ವಿಚಾರವಾಗಿರುತ್ತಿತ್ತು. ಆದರೆ ಕಾಲಕ್ರಮೇಣ ಟ್ರೆಂಡ್ (trend) ಬದಲಾಗುತ್ತಾ ಬಂದಿದ್ದು ಈಗಂತು ಅತ್ಯಂತ ಕಡಿಮೆ ಬೆಲೆಯಲ್ಲಿ ಲ್ಯಾಪ್​​ಟಾಪ್​​ಗಳನ್ನು ಖರೀದಿಸಬಹುದು. ಅಲ್ಲದೆ ಕೊರೊನಾ (Corona) ಕಾರಣದಿಂದ ಹೆಚ್ಚಿನವರು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್​ಟಾಪ್​ ತಯಾರಿಕೆ ಮಾಡುವ ಕಂಪನಿಗಳು ಕೂಡ ಜನರಿಗೆ ಕೈಗೆಟಕುವ ಬೆಲೆಗಳಲ್ಲಿ ತಮ್ಮ ಬ್ರಾಂಡೆಡ್ ಲ್ಯಾಪ್​ಟಾಪ್​​ಗಳನ್ನು ಮಾರಾಟ ಮಾಡುತ್ತಿವೆ. ಆದರೆ, ಕೆಲ ಲ್ಯಾಪ್​ಟಾಪುಗಳಲ್ಲಿ ನಿಮಗೆ ಬೇಕಾದ ಎಲ್ಲ ಫೀಚರುಗಳು ಇರಲ್ಲ. ಹಾಗೆಯೇ ಎಲ್ಲವೂ ಇದ್ದರೆ ಬೆಲೆ ಸಿಕ್ಕಾಪಟ್ಟೆ ಜಾಸ್ತಿ ಇರುವುದರಿಂದ ಕಕ್ಕಾಬಿಕ್ಕಿಯಾಗುವಂತಾಗುತ್ತದೆ. ಇಂಥ ಸಂದರ್ಭದಲ್ಲಿ ನೀವು 40,000 ರೂ. ಒಳಗೆ ಸಿಗುತ್ತಿರುವ ಈ ಒಳ್ಳೆಯ ಲ್ಯಾಪ್​ಟಾಪ್​​ಗಳತ್ತ ಖಂಡಿತವಾಗಿಯೂ ಗಮನಹರಿಸಬಹುದು.

ಏಸಸ್ ವಿವೊಬುಕ್ 14 ಲ್ಯಾಪ್‌ಟಾಪ್ ನಿಮ್ಮ ಎಲ್ಲಾ ದೈನಂದಿನ ಕೆಲಸದ ಅಗತ್ಯಗಳನ್ನು ಪೂರೈಸಬಲ್ಲದು. ಇದು 35.56 ಸೆಂಮೀ ಎಲ್ಇಡಿ – ಬ್ಯಾಕ್ಲಿಟ್ ಎಲ್ಸಿಡಿ ಹೊಂದಿದೆ. ಇಂಟೆಲ್ ಪೆಂಟಿಯಮ್ ಸಿಲ್ವರ್ N5030 ಪ್ರೊಸೆಸರ್ ಮತ್ತು 4GB RAM ಮತ್ತು 256GB ಸ್ಟೋರೇಜ್ ಹೊಂದಿದೆ. ತುಂಬಾ ತೆಳುವಾದ ಮತ್ತು ಕಡಿಮೆ ತೂಕದ ಲ್ಯಾಪ್‌ಟಾಪ್ ಇದಾಗಿದೆ. ಇದರಲ್ಲಿ, ನಿಮಗೆ ಪ್ರಿ ಲೋಡೆಡ್ ಆಗಿರುವ, ಲೈಫ್ ಟೈಮ್ ವ್ಯಾಲಿಡಿಟಿ ಹೊಂದಿರುವ ವಿಂಡೋಸ್ 10 ಹೋಮ್, ಎಂಎಸ್ ಆಫೀಸ್ ಹೋಮ್ ಸಾಫ್ಟ್‌ವೇರ್​​ಗಳು ಸಿಗುತ್ತವೆ. ಇದರ ಬೆಲೆ 31,990 ರೂ. ಆಗಿದೆ.

