ಹೊಸ ವರ್ಷ 2023 (New Year 2023) ಬಂದೇ ಬಿಟ್ಟಿದೆ. ಪ್ರಸಿದ್ಧ ಇ ಕಾಮರ್ಸ್ ತಾಣ, ರಿಟೇಲ್ ಸ್ಟೋರ್ಗಳಲ್ಲಿ ನ್ಯೂ ಈಯರ್ ಆಫರ್ಗಳಿಗೆ ಸ್ಮಾರ್ಟ್‌ಫೋನ್‌ಗಳು (Smartphone) ಬಂಪರ್ ಡಿಸ್ಕೌಂಟ್ಗೆ ಸಿಗುತ್ತಿವೆ. ವರ್ಷಾಂತ್ಯಕ್ಕೂ ಕೆಲವು ಮೊಬೈಲ್ಗಳು ಬಿಡುಗಡೆಗೆ ಆಗಿವೆ. 2023ನೇ ವರ್ಷ ಕೂಡ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲು ಸಿದ್ಧತೆ ನಡೆಸಿವೆ. ಈಗಾಗಲೇ ಅನೇಕ ಫೋನ್‌ಗಳು ಬಿಡುಗಡೆ ದಿನಾಂಕವನ್ನು ಘೊಷಣೆ ಮಾಡಿದ್ದು, ಸ್ಮಾರ್ಟ್‌ಫೋನ್ ಪ್ರಿಯರ ಕುತೂಹಲವನ್ನು ಕೆರಳಿಸಿವೆ. ಇವು ಮೊಬೈಲ್ (Mobile) ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ಖಚಿತ. ಹಾಗಾದ್ರೆ 2023ರ ಹೊಸ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.
ಚೀನಾ ಮೂಲದ ಪ್ರಸಿದ್ಧ ಶವೋಮಿ ಸಂಸ್ಥೆ ತನ್ನ ರೆಡ್ಮಿ ಬ್ರ್ಯಾಂಡ್ ಅಡಿಯಲ್ಲಿ ಭಾರತದಲ್ಲಿ ಹೊಸ ಪವರ್ಫುಲ್ ಮೊಬೈಲ್ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಅದುವೇ ರೆಡ್ಮಿ ನೋಟ್ 12 ಸರಣಿ. ಹೊಸ ವರ್ಷ ಜನವರಿ 5 ರಂದು ಭಾರತದಲ್ಲಿ ಈ ಫೋನ್ ಅನಾವರಣಗೊಳ್ಳಲಿದೆ. ಅಲ್ಲದೆ ಇದು ಹೊಸ ವರ್ಷದ ಮೊದಲ ಸ್ಮಾರ್ಟ್‌ಫೋನ್ ಆಗಿರಲಿದೆ. ಇದರಲ್ಲಿ ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ ಮತ್ತು ರೆಡ್ಮಿ ನೋಟ್ 12 ಪ್ರೊ+ ಎಂಬ ಮೂರು ಸ್ಮಾರ್ಟ್ಫೋನ್ಗುಗಳಿವೆ. ವಿಶೇಷ ಎಂದರೆ ರೆಡ್ಮಿ ನೋಟ್ 12 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್ ಬರೋಬ್ಬರಿ 200 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಹೊಂದಿರಲಿದೆಯಂತೆ ಈ ಮೂರು ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ ನೋಟ್ 12 33W ವೇಗದ ಚಾರ್ಜಿಂಗ್, ನೋಟ್ 12 ಪ್ರೊ 67W ವೇಗದ ಚಾರ್ಜಿಂಗ್ ಹಾಗೂ ನೋಟ್ 12 ಪ್ರೊ+ 210W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ನೋಟ್ 12 ಪ್ರೊ+ ಕೇವಲ 9 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತಂತೆ.
