OnePlus 10 Pro 5G: ಧಮಾಕ ಆಫರ್: ಅರ್ಧ ಗಂಟೆಯಲ್ಲಿ ಫುಲ್ ಚಾರ್ಜ್ ಆಗುವ ಈ ಫೋನಿಗೆ ಭರ್ಜರಿ ಡಿಸ್ಕೌಂಟ್

Amazon Great Indian Festival Sale: ಅಮೆಜಾನ್ ದಿ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ ಸೇಲ್​ನಲ್ಲಿ ಒನ್‌ಪ್ಲಸ್‌ 10 ಪ್ರೊ ಫೋನಿನ 8GB RAM ರೂಪಾಂತರವನ್ನು 61,999 ರೂ. ಗೆ ಖರೀದಿಸಬಹುದು. ಅಲ್ಲದೆ ಎಸ್​ಬಿಐ ಕ್ರೆಡಿಟ್ ಕಾರ್ಡ್ ಇದ್ದರೆ 5,000 ರೂ. ಗಳ ಡಿಸ್ಕೌಂಟ್ ಸಿಗಲಿದೆ.

OnePlus 10 Pro 5G: ಧಮಾಕ ಆಫರ್: ಅರ್ಧ ಗಂಟೆಯಲ್ಲಿ ಫುಲ್ ಚಾರ್ಜ್ ಆಗುವ ಈ ಫೋನಿಗೆ ಭರ್ಜರಿ ಡಿಸ್ಕೌಂಟ್
OnePlus 10 Pro
Follow us
TV9 Web
| Updated By: Vinay Bhat

Updated on:Sep 25, 2022 | 12:26 PM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ದಿ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ 2022 (Amazon Great Indian Festival Sale) ಸೇಲ್ ನಡೆಯುತ್ತಿದ್ದು ಸೆಪ್ಟೆಂಬರ್ 23ಕ್ಕೆ ಆರಂಭವಾಗಿದೆ. ಈ ತಿಂಗಳ ಅಂತ್ಯದ ವರೆಗೂ ನಡೆಯಲಿರುವ ಈ ಮೇಳದಲ್ಲಿ ಸ್ಮಾರ್ಟ್​​ಫೋನ್​ಗಳ (Smartphones) ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಮುಖ್ಯವಾಗಿ ಭಾರತದಲ್ಲಿ ಕೆಲ ತಿಂಗಳ ಹಿಂದೆ ಅನಾವರಣಗೊಂಡ ಒನ್​ಪ್ಲಸ್ ಕಂಪನಿಯ ಪವರ್​ಫುಲ್ ಸ್ಮಾರ್ಟ್​ಫೋನ್ ಒನ್​ಪ್ಲಸ್ 10 ಪ್ರೊ 5ಜಿ (OnePlus 10 Pro 5G) ಈಗ ಈ ಸೇಲ್​ನಲ್ಲಿ ಭರ್ಜರಿ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಫೋನ್ ಕೇವಲ 32 ನಿಮಿಷಗಳಲ್ಲಿ ಶೂನ್ಯದಿಂದ 100% ಚಾರ್ಜ್ ಮಾಡುತ್ತದೆ. ಹಾಗಾದರೆ ಈ ಫೋನ್ ಆಫರ್​ನಲ್ಲಿ ಎಷ್ಟು ಬೆಲೆಗೆ ಲಭ್ಯವಿದೆ ಎಂಬುದನ್ನು ನೋಡೋಣ.

ಏನಿದೆ ಆಫರ್?:

ಭಾರತದಲ್ಲಿ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ ಒಟ್ಟು ಎರಡು ಮಾದರಿಯಲ್ಲಿ ಅನಾವರಣಗೊಂಡಿತ್ತು. ಇದರ ಬೇಸ್ ಮಾಡೆಲ್‌ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 66,999 ರೂ. ಮತ್ತು 12GB RAM ಮತ್ತು 256GB ಸ್ಟೋರೇಜ್ ಮಾಡೆಲ್‌ ಆಯ್ಕೆಗೆ 71,999 ರೂ. ಬೆಲೆ ಇದೆ. ಇದೀಗ ಅಮೆಜಾನ್ ದಿ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ ಸೇಲ್​ನಲ್ಲಿ ಈ ಫೋನಿನ 8GB RAM ರೂಪಾಂತರವನ್ನು 61,999 ರೂ. ಗೆ ಖರೀದಿಸಬಹುದು. ಅಲ್ಲದೆ ಎಸ್​ಬಿಐ ಕ್ರೆಡಿಟ್ ಕಾರ್ಡ್ ಇದ್ದರೆ 5,000 ರೂ. ಗಳ ಡಿಸ್ಕೌಂಟ್ ಸಿಗಲಿದೆ. 22,000 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದೆ.

