Oppo Reno 6 Pro: ಒಪ್ಪೋ ರೆನೋ 6 ಪ್ರೊ, ಒಪ್ಪೋ ರೆನೋ 6 ಫೋನ್‌ಗಳು ಜುಲೈ 14ಕ್ಕೆ ಭಾರತದಲ್ಲಿ ಬಿಡುಗಡೆ, ಇಲ್ಲಿದೆ ವೈಶಿಷ್ಟ್ಯ
ಒಪ್ಪೋ ರೆನೋ 6 ಪ್ರೊ ಮತ್ತು ಒಪ್ಪೋ ರೆನೋ 6 ಫೋನ್‌ಗಳು ಜುಲೈ 14 ರಂದು ಭಾರತದಲ್ಲಿ ಬಿಡುಗಡೆಯಾಗಲಿವೆ. ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿ ಮಾಡಲಾಗಿದ್ದು, ಲಭ್ಯತೆಯನ್ನೂ ಖಚಿತಪಡಿಸಿದೆ.
ಒಪ್ಪೋ ರೆನೋ 6 ಪ್ರೊ ಮತ್ತು ಒಪ್ಪೋ ರೆನೋ 6 ಫೋನ್‌ಗಳು ಜುಲೈ 14 ರಂದು ಭಾರತದಲ್ಲಿ ಬಿಡುಗಡೆಯಾಗಲು ಎಲ್ಲ ಸಿದ್ಧತೆ ಮುಗಿಸಿವೆ. ಎರಡೂ ಫೋನ್ ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿ ಮಾಡಲಾಗಿದ್ದು, ಲಭ್ಯತೆಯನ್ನೂ ಖಚಿತಪಡಿಸಿದೆ. ಒಪ್ಪೋ ರೆನೋ 6 ಸರಣಿಯು ಈ ವರ್ಷ ಮೇ ತಿಂಗಳಲ್ಲಿ ಚೀನಾದಲ್ಲಿ ಮಾರಾಟ ಪ್ರಾರಂಭಿಸಿತು ಮತ್ತು ಈಗ ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ಚೀನಾದಲ್ಲಿ ಒಪ್ಪೊ ರೆನೋ 6, ಒಪ್ಪೋ ರೆನೋ 6 ಪ್ರೊ, ಒಪ್ಪೋ ರೆನೋ 6 ಪ್ರೊ + ಫೋನ್‌ಗಳನ್ನು ಅನಾವರಣಗೊಳಿಸಲಾಯಿತು. ಭಾರತದಲ್ಲಿ ಒಪ್ಪೋ ರೆನೋ 6 ಪ್ರೊ ಮತ್ತು ಒಪ್ಪೊ ರೆನೋ 6 ಫೋನ್‌ಗಳು ಮಾತ್ರ ಸದ್ಯಕ್ಕೆ ಬಿಡುಗಡೆ ಮಾಡುತ್ತಿರುವಂತೆ ಕಂಡುಬರುತ್ತಿದೆ. ಒಪ್ಪೋ ರೆನೋ 6 ಪ್ರೊ ಮತ್ತು ಒಪ್ಪೋ ರೆನೋ 6 ಭಾರತದಲ್ಲಿ ಜುಲೈ 14 ರಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಕಂಪೆನಿ ಪ್ರಕಟಿಸಿದೆ. ಒಪ್ಪೋ ಕ್ಯಾಮೆರಾ ವೈಶಿಷ್ಟ್ಯಗಳನ್ನು ಅದರಲ್ಲೂ ಬೊಕೆ ಫ್ಲೇರ್ ಪೋರ್ಟ್ರೇಟ್ ವಿಡಿಯೋ ಮತ್ತು ಎಐ ಹೈಲೈಟ್ ವಿಡಿಯೋದಲ್ಲಿ ಅನಾವರಣ ಮಾಡಿದೆ. ಈ ವಾರದ ಆರಂಭದಲ್ಲಿ ಫೋನ್‌ಗಳ ಬಗ್ಗೆ ಫ್ಲಿಪ್‌ಕಾರ್ಟ್‌ನಲ್ಲಿ ಮಾಹಿತಿ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಇ-ಕಾಮರ್ಸ್ ಸೈಟ್‌ನಲ್ಲಿ ಲಭ್ಯತೆಯನ್ನು ಖಚಿತಪಡಿಸಿದೆ.
ಒಪ್ಪೋ ರೆನೋ 6 ಪ್ರೊ ಮತ್ತು ಒಪ್ಪೊ ರೆನೋ 6 ಫೋನ್‌ಗಳು ತಮ್ಮ ಪ್ರತಿಸ್ಪರ್ಧಿ ಚೀನೀ ಫೋನ್ಗಳಂತೆಯೇ ಬೆಲೆಯನ್ನು ನಿಗದಿ ಮಾಡುವ ನಿರೀಕ್ಷೆಯಿದೆ. ಚೀನಾದಲ್ಲಿ, ಒಪ್ಪೋ ರೆನೋ 6 ಪ್ರೊ ಬೆಲೆ 3,499 ಯುವಾನ್ (ಸುಮಾರು ರೂ. 39,800) ಮತ್ತು ಒಪ್ಪೋ ರೆನೋ 6ಗೆ 2,799 ಯುವಾನ್ರಿಂದ ಪ್ರಾರಂಭವಾಗಬಹುದು (ಸರಿಸುಮಾರು 31,800 ರೂ.).
