AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ವಾಟ್ಸಾಪ್ ನಿಷೇಧ; ಆ್ಯಪಲ್​ನ ಸ್ಟೋರ್​ನಿಂದಲೂ ಹೊರಕ್ಕೆ

Whatsapp, Threads banned in China: ಚೀನಾದಲ್ಲಿ ರಾಷ್ಟ್ರೀಯ ಭದ್ರತಾ ಅಪಾಯದ ಕಾರಣದಿಂದ ವಾಟ್ಸಾಪ್ ಮತ್ತು ಥ್ರೆಡ್ ಅನ್ನು ನಿರ್ಬಂಧಿಸಲಾಗಿದೆ. ಚೀನಾದ ಆ್ಯಪಲ್ ಸ್ಟೋರ್​ಫ್ರಂಟ್​ನಿಂದ ವಾಟ್ಸಾಪ್ ಅನ್ನು ತೆಗೆದುಹಾಕಲಾಗಿದೆ. ಚೀನಾ ಸರ್ಕಾರದ ಆದೇಶದ ಮೇರೆಗೆ ಆ್ಯಪಲ್ ಸಂಸ್ಥೆ ಈ ಕ್ರಮ ಕೈಗೊಂಡಿದೆ. ಆದರೆ, ಬೇರೆ ದೇಶಗಳ ಆ್ಯಪಲ್ ಸ್ಟೋರ್​ಫ್ರಂಟ್​ಗಳಲ್ಲಿ ವಾಟ್ಸಾಪ್ ಮತ್ತು ಥ್ರೆಡ್ ಲಭ್ಯ ಇರುತ್ತದೆ. ಇತ್ತೀಚೆಗೆ ಪಾಕಿಸ್ತಾನ ಸರ್ಕಾರ ಎಕ್ಸ್ ಆ್ಯಪ್ ಅನ್ನು ನಿಷೇಧಿಸಿತ್ತು. ಚೀನಾದಲ್ಲಿ ಈ ರೀತಿ ಸೋಷಿಯಲ್ ಮೀಡಿಯಾ ನಿರ್ಬಂಧ ಹೆಚ್ಚಿದೆ.

ಚೀನಾದಲ್ಲಿ ವಾಟ್ಸಾಪ್ ನಿಷೇಧ; ಆ್ಯಪಲ್​ನ ಸ್ಟೋರ್​ನಿಂದಲೂ ಹೊರಕ್ಕೆ
ವಾಟ್ಸಾಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 19, 2024 | 10:45 AM

Share

ಬೀಜಿಂಗ್, ಏಪ್ರಿಲ್ 19: ಚೀನಾ ಸರ್ಕಾರದ ಆದೇಶದ ಅನುಸಾರ ಆ್ಯಪಲ್ ತನ್ನ ಚೀನಾ ಆ್ಯಪ್ ಸ್ಟೋರ್​ನಿಂದ (Apple storefront) ವಾಟ್ಸಾಪ್ ಮತ್ತು ಥ್ರೆಡ್ಸ್ ಆ್ಯಪ್​ಗಳನ್ನು ತೆಗೆದುಹಾಕಿದೆ. ವಾಟ್ಸಾಪ್ ಮತ್ತು ಥ್ರೆಡ್​ನಿಂದ ದೇಶದ ಭದ್ರತೆಗೆ ಅಪಾಯ ಆಗುತ್ತದೆ ಎಂಬ ಕಾರಣಕ್ಕೆ ಆ ಎರಡು ಆ್ಯಪ್​ಗಳನ್ನು ಚೀನಾ ನಿಷೇಧಿಸಿದೆ. ಹೀಗಾಗಿ, ಆ್ಯಪಲ್​ನ ಆ್ಯಪ್ ಸ್ಟೋರ್​ನಿಂದ ಅದನ್ನು ತೆಗೆಯಲಾಗಿದೆ. ಇದು ಚೀನಾದಲ್ಲಿ ಮಾತ್ರ ಅನ್ವಯ ಆಗುತ್ತದೆ. ಭಾರತದಲ್ಲಿರುವ ಐಫೋನ್ ಬಳಕೆದಾರರಿಗೆ ಅವರ ಆ್ಯಪ್ ಸ್ಟೋರ್​ನಲ್ಲಿ ವಾಟ್ಸಾಪ್ ಲಭ್ಯ ಇರುತ್ತದೆ.

‘ನಾವು ಕಾರ್ಯಾಚರಿಸುವ ದೇಶಗಳಲ್ಲಿನ ಕಾನೂನುಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇದ್ದರೂ ಅವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗುತ್ತದೆ. ರಾಷ್ಟ್ರೀಯ ಭದ್ರತಾ ಅಪಾಯ ಇದೆ ಎಂಬ ಕಾರಣಕ್ಕೆ ಈ ಆ್ಯಪ್​ಗಳನ್ನು ಸ್ಟೋರ್​ನಿಂದ ತೆಗೆಯುವಂತೆ ಚೀನಾದ ಸೈಬರ್​ಸ್ಪೇಸ್ ಆಡಳಿತ ಆದೇಶ ಮಾಡಿದೆ,’ ಎಂದು ಆ್ಯಪಲ್ ಹೇಳಿಕೆ ನೀಡಿರುವುದಾಗಿ ಬ್ಲೂಮ್​ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ. ಚೀನಾದ ಸ್ಟೋರ್​ಫ್ರಂಟ್​ನಿಂದ ಮಾತ್ರ ವಾಟ್ಸಾಪ್ ಮತ್ತು ಥ್ರೆಡ್ ಆ್ಯಪ್​ಗಳನ್ನು ತೆಗೆಯಲಾಗಿದೆ. ಬೇರೆ ಸ್ಟೋರ್​ಫ್ರಂಟ್​ಗಳಲ್ಲಿ ಈ ಆ್ಯಪ್​ಗಳು ಲಭ್ಯ ಇರುತ್ತವೆ ಎಂದೂ ಆ್ಯಪಲ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಭಾರತದ ಮೊದಲ ಹಳ್ಳಿ ಕೌರಿಕ್, ಗುಯೇಗೆ ಮೊದಲ ಬಾರಿಗೆ ತಲುಪಿದೆ ಟೆಲಿಕಾಂ ಕನೆಕ್ಟಿವಿಟಿ

