ಪ್ಲೇಸ್ಟೋರ್​ಗೆ ಹೀಗೆ ಬಂದು ಹಾಗೆ ಹೋದ ಪೇಟಿಎಂನ ಪೈಪೈ; ಯಾಕೆ ಹೀಗಾಯ್ತು…

PaiPai App Removed from Play Store: ಪೈ ಪ್ಲಾಟ್​ಫಾರ್ಮ್ಸ್ ನಿರ್ಮಿಸುತ್ತಿರುವ ಪೈ ಪೈ ಎಂಬ ಆ್ಯಪ್ ಇತ್ತೀಚೆಗೆ ಆಂಡ್ರಾಯ್ಡ್ ಪ್ಲೇಸ್ಟೋರ್​ನಲ್ಲಿ ಲಿಸ್ಟ್ ಆಗಿತ್ತು. ಬಳಿಕ ದಿಢೀರನೇ ಈ ಆ್ಯಪ್ ಅನ್ನು ಅಲ್ಲಿಂದ ತೆಗೆದುಹಾಕಲಾಗಿದೆ. ಈ ಆ್ಯಪ್ ಇನ್ನೂ ಬೀಟಾ ಹಂತದಲ್ಲಿದೆ. ಹೊಸ ಫೀಚರ್​ಗಳನ್ನು ಸೇರಿಸಲಾಗುತ್ತಿದೆ. ಸೀಮಿತ ಬಳಕೆದಾರರ ಗುಂಪಿನಲ್ಲಿ ಈ ಆ್ಯಪ್​ನ ಪರೀಕ್ಷೆ ಆಗುತ್ತಿದೆ. ಪೂರ್ಣಪ್ರಮಾಣದ ಆ್ಯಪ್ ಸಿದ್ಧವಾದ ಬಳಿಕ ಪ್ಲೇಸ್ಟೋರ್​ಗೆ ಬಿಡುಗಡೆ ಆಗಬಹುದು ಎನ್ನುವ ಮಾಹಿತಿ ಕೇಳಿಬಂದಿದೆ.

ಪ್ಲೇಸ್ಟೋರ್​ಗೆ ಹೀಗೆ ಬಂದು ಹಾಗೆ ಹೋದ ಪೇಟಿಎಂನ ಪೈಪೈ; ಯಾಕೆ ಹೀಗಾಯ್ತು...
ಪೇಟಿಎಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 19, 2024 | 12:13 PM

ನವದೆಹಲಿ, ಏಪ್ರಿಲ್ 19: ಪೇಟಿಎಂನ ಸೋದರ ಸಂಸ್ಥೆಯಾದ ಪೈ ಪ್ಲಾಟ್​ಫಾರ್ಮ್ಸ್ ನಿರ್ಮಿಸಿರುವ ಪೈಪೈ (PaiPai) ಎಂಬ ಆ್ಯಪ್ ಗೂಗಲ್ ಪ್ಲೇಸ್ಟೋರ್​ನಲ್ಲಿ ತಾತ್ಕಾಲಿಕವಾಗಿ ಬಂದು ಹೋದ ಘಟನೆ ಆಗಿದೆ. ಸರ್ಕಾರದಿಂದ ಅಭಿವೃದ್ಧಿಯಾಗಿರುವ ಒಎನ್​ಡಿಸಿ ಪ್ಲಾಟ್​ಫಾರ್ಮ್​​ಗೆ ಪೈಪೈ ಆ್ಯಪ್ ಅನ್ನು ರೂಪಿಸಲಾಗಿದೆ. ವರದಿಗಳ ಪ್ರಕಾರ ಪೈಪೈ ಅನ್ನು ಪ್ಲೇಸ್ಟೋರ್​ನಲ್ಲಿ ತಪ್ಪಿ ಸೇರಿಸಲಾಗಿತ್ತು. ಈ ಆ್ಯಪ್ ಇನ್ನೂ ಬೀಟಾ ಹಂತದಲ್ಲಿದೆ. ಹೀಗಾಗಿ ಪ್ಲೇ ಸ್ಟೋರ್​ನಿಂದ ಆದಷ್ಟು ಬೇಗ ಅದನ್ನು ತೆಗೆಯಲಾಗಿದೆ. ಆ್ಯಪ್ ಅಭಿವೃದ್ದಿ ಪೂರ್ಣಗೊಂಡ ಬಳಿಕ ಪ್ಲೇಸ್ಟೋರ್​ಗೆ ಅದನ್ನು ಸೇರಿಸಲಾಗುವುದು ಎಂಬ ಮಾಹಿತಿ ತಿಳಿದುಬಂದಿದೆ.