ಒಪ್ಪೋ ರೆನೋ 6 ಪ್ರೊ, ಒಪ್ಪೋ ರೆನೋ 6 ವಿಶೇಷಗಳು ಒಪ್ಪೋ ರೆನೋ 6 ಪ್ರೊ ಮತ್ತು ಒಪ್ಪೊ ರೆನೋ 6 ಚೀನಾದಲ್ಲಿನ ಮಾದರಿಗೆ ಹೋಲುತ್ತಿದ್ದರೆ, ಪ್ರೊ ವೇರಿಯಂಟ್ 90Hz ರಿಫ್ರೆಶ್ ದರದೊಂದಿಗೆ 6.55-ಇಂಚಿನ ಪೂರ್ಣ-ಎಚ್‌ಡಿ + ಒಎಲ್ಇಡಿ ಡಿಸ್ಪ್ಲೇಯನ್ನು ಹೊಂದಿರಲಿದೆ. ಒಪ್ಪೋ ರೆನೋ 6 ಮೊಬೈಲ್ಲ್ ಫೋನ್ 6.43 ಇಂಚಿನ ಪೂರ್ಣ-ಎಚ್‌ಡಿ + ಹೋಲ್-ಪಂಚ್ ಅಮೋಲೆಡ್ ಡಿಸ್ಪ್ಲೇಯನ್ನು 90Hz ಸ್ಕ್ರೀನ್ ರಿಫ್ರೆಶ್ ದರ ಹೊಂದಿರುತ್ತದೆ. ಪ್ರೊ ಮಾದರಿಯಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 1200 SoC ಇರಲಿದೆ. ಇದು 12GB RAM ಮತ್ತು 256GB ವರೆಗೆ ಸಂಗ್ರಹವನ್ನು ಹೊಂದಿರುತ್ತದೆ. ಒಪ್ಪೋ ರೆನೋ 6 ಅನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 900 ಎಸ್‌ಒಸಿ ನಿಯಂತ್ರಿಸಲಿದೆ, ಇದು 12 ಜಿಬಿ RAM ಮತ್ತು 256ಜಿಬಿ ಸಂಗ್ರಹದೊಂದಿಗೆ ಬರುತ್ತದೆ.
ಒಪ್ಪೋ ರೆನೋ 6 ಪ್ರೊ ಹಿಂಬದಿಯಲ್ಲಿ ನಾಲ್ಕು ಮುಖ್ಯ ಕ್ಯಾಮೆರಾಗಳೊಂದಿಗೆ 64 ಮೆಗಾಪಿಕ್ಸೆಲ್ನೊಂದಿಗೆ ಬರುತ್ತದೆ. 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು ಎರಡು 2 ಮೆಗಾಪಿಕ್ಸೆಲ್ ಹೆಚ್ಚುವರಿ ಸೆನ್ಸರ್ಗಳನ್ನು ಹೊಂದಿರಲಿದೆ. ಒಪ್ಪೊ ರೆನೋ 6 ನಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್ ಟರ್ಷಿಯುರಿ ಸೆನ್ಸರ್ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇರುವ ಸಾಧ್ಯತೆ ಇದೆ.
ಒಪ್ಪೋ ರೆನೋ 6 ಪ್ರೊ ಮೊಬೈಲ್ ಫೋನ್ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಪ್ಪೋ ರೆನೋ 6 ರಂತೆಯೇ ನೀಡುವ ಸಾಧ್ಯತೆ ಇದೆ. ಒಪ್ಪೋ ರೆನೋ 6 ಪ್ರೊ ಸ್ವಲ್ಪ ದೊಡ್ಡದಾದ 4,500 mAh ಬ್ಯಾಟರಿಯನ್ನು ಹೊಂದಿರಲಿದೆ. ಆದರೆ ಆದರೆ ಒಪ್ಪೋ ರೆನೋ 6 ಫೋನ್ 4,300 mAh ಬ್ಯಾಟರಿ ಒಳಗೊಂಡಿರಲಿದೆ. ಎರಡೂ ಫೋನ್‌ಗಳು 65W ಸ್ಪೀಡ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತವೆ.
ಇದನ್ನೂ ಓದಿ: Battlegrounds Mobile India: ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಭಾರತದಲ್ಲಿ ಅಧಿಕೃತ ಅನಾವರಣ
( Oppo Reno 6 pro and Oppo Reno 6 mobile phone all set to be launch on July 14, 2021. Here is the details about phones)
Published On - 2:39 pm, Fri, 2 July 21