ಪ್ರಸಿದ್ಧ ರಿಯಲ್ ಮಿ ಕಂಪನಿ ತನ್ನ ನಾರ್ಜೊ 60x ಸ್ಮಾರ್ಟ್ಫೋನನ್ನು ಭಾರತದಲ್ಲಿ ಸೆಪ್ಟೆಂಬರ್ 12 ರಂದು ಬಿಡುಗಡೆ ಮಾಡಲಾಗುವುದು ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ದೇಶದಲ್ಲಿ ತನ್ನ C-ಸರಣಿ ಅಡಿಯಲ್ಲಿ ಹೊಸ ರಿಯಲ್ ಮಿ C51 (Realme C51) ಮೊಬೈಲ್ ಅನಾವರಣ ಮಾಡಿದೆ. ಡ್ಯುಯಲ್-ಟೆಕ್ಸ್ಚರ್ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್ಫೋನ್ನಲ್ಲಿ ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ವಿಶೇಷ ಎಂದರೆ ಈ ಫೋನ್ ಬಜೆಟ್ ಬೆಲೆಗೆ ಲಭ್ಯವಿದೆ. ಹಾಗಾದರೆ, ರಿಯಲ್ ಮಿ C51 ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಭಾರತದಲ್ಲಿ ರಿಯಲ್ ಮಿ C51 ಸ್ಮಾರ್ಟ್ಫೋನ್ ಸದ್ಯಕ್ಕೆ ಕೇವಲ ಒಂದು ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM + 64GB ಸ್ಟೋರೇಜ್ ಸಾಮರ್ಥ್ಯಕ್ಕೆ ಕೇವಲ 8,999 ರೂ. ನಿಗದಿ ಮಾಡಲಾಗಿದೆ. ಇದು ಕಾರ್ಬಲ್ ಬ್ಲಾಕ್ ಮತ್ತು ಮಿಂಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಸೆಪ್ಟೆಂಬರ್ 4 ರಂದು ಅಂದರೆ ಇಂದು ಸಂಜೆ 6 ಗಂಟೆಯಿಂದ ಈ ಫೋನ್ ಮೊದಲ ಸೇಲ್ ಆರಂಭಿಸಲಿದೆ. ಫ್ಲಿಪ್ಕಾರ್ಟ್ ಮತ್ತು ರಿಯಲ್ ಮಿ ವೆಬ್‌ಸೈಟ್ ಮೂಲಕ ಖರೀದಿಸಬಹುದು. ಕಂಪನಿಯು ICICI ಬ್ಯಾಂಕ್ ಮತ್ತು HDFC ಕಾರ್ಡ್ ಮೂಲಕ ಖರೀದಿಸಿದರೆ 500 ರೂ. ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ.
ಡಿಸ್‌ಪ್ಲೇ: ರಿಯಲ್ ಮಿ C51 ಫೋನ್ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್, 90Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 560 nits ವರೆಗೆ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 6.7-ಇಂಚಿನ HD+ ಡಿಸ್ ಪ್ಲೇಯನ್ನು ಹೊಂದಿದೆ.
ಮೊನ್ನೆಯಷ್ಟೆ ರಿಲೀಸ್ ಆದ 6,000mAh ಬ್ಯಾಟರಿಯ ಈ ಫೋನ್ ಮೇಲೆ ಬಂಪರ್ ಡಿಸ್ಕೌಂಟ್
ಪ್ರೊಸೆಸರ್: ಈ ಫೋನ್ ಯುನಿಸಾಕ್ T612 ಆಕ್ಟಾ-ಕೋರ್ 12nm ಪ್ರೊಸೆಸರ್ ಜೊತೆಗೆ Mali-G57 GPU ನಿಂದ ಚಾಲಿತವಾಗಿದೆ.
RAM ಮತ್ತು ಸ್ಟೋರೇಜ್: 4GB LPDDR4X RAM ಮತ್ತು 64GB ಸಂಗ್ರಹಣೆಯನ್ನು ಮೈಕ್ರೊ SD ಕಾರ್ಡ್ ಜೊತೆಗೆ 2TB ವರೆಗೆ ವಿಸ್ತರಿಸಬಹುದಾಗಿದೆ. 4GB ವರ್ಚುವಲ್ RAM ಬೆಂಬಲವಿದೆ. ಇದು ರಿಯಲ್ ಮಿ ಯುಐ ಟಿ ಆವೃತ್ತಿಯೊಂದಿಗೆ ಆಂಡ್ರಾಯ್ಡ್ 13 ಮೂಲಕ ರನ್ ಆಗುತ್ತದೆ.
ಕ್ಯಾಮೆರಾಗಳು: f/1.8 ಅಪಾರ್ಚರ್ ಮತ್ತು LED ಫ್ಲ್ಯಾಷ್ ಮತ್ತು ಸೆಕೆಂಡರಿ ಡೆಪ್ತ್ ಸೆನ್ಸರ್ ಜೊತೆಗೆ 50MP ಹಿಂಬದಿಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗ 5MP ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ಬ್ಯಾಟರಿ: 5000mAh ಬ್ಯಾಟರಿ ಜೊತೆಗೆ 33W SuperVOOC ಫಾಸ್ಟ್ ಚಾರ್ಜಿಂಗ್ ಅಳವಡಿಸಲಾಗಿದೆ.
ಸಂಪರ್ಕ: ಡ್ಯುಯಲ್ 4G VoLTE, Wi-Fi 802.11ac, ಬ್ಲೂಟೂತ್ 5.0, GPS + GLONASS, ಮತ್ತು USB ಟೈಪ್-C. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