ಕೊನೆಗೂ ಭಾರತಕ್ಕೆ ಬಂತು ಪೋಕೋ C61 ಸ್ಮಾರ್ಟ್​ಫೋನ್: ಬೆಲೆ ಕೇವಲ 6,999 ರೂ.

POCO C61 Launched in India: ಪೋಕೋ C61 ಈಗ ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಸ್ಮಾರ್ಟ್​ಫೋನ್ ಅನ್ನು ಭಾರತದಲ್ಲಿ ಬಜೆಟ್ ಬೆಲೆಯಲ್ಲಿ ಎರಡು ಸ್ಟೋರೇಜ್ ಮೂಲಕ ಅನಾವರಣಗೊಳಿಸಲಾಗಿದೆ. ಇದರ ಬೆಲೆ 4GB + 64GB ವೇರಿಯಂಟ್‌ಗೆ 6,999 ರೂ. ಇದೆ. ಅಂತೆಯೆ 6GB+128GB ವೇರಿಯಂಟ್‌ಗೆ 7,999 ರೂ. ನಿಗದಿ ಮಾಡಲಾಗಿದೆ.

ಕೊನೆಗೂ ಭಾರತಕ್ಕೆ ಬಂತು ಪೋಕೋ C61 ಸ್ಮಾರ್ಟ್​ಫೋನ್: ಬೆಲೆ ಕೇವಲ 6,999 ರೂ.
POCO C61
Follow us
|

Updated on: Mar 26, 2024 | 2:00 PM

ಬಿಡುಗಡೆಗು ಮುನ್ನ ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ಪ್ರಸಿದ್ಧ ಪೋಕೋ ಸಂಸ್ಥೆಯ ಹೊಸ ಸ್ಮಾರ್ಟ್​ಫೋನ್ ಕೊನೆಗೂ ಅನಾವರಣಗೊಂಡಿದೆ. ಹಲವಾರು ಊಹಾಪೋಹಗಳು ಮತ್ತು ಅಧಿಕೃತ ಟೀಸರ್‌ಗಳ ನಂತರ, ಪೋಕೋ C61 (POCO C61) ಈಗ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್​ಫೋನ್ 6.71-ಇಂಚಿನ 90Hz HD+ ಡಿಸ್​ಪ್ಲೇ, ಮೀಡಿಯಾಟೆಕ್ G36 ಚಿಪ್ಸೆಟ್, ವರ್ಚುವಲ್ RAM ಬೆಂಬಲ, 5,000mAh ಬ್ಯಾಟರಿ ಸೇರಿದಂತೆ ಅನೇಕ ಫೀಚರ್​ಗಳಿಂದ ಬರುತ್ತದೆ. ಕಳೆದ ವರ್ಷ ಬಿಡುಗಡೆಯಾದ C51 ನ ಉತ್ತರಾಧಿಕಾರಿಯಾಗಿ ಈ ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಪೋಕೋ ಸಿ61 ಬೆಲೆ, ವಿಶೇಷತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಪೋಕೋ C61 ಬೆಲೆ, ಲಭ್ಯತೆ:

ಹೊಸ ಪೋಕೋ C61 ಅನ್ನು ಭಾರತದಲ್ಲಿ ಬಜೆಟ್ ಬೆಲೆಯಲ್ಲಿ ಎರಡು ಸ್ಟೋರೇಜ್ ಮೂಲಕ ಅನಾವರಣಗೊಳಿಸಲಾಗಿದೆ. ಇದರ ಬೆಲೆ 4GB + 64GB ವೇರಿಯಂಟ್‌ಗೆ 6,999 ರೂ. ಇದೆ. ಅಂತೆಯೆ 6GB+128GB ವೇರಿಯಂಟ್‌ಗೆ 7,999 ರೂ. ನಿಗದಿ ಮಾಡಲಾಗಿದೆ. ಈ ಬೆಲೆಗಳು ಮೊದಲ ಸೇಲ್​ನ ಪ್ರಯುಕ್ತ ರೂ. 500 ಕೂಪನ್ ಕೊಡುಗೆಯನ್ನು ಒಳಗೊಂಡಿವೆ. ಈ ಫೋನ್ ಮಾರ್ಚ್ 28 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.

