ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್‌ ಬಿಡುಗಡೆ

Realme 8s, Realme 8i: ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್​ಗಳಿಂದ ಕೂಡಿ ಕಡಿಮೆ ಬೆಲೆಗೆ ಲಭ್ಯವಿದೆ.

ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್‌ ಬಿಡುಗಡೆ
Realme 8s and Realme 8i

ಭಾರತದಲ್ಲಿ ಕಡಿಮೆ ಬೆಲೆಗೆ ಆಕರ್ಷಕ ಫೀಚರ್​ಗಳ ಸ್ಮಾರ್ಟ್​ಫೋನ್ ಪರಿಚಯಿಸಿ ಸೈ ಎನಿಸಿಕೊಂಡಿರುವ ರಿಯಲ್ ಮಿ (Realme) ಕಂಪೆನಿ ಇದೀಗ ಎರಡು ಹೊಸ ಫೋನ್ ಅನ್ನು ಅನಾವರಣ ಮಾಡಿದೆ. ರಿಯಲ್‌ಮಿ 8 ಸರಣಿ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಇದೀಗ ಅದೇ ಸರಣಿಯಲ್ಲಿ ನೂತನವಾಗಿ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G (Realme 8s, Realme 8i) ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇಂದು ಅಧಿಕೃತವಾಗಿ ವರ್ಚುವಲ್ ಕಾರ್ಯಕ್ರಮದ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್‌ಗಳು ಲಗ್ಗೆಯಿಟ್ಟಿದೆ.

ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್​ಗಳಿಂದ ಕೂಡಿ ಕಡಿಮೆ ಬೆಲೆಗೆ ಲಭ್ಯವಿದೆ. ರಿಯಲ್‌ಮಿ 8i ಒಟ್ಟು ಎರಡು ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯಕ್ಕೆ 13,999 ರೂ. ಹಾಗೂ 6GB RAM ಮತ್ತು 128GB ಸ್ಟೋರೆಜ್ ಆಯ್ಕೆಗೆ 15,999 ರೂ. ನಿಗದಿ ಮಾಡಲಾಗಿದೆ.

ಇನ್ನೂ ರಿಯಲ್ ಮಿ 8s 5G ಸ್ಮಾರ್ಟ್​ಫೋನಿನ 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ 17,999 ರೂ. ಹಾಗೂ 8GB RAM ಮತ್ತು 128GB ಸ್ಟೋರೆಜ್ ಆಯ್ಕೆಗೆ 19,999 ರೂ. ನಿಗದಿ ಮಾಡಲಾಗಿದೆ. ರಿಯಲ್ ಮಿ 8i ಸೆಪ್ಟೆಂಬರ್ 14 ರಿಂದ  ಮತ್ತು ರಿಯಲ್ ಮಿ 8s ಸೆಪ್ಟೆಂಬರ್ 13 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್, ರಿಯಲ್ ಮಿ.ಕಾಮ್ ಮತ್ತು ಪ್ರಮುಖ ರಿಟೇಲ್ ಸ್ಟೋರ್​ಗಳಲ್ಲಿ ಖರೀದಿಗೆ ಸಿಗಲಿದೆ.

ರಿಯಲ್‌ಮಿ 8i ಸ್ಮಾರ್ಟ್‌ಫೋನ್‌ ಅಧಿಕ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ರಿಯಲ್‌ಮಿ 8s 5G 6.50 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ.

ಇನ್ನೂ ರಿಯಲ್‌ಮಿ 8i ಮೀಡಿಯಾ ಟೆಕ್ ಹಿಲಿಯೊ G96 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಓಎಸ್‌ ಸಪೋರ್ಟ್‌ ಇದೆ. ಅದೇ ರೀತಿ ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್‌ ಕಳೆದ ತಿಂಗಳು ಲಾಂಚ್ ಆದ ಮೀಡಿಯಾ ಟೆಕ್ ಡೈಮೆನ್ಸಿಟಿ 810 5 ಜಿ SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 11 ಸಪೋರ್ಟ್‌ ಇದೆ.

ರಿಯಲ್‌ಮಿ 8i ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಹಾಗೂ ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇನ್ನು ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಕ್ಯಾಮೆರಾ ಇದೆ. ಅದೇ ರೀತಿ ರಿಯಲ್‌ಮಿ 8s 5G ಸ್ಮಾರ್ಟ್‌ಫೋನ್‌ ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸಲ್ ಸೆನ್ಸಾರ್ ಪಡೆದಿದ್ದು, ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್​ನಿಂದ ಕೂಡಿದೆ.

ಬ್ಯಾಟರಿ ವಿಚಾರಕ್ಕೆ ಬರುವುದಾದರೆ ರಿಯಲ್‌ಮಿ 8i ಮತ್ತು ರಿಯಲ್‌ಮಿ 8s 5G ಈ ಎರಡೂ ಸ್ಮಾರ್ಟ್‌ಫೋನ್‌ಗಳು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿವೆ. ಈ ಪೈಕಿ ರಿಯಲ್‌ಮಿ 8i  13W ಮತ್ತು ರಿಯಲ್ ಮಿ 8ಎಸ್ 33W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

Facebook: ಹೊಸ ಸ್ಮಾರ್ಟ್​ ಗ್ಲಾಸ್ ಪರಿಚಯಿಸಲಿರುವ ಫೇಸ್​ಬುಕ್: ಏನಿದರ ವಿಶೇಷತೆ?

ಕನ್ನಡವನ್ನು ಕುರೂಪಿ ಭಾಷೆ ಎಂದು ತೋರಿಸಿದ್ದಕ್ಕೆ ಕರ್ನಾಟಕ ಹೈಕೋರ್ಟ್ ಕ್ಷಮೆಯಾಚಿಸಿದ ಗೂಗಲ್

(Realme 8s and Realme 8i launched in India Today with MediaTek chipsets and 5000mAh Bettery price specs)

Click on your DTH Provider to Add TV9 Kannada