ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗ ಕ್ಯಾಮೆರಾ ಫೋನುಗಳದ್ದೇ ಹಾವಳಿ. ಒಂದರ ಹಿಂದೆ ಒಂದರಂತೆ ಆಕರ್ಷಕ ಕ್ಯಾಮೆರಾ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಿದೆ. ಅದರಲ್ಲೂ ಈಗ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಫೋನಿನ ಟ್ರೆಂಡ್ ಶುರುವಾಗಿದೆ. ಇದೇ ಸಾಲಿಗೆ ರೆಡ್ಮಿ ಸೇರಲಿದೆ. ಶವೋಮಿ ಒಡೆತನದ ಪ್ರಸಿದ್ಧ ರೆಡ್ಮಿ ಬ್ರ್ಯಾಂಡ್ ಅಡಿಯಲ್ಲಿ ಹೊಸ ರೆಡ್ಮಿ ನೋಟ್ 13 ಸರಣಿಯ (Redmi Note 13 Series) ಸ್ಮಾರ್ಟ್ಫೋನ್ಗಳು ಬಿಡುಗಡೆಗೆ ತಯಾರಾಗುತ್ತಿದೆ. ಜಾಗತಿಕ ಮಾರುಕಟ್ಟೆಗೆ ರೆಡ್ಮಿ ನೋಟ್ 13 ಸರಣಿಯು ಅಕ್ಟೋಬರ್‌ನಲ್ಲಿ ಪಾದರ್ಪಣೆ ಮಾಡಲಿದೆ ಎಂದು ಹೇಳಲಾಗಿದೆ.
ರೆಡ್ಮಿ ನೋಟ್ 13 ಸರಣಿ ನೋಟ್ 12 ಮಾದರಿ ಮುಂದಿನ ವರ್ಷನ್ ಆಗಿದೆ. ಈ ನೂತನ ಫೋನಿನಲ್ಲಿ ರೆಡ್ಮಿ ನೋಟ್ 13, ನೋಟ್ 13 ಪ್ರೊ ಮತ್ತು ನೋಟ್ 13 ಪ್ರೊ+ ಎಂಬ ಮೂರು ಫೋನುಗಳು ಇರಲಿದೆ. ಇದರಲ್ಲಿ ನೋಟ್ 13 ಪ್ರೊ+ 5G ಬರೋಬ್ಬರಿ 200 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ ಎಂಬ ಮಾಹಿತಿ ಸೋರಿಕೆ ಆಗಿದೆ.
ಒಂದು ವಾಟ್ಸ್ಆ್ಯಪ್ ಖಾತೆಯನ್ನು ಎಷ್ಟು ಸ್ಮಾರ್ಟ್ಫೋನ್ಗಳಲ್ಲಿ ಉಪಯೋಗಿಸಬಹುದು ಗೊತ್ತೇ?
ರೆಡ್ಮಿ ನೋಟ್ 13 ಪ್ರೊ+ ಮಾದರಿ ಸಂಖ್ಯೆ 23090RA98C ಅನ್ನು ಚೀನಾದ TENAA ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಗುರುತಿಸಲಾಗಿದೆ. ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7200 SoC ನಿಂದ ರನ್ ಆಗಲಿದೆ. ಮತ್ತೊಂದೆಡೆ, ರೆಡ್ಮಿ ನೋಟ್ 13 ಪ್ರೊ ಮಾದರಿ ಸಂಖ್ಯೆ 2312DRA50C ಅನ್ನು ಹೊಂದಿದ್ದು, ಇದು ಕ್ವಾಲ್ಕಂ ಸ್ನಾಪ್ಡ್ರಾಗನ್ 7 Gen 1 ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ.
ಈ ಸರಣಿಯಲ್ಲಿನ ಎಲ್ಲಾ ಮೂರು ಮಾದರಿಗಳು ಟ್ರಿಪಲ್-ಕ್ಯಾಮೆರಾ ಸಂವೇದಕಗಳನ್ನು ಹೊಂದಿರುತ್ತವೆ. ಪ್ರಾಥಮಿಕ ಸಂವೇದಕವನ್ನು ಹೊರತುಪಡಿಸಿ, 8 ಮೆಗಾ ಪಿಕ್ಸೆಲ್ ಶೂಟರ್ ಮತ್ತು 2 ಮೆಗಾ ಪಿಕ್ಸೆಲ್ ಲೆನ್ಸ್ ಇರುತ್ತದೆ. ನೋಟ್ 13 ಸರಣಿಯ ಫೋನ್‌ಗಳು 6.67-ಇಂಚಿನ AMOLED ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 1.5K ರೆಸಲ್ಯೂಶನ್ ಮತ್ತು ಇನ್-ಡಿಸ್ ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