ಪೇಟಿಎಂನ ಮಾಲಕ ಸಂಸ್ಥೆಯಾದ ಒನ್97 ಕಮ್ಯೂನಿಕೇಶನ್ಸ್​ಗೆ ಸೇರಿದ ಪೈ ಪ್ಲಾಟ್​ಫಾರ್ಮ್ಸ್ ಈ ಪೈ ಪೈ ಆ್ಯಪ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಸದ್ಯ ಬೀಟಾ ಆವೃತ್ತಿ ಇದಾಗಿದ್ದು, ಸೀಮಿತ ಬಳಕೆದಾರರ ಗುಂಪಿನಲ್ಲಿ ಇದರ ಪರೀಕ್ಷೆ ನಡೆಯುತ್ತಿದೆ. ಹೆಚ್ಚೆಚ್ಚು ಫೀಚರ್​ಗಳನ್ನು ಸೇರಿಸಲಾಗುತ್ತಿದೆ. ಇದರ ಅಂತಿಮ ಆವೃತ್ತಿ ವಿಭಿನ್ನವಾಗಿರಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಚೀನಾದಲ್ಲಿ ವಾಟ್ಸಾಪ್ ನಿಷೇಧ; ಆ್ಯಪಲ್​ನ ಸ್ಟೋರ್​ನಿಂದಲೂ ಹೊರಕ್ಕೆ

‘ಹೊಸ ಕಾನ್ಸಪ್ಟ್​ಗಳನ್ನು ಅನ್ವೇಶಿಸುತ್ತಲೇ ಇರುತ್ತೇವೆ. ಅದರ ಭಾಗವಾಗಿ ಈ ಆ್ಯಪ್ ಇದೆ. ಪೈ ಪೈ ಆ್ಯಪ್ ಅನ್ನು ಮತ್ತೆ ಯಾವಾಗ ಬಿಡುಗಡೆ ಮಾಡುತ್ತೇವೆ ಎಂದು ಸದ್ಯಕ್ಕೆ ತಿಳಿಸಲು ಆಗುವುದಿಲ್ಲ’ ಎಂದು ಪೈ ಪೈ ಕಂಪನಿಯ ವಕ್ತಾರರು ಹೇಳಿದ್ದಾರೆ.

ಎರಡು ವಾರದ ಹಿಂದೆ ಪೈ ಪೈನ ಬೀಟಾ ಆವೃತ್ತಿಯ ಆ್ಯಪ್ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಿಸ್ಟ್ ಆಗಿತ್ತು. ಅದನ್ನು ತೆಗೆದುಹಾಕುವಷ್ಟರಲ್ಲಿ ಹಲವು ಜನರು ಡೌನ್​ಲೋಡ್ ಮಾಡಿಕೊಂಡಿದ್ದರು. ಹಾಗೆ ಇನ್ಸ್​ಟಾಲ್ ಆದ ಪೈ ಪೈ ಆ್ಯಪ್ ಈಗ ಸ್ವಯಂ ಆಗಿ ಲಾಗೌಟ್ ಆಗಿದೆ.

ಇದನ್ನೂ ಓದಿ: ಭಾರತದ ಮೊದಲ ಹಳ್ಳಿ ಕೌರಿಕ್, ಗುಯೇಗೆ ಮೊದಲ ಬಾರಿಗೆ ತಲುಪಿದೆ ಟೆಲಿಕಾಂ ಕನೆಕ್ಟಿವಿಟಿ

ಯಾಕಿದು ಪೈ ಹೆಸರು?

ಪೇಟಿಎಂನ ಸೋದರ ಸಂಸ್ಥೆಗಳಾದ ಪೈ ಪ್ಲಾಟ್​ಫಾರ್ಮ್ಸ್, ಈಗ ಪೈ ಪೈ ಆ್ಯಪ್ ಹೆಸರನವಿವೆ. ಇವುಗಳಿಗೆ ಪೈ ಎಂಬ ಹೆಸರು ಇಡಲು ಕಾರಣವಿದೆ. ಪೈ ಪ್ಲಾಟ್​ಫಾರ್ಮ್ಸ್​ನ ಮೂಲ ಹೆಸರು ಪೇಟಿಎಂ ಇಕಾಮರ್ಸ್ ಪ್ರೈ ಲಿ ಎಂದಿತ್ತು. ಒಎನ್​ಡಿಸಿಯಲ್ಲಿ ಸೆಲ್ಲರ್ ಪ್ಲಾಟ್​ಫಾರ್ಮ್ ಅಥವಾ ಮಾರಾಟಗಾರರ ಪ್ಲಾಟ್​ಫಾರ್ಮ್ ಆಗಿದ್ದ ಇನ್ನೋಬಿಟ್ ಸಲ್ಯೂಸನ್ಸ್ (ಬಿಟ್​ಸಿಲ) ಸಂಸ್ಥೆಯನ್ನು ಒನ್97 ಕಮ್ಯುನಿಕೇಶನ್ಸ್ ಖರೀದಿ ಮಾಡಿತ್ತು. ಇದಾದ ಬಳಿಕ ಪೇಟಿಎಂ ಇಕಾಮರ್ಸ್ ಕಂಪನಿಯ ಹೆಸರು ಪೈ ಪ್ಲಾಟ್​ಫಾರ್ಮ್ ಎಂದು ಬದಲಾಗಿದೆ. ಪಿಎಐ ಪದದಲ್ಲಿ ಪಿಎ ಎಂಬುದು ಪೇಟಿಎಂ ಪದದ ಮೊದಲೆರೆಡು ಅಕ್ಷರವಾಗಿದೆ. ಐ ಎಂಬುದು ಇನ್ನೋಬಿಟ್ಸ್​ನ ಮೊದಲ ಅಕ್ಷರವಾಗಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