ವಿವೋ ಒಡೆತನದ ಬಹುನಿರೀಕ್ಷಿತ ಐಕ್ಯೂ 11 ಸರಣಿ ಕೂಡ ಇದೇ ಜನವರಿ ತಿಂಗಳಿನಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದರಲ್ಲಿ ಐಕ್ಯೂ 11 ಮತ್ತು ಐಕ್ಯೂ 11 ಪ್ರೊ ಎಂಬ ಎರಡು ಫೋನ್ಗಳಿರಲಿವೆ. ಐಕ್ಯೂ 11 ಫೋನ್ 6.78 ಇಂಚಿನ E6 AMOLED ಡಿಸ್‌ಪ್ಲೇ ಹೊಂದಿದೆ. ಇದು HDR10+ ಬೆಂಬಲವನ್ನು ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅ್ನು ಹೊಂದಿದೆ. ಜೊತೆಗೆ 120W ವೇಗದ ಚಾರ್ಜಿಂಗ್ ಬೆಂಬಲಿಸುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಐಕ್ಯೂ 11 ಪ್ರೊ ಸ್ಮಾರ್ಟ್‌ಫೋನ್ ಬರೋಬ್ಬರಿ 200W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ ಎನ್ನಲಾಗಿದೆ.
Cyber Attack: 829 ಮಿಲಿಯನ್ ಸೈಬರ್ ದಾಳಿ: 2022 ರಲ್ಲಿ ಅತಿ ಹೆಚ್ಚು ಸೈಬರ್ ಅಟ್ಯಾಕ್ ಆಗಿದ್ದೇ ಭಾರತದಲ್ಲಿ
2023 ಜನವರಿಯಲ್ಲಿ ರಿಲೀಸ್ ಆಗಲಿರುವ ಸ್ಮಾರ್ಟ್ಫೋನ್ಗಳ ಸಾಲಿನಲ್ಲಿ ಪೋಕೋ C50 ಕೂಡ ಇದೆ. ಈ ಸ್ಮಾರ್ಟ್‌ಫೋನ್ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರಲಿದೆ. ಬಲಿಷ್ಠವಾದ 6000mAh ಸಾಮರ್ಥ್ಯದ ಬ್ಯಾಟರಿ ಮತ್ತು ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗುವ ಎಲ್ಲ ಲಕ್ಷಣವಿದೆ.
ಈಗಾಗಲೇ ಟೀಸರ್ ಮೂಲಕ ಬಜೆಟ್ ಪ್ರಿಯರ ಹುಬ್ಬೇರಿಸುವ ಸ್ಯಾಮ್‌ಸಂಗ್ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿರಬಹುದು. ಇದಲ್ಲದೆ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು 8GB ವರ್ಚುವಲ್ RAM ಅನ್ನು ಪಡೆಯುವ ಸಾಧ್ಯತೆಯಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 8,000 ರೂ.ಇರಬಹುದು ಎಂದು ಹೇಳಲಾಗಿದೆ.
ಹೆಚ್ಚಾಗಿ ಬಜೆಟ್ ಫೋನ್ ಮೂಲಕವೇ ಸದ್ದು ಮಾಡುವ ಟೆಕ್ನೋ ಕಂಪನಿ ಹೊಸ ವರ್ಷದ ಜನವರಿಯಲ್ಲಿ ಮಧ್ಯಮ ಬೆಲೆಗೆ ಆಕರ್ಷಕ ಫೋನೊಂದನ್ನು ರಿಲೀಸ್ ಮಾಡಲಿದೆ. ಅದುವೇ ಟೆಕ್ನೋ ಫ್ಯಾಂಟಮ್ X2. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿರಬಹುದು. ಇದರಲ್ಲಿ ಮುಖ್ಯ ಕ್ಯಾಮೆರಾ 64MP ಸೆನ್ಸಾರ್, ಎರಡನೇ ಕ್ಯಾಮೆರಾ 13MP ಸೆನ್ಸಾರ್, ಮೂರನೇ ಕ್ಯಾಮೆರಾ 2MP ಸೆನ್ಸಾರ್ ಪಡೆದಿರುವ ಸಾಧ್ಯತೆಯಿದೆ. ಇದರ ಬೆಲೆ 20,000-25,000 ರೂ. ಒಳಗಡೆ ಇರಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Sun, 1 January 23