ಇತ್ತೀಚೆಗೆ ಪಾಕಿಸ್ತಾನ ಸರ್ಕಾರ ಎಕ್ಸ್ ಆ್ಯಪ್ ಅನ್ನು ಇದೇ ಭದ್ರತಾ ಅಪಾಯದ ಕಾರಣಕ್ಕೆ ನಿಷೇಧಿಸಿದೆ. ಚೀನಾದಲ್ಲೂ ಟ್ವಿಟ್ಟರ್, ಫೇಸ್​ಬುಕ್ ಚಾಲನೆಯಲ್ಲಿ ಇಲ್ಲ. 2021ರಲ್ಲಿ ಭಾರತ ಟಿಕ್ ಟಾಕ್ ಸೇರಿದಂತೆ ಹಲವು ಆ್ಯಪ್​ಗಳನ್ನು ನಿಷೇಧಿಸಿದೆ. ವಿವಿಧ ದೇಶಗಳಲ್ಲಿ ಈ ರೀತಿ ನಿರ್ದಿಷ್ಟ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್​ಗಳನ್ನು ನಿಷೇಧಿಸಲಾಗಿದೆ. ವಾಟ್ಸಾಪ್ ಮತ್ತು ಥ್ರೆಡ್ ಎರಡೂ ಕೂಡ ಮೆಟಾ ಪ್ಲಾಟ್​ಫಾರ್ಮ್ಸ್​ಗೆ ಸೇರಿದ ಅಪ್ಲಿಕೇಶನ್​ಗಳಾಗಿವೆ. ಎಕ್ಸ್ ಆ್ಯಪ್​ಗೆ ಪ್ರತಿಸ್ಪರ್ಧಿಯಾಗಿ ಥ್ರೆಡ್ ಅನ್ನು ರೂಪಿಸಲಾಗಿದೆ.

ಚೀನಾದಲ್ಲಿ ಈ ರೀತಿ ಸೋಷಿಯಲ್ ಮೀಡಿಯಾ ಮೇಲಿನಿ ನಿರ್ಬಂಧ ಬಹಳ ಕಠಿಣತರದ್ದಾಗಿದೆ. ಅಲ್ಲಿನ ಸರ್ಕಾರ ಸೋಷಿಯಲ್ ಮೀಡಿಯಾದ ಯಾವುದೇ ಮಾಹಿತಿ ತನ್ನ ಕಣ್ತಪ್ಪಿ ಹರಿದಾಡದಂತೆ ಸಾಧ್ಯವಾದಷ್ಟೂ ಎಚ್ಚರ ವಹಿಸುತ್ತದೆ. ಅದರಲ್ಲೂ ರಾಜಕೀಯವಾಗಿ ಸೂಕ್ಷ್ಮವೆನಿಸುವ ಮಾಹಿತಿಯನ್ನು ಚೀನಾ ಸರ್ಕಾರ ತಪ್ಪದೇ ನಿರ್ಬಂಧಿಸುತ್ತದೆ.

ಇದನ್ನೂ ಓದಿ: ಟ್ವಿಟ್ಟರ್ ಅಥವಾ ಎಕ್ಸ್​ನಲ್ಲಿ ನೀವು ಲೈಕ್, ರಿಪ್ಲೈ ಮಾಡಿದರೂ ಬೀಳುತ್ತೆ ಕಾಸು; ಮಸ್ಕ್ ಕೊಟ್ಟಿದ್ದಾರೆ ಬಿಕ್ ಶಾಕ್

ಆ್ಯಪಲ್ ಸಂಸ್ಥೆಗೆ ಚೀನಾ ಬಹಳ ಮುಖ್ಯವಾದ ದೇಶ. ಅಮೆರಿಕ ಬಿಟ್ಟರೆ ಅದಕ್ಕೆ ದೊಡ್ಡ ಮಾರುಕಟ್ಟೆ ಎಂದರೆ ಚೀನಾವೇ. ಅದರ ಐಫೋನ್ ಮತ್ತಿತರ ಉತ್ಪನ್ನಗಳಲ್ಲಿ ಹೆಚ್ಚಿನವು ಚೀನಾದಲ್ಲೇ ನಿರ್ಮಿತವಾಗುತ್ತವೆ. ಈ ಕಾರಣಕ್ಕೆ ಚೀನಾ ಸರ್ಕಾರದ ಆದೇಶವನ್ನು ಆ್ಯಪಲ್ ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ಆ್ಯಪಲ್ ಅನ್ನೇ ಚೀನಾ ನಿಷೇಧಿಸುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