ಬಹುಭಾಷಾ ಬುದ್ಧಿವಂತಿಕೆ ಹೊಂದಿರುವ ಅನುಷ್ಕಾ; ಇದು ಭಾರತದ ಬಜೆಟ್ ಸ್ನೇಹಿ ಹುಮನಾಯ್ಡ್ ರೋಬೋಟ್

ರೋಬೊಟಿಕ್ಸ್ ಅಥವಾ ಮೆಕಾಟ್ರಾನಿಕ್ಸ್ ಕೋರ್ಸ್‌ಗಳ ಕುರಿತು ಮಾಹಿತಿಗಾಗಿ ನೀವು ಉತ್ತರ ಪ್ರದೇಶದ ಕೃಷ್ಣಾ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಕೆಐಇಟಿ) ಕ್ಯಾಂಪಸ್‌ಗೆ ಭೇಟಿ ನೀಡಿದರೆ, ನೀವು ಕೃತಕ ಬುದ್ಧಿಮತ್ತೆ (AI)-ಚಾಲಿತ ಹುಮನಾಯ್ಡ್ ರೋಬೋಟ್ ರಿಸೆಪ್ಷನಿಸ್ಟ್ ಅನುಷ್ಕಾ ಅವರೊಂದಿಗೆ ಸಂವಹನ ನಡೆಸಬಹುದು.ದವಡೆ ಮತ್ತು ಕತ್ತಿನ ಚಲನೆಗಳ ಜೊತೆಗೆ 50 ಕ್ಕೂ ಹೆಚ್ಚು ಕೈ ಸನ್ನೆಗಳು, 30 ಕಣ್ಣಿನ ಸನ್ನೆಗಳನ್ನು ಪ್ರದರ್ಶಿಸುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾದ ಅನುಷ್ಕಾ ಬಗ್ಗೆ ಮತ್ತಷ್ಟು ತಿಳಿಯೋಣ ಬನ್ನಿ

ಬಹುಭಾಷಾ ಬುದ್ಧಿವಂತಿಕೆ ಹೊಂದಿರುವ ಅನುಷ್ಕಾ; ಇದು ಭಾರತದ ಬಜೆಟ್ ಸ್ನೇಹಿ ಹುಮನಾಯ್ಡ್ ರೋಬೋಟ್
ಅನುಷ್ಕಾ ಹುಮನಾಯ್ಡ್

Updated on: Sep 09, 2024 | 2:29 PM

2010ರಲ್ಲಿ ರಜನಿಕಾಂತ್ ನಟನೆಯ ಎಂದಿರನ್ (ತಮಿಳು) ರೋಬೋಟ್ ಬಗ್ಗೆ ಇರುವ ಚಿತ್ರವಾಗಿತ್ತು. ಆನಂತರ ಮಲಯಾಳಂನಲ್ಲಿ ಆ್ಯಂಡ್ರಾಯ್ಡ್ ಕುಂಞಪ್ಪನ್ ಎಂಬ ಸಿನಿಮಾದಲ್ಲಿ ರೋಬೋಟ್ ಎಲ್ಲರ ಮನೆಸೂರೆಗೊಂಡಿತ್ತು. ಹೆಚ್ಚಿನ ಜನರು ಹುಮನಾಯ್ಡ್ ರೋಬಟ್‌ಗಳು ಎಂದು ಹೇಳುವಾಗ ಕತೆಗಳಲ್ಲಿನ ರೋಬೋಟ್ ಬಗ್ಗೆ ಅಥವಾ ಸಿನಿಮಾ, ಸೀರಿಸ್ ನಲ್ಲಿ ಬರುವ ರೋಬೊಟ್ ಗಳ ಬಗ್ಗೆ ಯೋಚಿಸುತ್ತಾರೆ. ಇತ್ತೀಚೆಗೆ ಬಾಲಿವುಡ್ ನಲ್ಲಿ ‘ತೇರಿ ಬಾತೋಂ ಮೇ ಐಸಾ ಉಲ್ಜಾ ಜೀಯಾ’ ಎಂಬ ಚಿತ್ರ ತೆರೆಕಂಡಿತ್ತು. ಈ ಸಿನಿಮಾದಲ್ಲಿ ಹುಮನಾಯ್ಡ್ ರೋಬೋಟ್ ಯಂತ್ರದಂತೆ ಅಲ್ಲ ಥೇಟ್ ಮನುಷ್ಯರಂತೆಯೇ ಇತ್ತು. ಅದೊಂದು ರೋಬೋಟ್ ಎಂದು ನೋಡಿದ ಕೂಡಲೇ ಗೊತ್ತಾಗಲ್ಲ, ಆದರೆ ಚಾರ್ಜ್  ಮಾಡಬೇಕು. ಇದೆಲ್ಲ ಸಿನಿಮಾ ಕತೆಯಾದರೂ  ಥೇಟ್ ಮನುಷ್ಯರನ್ನೇ ಹೋಲುವ ರೋಬೋಟ್‌ಗಳು ಬರುವ ದಿನ ದೂರವಿಲ್ಲ. ಏನಿದು ಹುಮನಾಯ್ಡ್ ರೋಬೋಟ್? ಹುಮನಾಯ್ಡ್ ರೋಬೋಟ್ ಎನ್ನುವುದು ನೋಟ ಮತ್ತು ನಡವಳಿಕೆ ಎರಡರಲ್ಲೂ ಮಾನವ ದೇಹವನ್ನು ಹೋಲುವ ರೋಬೋಟ್ ಆಗಿದೆ. ಇದು ಸಾಮಾನ್ಯವಾಗಿ ತಲೆ, ಕತ್ತು, ತೋಳುಗಳು ಮತ್ತು ಕಾಲುಗಳನ್ನು ಹೊಂದಿರುತ್ತದೆ. ಇವು  ಮಾನವ ಚಲನೆ ಮತ್ತು ಪರಸ್ಪರ ಕ್ರಿಯೆಯನ್ನು ಅನುಕರಿಸುತ್ತದೆ. ಸುಧಾರಿತ ಸಂವೇದಕಗಳು, AI ಮತ್ತು ಯಂತ್ರ ಕಲಿಕೆಯೊಂದಿಗೆ ಸುಸಜ್ಜಿತವಾಗಿರುವ ಹುಮನಾಯ್ಡ್ ರೋಬೋಟ್‌ಗಳು ವಾಕಿಂಗ್, ಮಾತನಾಡುವುದು ಮತ್ತು ಪ್ರಚೋದಕಗಳಿಗೆ ಪ್ರತಿಕ್ರಿಯಿಸುವಂತಹ ಕಾರ್ಯಗಳನ್ನು ಮಾಡಲು ಸಮರ್ಥವಾಗಿವೆ ಹುಮನಾಯ್ಡ್ ರೋಬೋಟ್ ಅನುಷ್ಕಾ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಕೃಷ್ಣಾ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಕೆಐಇಟಿ) ಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ತಂಡವು ಅನುಷ್ಕಾ ಎಂಬ ಹೆಸರಿನ ಹುಮನಾಯ್ಡ್ ರೋಬೋಟ್ ನಿರ್ಮಿಸಿದೆ. ಅನುಷ್ಕಾದ ಪ್ರಸ್ತುತ ಆವೃತ್ತಿಯು ಪ್ರಾಥಮಿಕವಾಗಿ ಸಂದರ್ಶಕರನ್ನು ಸ್ವಾಗತಿಸಲು ಮತ್ತು...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