ಭಾರತದಲ್ಲಿ ಐಫೋನ್ 14, ಐಫೋನ್ 14 ಪ್ಲಸ್ ಮೇಲೆ 22,000 ಕ್ಕಿಂತ ಅಧಿಕ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ

ಪೋಕೋ C61 ಅನ್ನು ಭಾರತೀಯ ಗ್ರಾಹಕರಿಗೆ ಎಥೆರಿಯಲ್ ಬ್ಲೂ, ಡೈಮಂಡ್ ಡಸ್ಟ್ ಬ್ಲ್ಯಾಕ್ ಮತ್ತು ಮಿಸ್ಟಿಕಲ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಪೋಕೋ C61 ಫೀಚರ್ಸ್:

ಪೋಕೋ C61 ಸ್ಮಾರ್ಟ್​ಫೋನ್ 6.71-ಇಂಚಿನ 90Hz HD+ ಡಿಸ್ಪ್ಲೇಯನ್ನು ಹೊಂದಿದೆ, ಇದನ್ನು ಗೊರಿಲ್ಲಾ ಗ್ಲಾಸ್ 3 ಮತ್ತು 500 nits ಗರಿಷ್ಠ ಬ್ರೈಟ್​ನೆಸ್​ನಿಂದ ರಕ್ಷಿಸಲಾಗಿದೆ. ಈ ಸ್ಮಾರ್ಟ್‌ಫೋನ್​ನಲ್ಲಿ ಮೃದುವಾದ ಕಾರ್ಯಕ್ಷಮತೆಗಾಗಿ ಮೀಡಿಯಾಟೆಕ್ G36 SoC ಅನ್ನು ನೀಡಲಾಗಿದೆ. ಮತ್ತು 12GB RAM (6GB ವರ್ಚುವಲ್ RAM ಅನ್ನು ಒಳಗೊಂಡಿರುತ್ತದೆ) ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.

ಕ್ಯಾಮೆರಾ ವಿಚಾರಕ್ಕೆ ಸಂಬಂಧಿಸಿದಂತೆ, ಪೋಕೋ C61 ಫೋನ್ 8MP AI ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಸೆಲ್ಫಿಗಳಿಗಾಗಿ 5MP ಫ್ರಂಟ್ ಶೂಟರ್ ಅನ್ನು ಹೊಂದಿದೆ. C61 ನ ಛಾಯಾಗ್ರಹಣ ವೈಶಿಷ್ಟ್ಯಗಳು AI ಪೋರ್ಟ್ರೇಟ್ ಮೋಡ್, ಫೋಟೋ ಮೋಡ್, ಟೈಮ್ಡ್ ಬರ್ಸ್ಟ್ ಮತ್ತು HDR ಮುಂತಾದ ವಿವಿಧ ಆಯ್ಕೆಗಳನ್ನು ಒಳಗೊಂಡಿವೆ.

Amazon Holi Sale 2024: ಬಂಪರ್ ಡಿಸ್ಕೌಂಟ್​ನಲ್ಲಿ ಸೇಲ್ ಆಗುತ್ತಿವೆ ಈ 5G ಸ್ಮಾರ್ಟ್‌ಫೋನ್ಸ್

ಪೋಕೋ C61 ಟೈಪ್-ಸಿ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಹೆಚ್ಚುವರಿ ಭದ್ರತೆಗಾಗಿ ಫೋನ್ ವೇಗದ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒದಗಿಸಲಾಗಿದೆ. ಈ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿರುವ ಟೆಕ್ನೋ ಪಾಪ್ 8, ರಿಯಲ್ ಮಿ C53 ಮತ್ತಯ ರೆಡ್ಮಿ 13C ಗೆ ಕಠಿಣ ಪೈಪೋಟಿ ನೀಡಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