ಇದನ್ನೂ ಓದಿ
Image
Tech Tips: ಕಾಲ್ ರೆಕಾರ್ಡ್ ಮಾಡಲು ಥರ್ಡ್ ಪಾರ್ಟಿ ಆ್ಯಪ್ ಬೇಡ: ಈ ಟ್ರಿಕ್ ಫಾಲೋ ಮಾಡಿ
Image
ಫ್ಲಿಪ್​ಕಾರ್ಟ್​ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ ಐಫೋನ್ ಸರಣಿಗಳು: ಇಲ್ಲಿದೆ ಬೆಲೆಗಳ ಪಟ್ಟಿ
Image
5G Internet Launch: ಅ. 1ರಿಂದ ಭಾರತದಲ್ಲಿ 5G ಸೇವೆ ಆರಂಭ: ಪ್ರಧಾನಿ ಮೋದಿಯಿಂದ ಚಾಲನೆ
Image
Tecno Pova Neo 5G: ಭಾರತದಲ್ಲಿ ಅತಿ ಕಡಿಮೆ ದರಕ್ಕೆ ಆಕರ್ಷಕ 5G ಫೋನ್‌ ಬಿಡುಗಡೆ: ಯಾವುದು?, ಎಷ್ಟು ಬೆಲೆ?

ಏನು ವಿಶೇಷತೆ?:

ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನಿನ ವಿಶೇಷತೆ ಬಗ್ಗೆ ಗಮನಿಸುವುದಾದರೆ ಇದು 1,440×3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ QHD+ ಲಿಕ್ವಿಡ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ sRGB ಬಣ್ಣದ ಹರವುಗಳನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ, ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಪಡೆದಿದೆ. ಆಕ್ಟಾಕೋರ್ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 12 ನಲ್ಲಿ ಆಕ್ಸಿಜನ್‌ OS 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX789 ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಅಲ್ಟ್ರಾವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೋನಿ IMX615 ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ದೀರ್ಘ ಸಮಯ ಬಾಳಿಕೆ ಬರುವ ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 80W ಸೂಪರ್‌ವೂಕ್‌ ವೈರ್ಡ್ ಚಾರ್ಜಿಂಗ್ ಮತ್ತು 50W ಏರ್‌ವೂಕ್‌ ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದರ ಜೊತೆಗೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆಗಳನ್ನು ನೀಡಲಾಗಿದೆ.

ಖರೀದಿಸಬಹುದೇ?:

ಈ ಸ್ಮಾರ್ಟ್‌ಫೋನ್‌ ಅತ್ಯಂತ ಬಲಿಷ್ಠವಾದ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಹೊಂದಿದ್ದು, ನಾಲ್ಕು ಪಟ್ಟು ವೇಗದ ಕೃತಕ ಬುದ್ಧಿಮತ್ತೆ (AI) ಸಂಸ್ಕರಣೆ ಮತ್ತು ಕೊನೆಯ ತಲೆಮಾರಿನ ಸ್ನಾಪ್‌ಡ್ರಾಗನ್ ಚಿಪ್‌ಗಿಂತ 25% ಹೆಚ್ಚು ಪರಿಣಾಮಕಾರಿ ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ನೀಡಲಿದೆ. ಹೀಗಾಗಿ ಗೇಮಿಂಗ್​ಗೆ ಈ ಫೋನ್ ಹೇಳಿಮಾಡಿಸಿದಂತಿದೆ. ಅಲ್ಲದೆ IMX789 ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದ್ದು ಫೋಟೋಗ್ರಫಿ ಅದ್ಭುತವಾಗಿ ಮೂಡಿಬರುತ್ತದೆ. ಚಾರ್ಜಿಂಗ್ ಬಗ್ಗೆ ಎರಡು ಮಾತಿಲ್ಲ. 55,000 ರೂ. ಗೆ ನೀವು ಫೋನನ್ನು ಖರೀದಿಸಿದರೆ ಯಾವುದೇ ಮೊಸವಿಲ್ಲ.

Published On - 12:26 pm, Sun, 25 September 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್