Oppo A98: ಒಪ್ಪೋ ಕಂಪನಿಯ ಚೊಚ್ಚಲ 108MP ಕ್ಯಾಮೆರಾ ಫೋನಿನ ಹೆಸರು ಬಹಿರಂಗ: ಏನು ಗೊತ್ತೇ?
108MP camera Phone: ಒಪ್ಪೋ ತನ್ನ A ಸರಣಿಯಲ್ಲಿ ಒಪ್ಪೋ ಎ98 (Oppo A98) ಎಂಬ ಹೊಸ ಫೋನೊಂದನ್ನು ಅನಾವರಣ ಮಾಡಲು ತಯಾರಿ ನಡೆಸುತ್ತಿದೆ. ಇದರಲ್ಲಿ ಆಕರ್ಷಕವಾದ 108 ಮೆಗಾಫಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಬಜೆಟ್ ಹಾಗೂ ಮಧ್ಯಮ ಬೆಲೆಗೆ ಆಕರ್ಷಕ ಕ್ಯಾಮೆರಾದ ಸ್ಮಾರ್ಟ್ಫೋನ್ಗಳನ್ನು (Smartphones) ಬಿಡುಗಡೆ ಮಾಡುವುದರಲ್ಲಿ ಒಪ್ಪೋ ಕಂಪನಿಯನ್ನು ಮೀರಿಸುವರಿಲ್ಲ. ಅದು 8 ಮೆಗಾಫಿಕ್ಸೆಲ್ ಕ್ಯಾಮೆರಾ ಆಗಿದ್ದರೂ ಆ ಫೋಟೋದಲ್ಲಿ ಏನೋ ಒಂದುರೀತಿಯ ಮ್ಯಾಜಿಕ್ ಇರುತ್ತದೆ. ಈಗಾಗಲೇ ತನ್ನ ರೆನೋ ಸರಣಿಯಲ್ಲಿ ಅತ್ಯುತ್ತಮ ಕ್ಯಾಮೆರಾ ಫೋನ್ಗಳನ್ನು ರಿಲೀಸ್ ಮಾಡಿ ಯಶಸ್ಸು ಸಾಧಿಸಿರುವ ಒಪ್ಪೋ (Oppo) ಇದೀಗ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್ ಮೇಲೆ ಕಣ್ಣಿಟ್ಟಿದೆ. ಹೌದು, ಒಪ್ಪೋ ತನ್ನ A ಸರಣಿಯಲ್ಲಿ ಒಪ್ಪೋ ಎ98 (Oppo A98) ಎಂಬ ಹೊಸ ಫೋನೊಂದನ್ನು ಅನಾವರಣ ಮಾಡಲು ತಯಾರಿ ನಡೆಸುತ್ತಿದೆ. ಇದರಲ್ಲಿ ಆಕರ್ಷಕವಾದ 108 ಮೆಗಾಫಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದರಿಂದ ಈಗಾಗಲೇ ರೆಡ್ಮಿ, ಶವೋಮಿ (Xioami), ಮೋಟೋ ಕಂಪನಿಯ 108 ಮೆಗಾಫಿಕ್ಸೆಲ್ ಕ್ಯಾಮೆರಾ ಫೋನ್ಗಳಿಗೆ ನಡುಕ ಶುರುವಾಗಿದೆ.
ಒಪ್ಪೋ ಪರಿಚಯಿಸಲಿರುವ ಹೊಸ ಎ98 ಸರಣಿಯ ಫೋನ್ನಲ್ಲಿ ಕೇವಲ ಕ್ಯಾಮೆರಾ ಮಾತ್ರವಲ್ಲದೆ ಇತರೆ ಫೀಚರ್ಸ್ ಕೂಡ ಅದ್ಭುತವಾಗಿರಲಿದೆಯಂತೆ. ಇದರಲ್ಲಿ ಸ್ಕ್ರೀನ್-ಟು-ಬಾಡಿ ಅನುಮಾತ ಅತ್ಯಧಿಕ ಇರಲಿದೆ ಎಂದು ಹೇಳಲಾಗಿದೆ. ಡಿಸ್ ಪ್ಲೇ ಹಿಂದೆಂದೂ ಕಾಣದ ಮೃದುವಾದ ಅನುಭವ ನೀಡಲಿದೆ.
ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 778G ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಲಿದ್ದು, ಅಡ್ರಿನೊ 642L ಗ್ರಾಫಿಕ್ ಪ್ರೊಸೆಸರ್ ಯೂನಿಟ್ ಒಳಗೊಂಡಿರಲಿದೆ. ಜೊತೆಗೆ ಈ ಫೋನ್ ಆಂಡ್ರಾಯ್ಡ್ v12 ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗಲಿದೆ ಎಂಬ ಮಾತುಕೂಡ ಇದೆ.
ಇನ್ನು ಮುಂಭಾಗದಲ್ಲಿರುವ 16 ಮೆಗಾಫಿಕ್ಸೆಲ್ನ ಸೆಲ್ಫೀ ಕ್ಯಾಮೆರಾವು ಹೋಲ್-ಪಂಚ್ ಸ್ಲಾಟ್ ಅನ್ನು ಸಹ ಹೊಂದಿದೆ ಎಂದು ಹೇಳಲಾಗುತ್ತದೆ. ಇದರಲ್ಲಿ 5000mAh ಸಾಮರ್ಥ್ಯದ ಬ್ಯಾಟರಿ ಕೂಡ ಇರಲಿದ್ದು 67W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿರಲಿದೆ. ಸದ್ಯದಲ್ಲೇ ಬಿಡುಗಡೆ ಆಗಲಿರುವ ಈ ಫೋನಿಗೆ 22,869 ರೂ. ಗಳು ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಇನ್ನು ಕಳೆದ ವಾರವಷ್ಟೆ ಒಪ್ಪೋ ಸಂಸ್ಥೆ ಭಾರತದಲ್ಲಿ ತನ್ನ A ಸರಣಿಯಲ್ಲಿ ಹೊಸ ಒಪ್ಪೋ A17K ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿತ್ತು. ಬಜೆಟ್ ಬೆಲೆಯ ಫೋಣಿನ ದರ ಕೇವಲ 10,499 ರೂ.. ಇದ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್ LCD ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ನಿಂದ ಕೂಡಿದೆ. ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಸ್ಮಾರ್ಟ್‌ಫೋನ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ವಿಡಿಯೋ ಕರೆಗಳು ಹಾಗೂ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ನೈಟ್ ಮೋಡ್, ಟೈಮ್ ಲಾಪ್ಸ್, ಎಕ್ಸಪರ್ಟ್, ಪನೋರಮಾ ಮತ್ತು ಗೂಗಲ್ ಲೆನ್ಸ್ ಇದೆ. ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.