Instagram, Facebook messenger down: ಸ್ಥಗಿತಗೊಂಡ ಇನ್​ಸ್ಟಾಗ್ರಾಮ್-ಫೇಸ್​ಬುಕ್ ಮೆಸೇಜಿಂಗ್​ ಆ್ಯಪ್

ಇದನ್ನೂ ಓದಿ
Reliance Jio: ರಿಲಯನ್ಸ್ ಜಿಯೋದಿಂದ ಉಚಿತ ನೆಟ್​ಫ್ಲಿಕ್ಸ್​ ಚಂದಾದಾರಿಕೆ: ಈ ಆಫರ್ ಮಿಸ್ ಮಾಡ್ಬೇಡಿ
Xiaomi 12S series: ಒಂದಲ್ಲ ಎರಡಲ್ಲ ಬರೋಬ್ಬರಿ 4 ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಿದ ಶವೋಮಿ: ಯಾವುವು?, ಬೆಲೆ ಎಷ್ಟು?
Infinix Note 12 5G: ಬಜೆಟ್ ಬೆಲೆಯ ಸ್ಮಾರ್ಟ್​​ಫೋನ್ ಕಿಂಗ್ ಇನ್ಫಿನಿಕ್ಸ್​ನಿಂದ ನೋಟ್‌ 12 5G ಬಿಡುಗಡೆಗೆ ಸಿದ್ಧತೆ
OnePlus Nord 2T: 50MP ಕ್ಯಾಮೆರಾ, 80W ಫಾಸ್ಟ್ ಚಾರ್ಜರ್: ಒನ್​​ಪ್ಲಸ್ ನಾರ್ಡ್ 2T ಹೇಗಿದೆ?, ಖರೀದಿಸಬಹುದೇ?

ಲೆನೋವಾ ಐಡಿಯಾಪ್ಯಾಡ್ C340 (81N60042IN) ಲ್ಯಾಪ್​​ಟಾಪ್ ನಿಮಗೆ 39,990 ರೂಪಾಯಿ ಬೆಲೆಗೆ ಸಿಗುತ್ತದೆ. ವಿಶೇಷ ಎಂದರೆ ಇದು ಟಚ್ ಸ್ಕ್ರೀನ್ ಲ್ಯಾಪ್​ಟಾಪ್ ಆಗಿದೆ. ಇದರಲ್ಲಿ AMD Ryzen 3 3200U CPU ಜೊತೆಗೆ 4GB RAM ಮತ್ತು 256GB SSD ಇರುತ್ತದೆ. ಇದು 14-ಇಂಚಿನ IPS LCD ಟಚ್ ಸ್ಕ್ರೀನ್ ಜೊತೆಗೆ FHD ರೆಸಲ್ಯೂಷನ್ ಇರುತ್ತದೆ. ಹಾಗಾಗಿ ಪೋರ್ಟೇಬಲ್ ಮತ್ತು ಕೈಗೆಟುಕುವ ಬೆಲೆಯ ಟಚ್ ಸ್ಕ್ರೀನ್ ವ್ಯವಸ್ಥೆ ಲ್ಯಾಪ್ ಟಾಪ್ ನಲ್ಲಿ ಇರುತ್ತದೆ.

ಈ ಹೆಚ್​ಪಿ ಕ್ರೋಮ್ ಬುಕ್ ಲ್ಯಾಪ್​ಟಾಪ್ ಟಚ್ ಸ್ಕ್ರೀನ್ ಹೊಂದಿರುವ ಉತ್ತಮ ಗುಣಮಟ್ಟದ ಲ್ಯಾಪ್​ಟಾಪ್ ಆಗಿದೆ. ಇದರಲ್ಲಿ ವಾಯ್ಸ್ ಎನೆಬಲ್ಡ್ ಗೂಗಲ್ ಅಸಿಸ್ಟೆಂಟ್ ಸಹ ಇರುವುದರಿಂದ ನೀವು ನಿಮ್ಮ ಕೈಗಳಿಂದ ಕಂಪ್ಯೂಟರ್ ಟಚ್ ಮಾಡದೆಯೇ ಯಾವುದೇ ಕಮಾಂಡ್ ನೀಡಬಹುದು. ಇದರಲ್ಲಿ, ರಿಮೈಂಡರ್​​ಗಳನ್ನು ಸೆಟ್ ಮಾಡಬಹುದು ಹಾಗೂ ನಿಮ್ಮ ಸ್ಮಾರ್ಟ್ ಹೋಂ ವ್ಯವಸ್ಥೆಯನ್ನು ಕೂಡ ನೀವಿದರ ಮೂಲಕ ನಿಯಂತ್ರಿಸಬಹುದು. 40 ಸಾವಿರ ರೂಪಾಯಿ ಬಜೆಟ್ ಒಳಗಡೆ ಸಿಗುತ್ತಿರುವ ಈ ಲ್ಯಾಪ್​​ಟಾಪ್ ನಲ್ಲಿ 14 ಇಂಚಿನ ಸ್ಕ್ರೀನ್, 4GB RAM ಮತ್ತು 64GB SSD ಸ್ಟೋರೇಜ್ ಇದೆ. ನೀವು ವರ್ಕ್ ಫ್ರಂ ಹೋಂ ಮಾಡುತ್ತಿದ್ದರೆ ಈ ಲ್ಯಾಪ್​​​ಟಾಪ್ ನಿಮ್ಮ ಕೆಲಸವನ್ನು ಸಾಕಷ್ಟು ಹಗುರಗೊಳಿಸುತ್ತದೆ.

ಮೈಕ್ರೋ ಸಾಫ್ಟ್ ಸರ್ಫೇಸ್ ಗೋ (MHN-00015) ಲ್ಯಾಪ್​​ಟಾಪ್ ಇಂಟೆಲ್ ಪ್ರೀಮಿಯಂ ಗೋಲ್ಡ್ ಪ್ರೊಸೆಸರ್ ಜೊತೆಗೆ 4GB RAM ಮತ್ತು 64GB eMMC ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಈ ಮಾಡೆಲ್ ಕಾಂಪ್ಯಾಕ್ಟ್ 10-ಇಂಚಿನ ಟಚ್ ಸ್ಕ್ರೀನ್ ಹೊಂದಿದೆ ಮತ್ತು ಇದರ ಬೆಲೆ 29,990 ರೂಪಾಯಿ. ಇದನ್ನು ಸ್ಟ್ಯಾಂಡ್ ಅಲೋನ್ ಟ್ಯಾಬ್ಲೆಟ್ ನಂತೆ ಇದನ್ನು ಬಳಕೆ ಮಾಡಬಹುದು ಅಥವಾ ಎಕ್ಸ್ಟರ್ನಲ್ ಕೀಬೋರ್ಡ್ ಫೋಲಿಯೋವನ್ನು ಈ ಲ್ಯಾಪ್ ಟಾಪ್ ಗೆ ಕನೆಕ್ಟ್ ಮಾಡಿಕೊಳ್ಳಬಹುದು.

ಡೆಲ್ 15 (2021) ಲ್ಯಾಪ್‌ಟಾಪ್‌ನಲ್ಲಿ ನಿಮಗೆ 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯ ಸಿಗುತ್ತಿದೆ. ಈ ಫುಲ್ ಎಚ್‌ಡಿ ಲ್ಯಾಪ್‌ ಟಾಪ್ 11ನೇ ಜನರೇಶನ್ ಇಂಟೆಲ್ ಕೋರ್ i3-1115G4 ಪ್ರೊಸೆಸರ್ ಹೊಂದಿರುವುದರಿಂದ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. 15.6-ಇಂಚಿನ ಸ್ಕ್ರೀನ್ ಆಂಟಿ-ಗ್ಲೇರ್ ಮತ್ತು UHD ಗ್ರಾಫಿಕ್ಸ್‌ ಫೀಚರ್​​ಗಳನ್ನು ಒಳಗೊಂಡಿದೆ. ಇದರ ಬೆಲೆ 40,690 ರೂ. ಆಗಿದೆ.

Best 5G Smartphone: ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್ 5G ಸ್ಮಾರ್ಟ್​​ಫೋನ್​ಗಳು ಇಲ್ಲಿದೆ ನೋಡಿ