ಭಾರತದಲ್ಲಿ ಮುಂಚೂಣಿಯಲ್ಲಿರುವ ಸ್ಯಾಲರಿ ಆನ್–ಡಿಮ್ಯಾಂಡ್ ಪ್ಲಾಟ್ ಫಾರ್ಮ್ Refyne ತನ್ನ ಗ್ರಾಹಕರಿಗೆ ತಡೆರಹಿತ, ತ್ವರಿತ ಮತ್ತು ಅನುಕೂಲಕರವಾದ ರೀತಿಯಲ್ಲಿ ವೇತನಗಳನ್ನು, ರಿಯಲ್ ಟೈಂನಲ್ಲಿ ಅಕ್ಸೆಸ್ ಮಾಡಲು ಅನುಕೂಲವಾಗುವ ದೃಷ್ಟಿಯಿಂದ ವಾಟ್ಸ್ಆ್ಯಪ್ ಸೇವೆಗಳನ್ನು ಆರಂಭಿಸಿದೆ. ಇದರೊಂದಿಗೆ Refyne ವಾಟ್ಸ್ಆ್ಯಪ್ ನಲ್ಲಿ ಸ್ಯಾಲರಿ–ಆನ್–ಡಿಮ್ಯಾಂಡ್ ಮಾಹಿತಿ ನೀಡುವ ಮೊಟ್ಟ ಮೊದಲ ಹಣಕಾಸು ಕ್ಷೇಮ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ವೇತನ ಚಕ್ರಗಳ ನಡುವೆ ಸಂಬಳವನ್ನು ಸಕಾಲದಲ್ಲಿ ಪಾವತಿಸಲು ಈ Refyne ಅನುವು ಮಾಡಿಕೊಡುತ್ತದೆ. ಉದ್ಯೋಗಿಗಳು ಗಳಿಸಿದ ವೇತನವನ್ನು ಸರಿಯಾದ ಸಮಯದಲ್ಲಿ ವಾಟ್ಸ್ಆ್ಯಪ್ನಲ್ಲಿ ಆರಂಭದೊಂದಿಗೆ ತಮ್ಮ ಸಂಚಿತ ಸಂಬಳವನ್ನು ಕೆಲವೇ ಸೆಕೆಂಡುಗಳಲ್ಲಿ ಅತ್ಯಂತ ಸರಳವಾಗಿ ಪಡೆದುಕೊಳ್ಳಬಹುದಾಗಿದೆ.
ವಾಟ್ಸ್ಆ್ಯಪ್ನಲ್ಲಿ Refyne ಲಭ್ಯತೆಯೊಂದಿಗೆ ಸ್ಯಾಲರಿ ಆನ್–ಡಿಮ್ಯಾಂಡ್ ಅನ್ನು ಹೆಚ್ಚು ಹೆಚ್ಚು ಬಳಕೆದಾರರು ಪ್ರವೇಶಿಸಬಹುದಾಗಿದೆ. ತಂತ್ರಜ್ಞಾನದಲ್ಲಿ ಕಡಿಮೆ ಜ್ಞಾನ ಹೊಂದಿದ್ದವರಾದರೂ ವಾಟ್ಸ್ಆ್ಯಪ್ ಅನ್ನು ಬಳಸುವುದರಲ್ಲಿ ಆರಾಮದಾಯಕತೆಯಿಂದ ಇರಬಹುದಾಗಿದೆ. Refyne ಗೆ ವಾಟ್ಸ್ಆ್ಯಪ್ ಅನ್ನು ಕಳುಹಿಸುವುದರೊಂದಿಗೆ ಬಳಕೆದಾರರು/ಗ್ರಾಹಕರು ಈ ಸೇವೆಯನ್ನು ಪಡೆಯಲಿದ್ದಾರೆ. ಇದಕ್ಕೆ ಅಗತ್ಯವಿರುವ ಕೆವೈಸಿಯನ್ನು ಅವರು ಪೂರ್ಣಗೊಳಿಸಲು ಕೆಲವು ತ್ವರಿತವಾದ ಹಾಗೂ ಸುಲಭವಾದ ಹಂತಗಳ ಮೂಲಕ ಅವರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಇದಾದ ಬಳಿಕ ತಕ್ಷಣವೇ ಅವರು ವ್ಯವಹಾರವನ್ನು ಆರಂಭಿಸಬಹುದು.
ಈ ಸೇವೆಯು ಆರ್ಬಿಐ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ ಮತ್ತು Refyne ನ ಗೌಪ್ಯತೆ ನೀತಿಯ ಪ್ರಕಾರ ಉದ್ಯೋಗಿ ಡೇಟಾ ಸುರಕ್ಷಿತವಾಗಿರುತ್ತದೆ. ಇದಲ್ಲದೇ, ಎಲ್ಲಾ ವಹಿವಾಟುಗಳು ಸುರಕ್ಷಿತವಾಗಿರುತ್ತದೆ ಹಾಗೂ ಎರಡು ಅಂಶದ ದೃಢೀಕರಣವನ್ನು ಅನುಸರಿಸುತ್ತವೆ.
ಈ ಬಗ್ಗೆ Refyne ನ ಸಿಇಒ & ಸಹ–ಸಂಸ್ಥಾಪಕ ಚಿತ್ರೇಶ್ ಶರ್ಮಾ ಅವರು ಮಾತನಾಡಿ, “ಭಾರತದಲ್ಲಿ 3 ಜನರಲ್ಲಿ ಒಬ್ಬರು ಪಾವತಿ ಚೆಕ್ ಅನ್ನು ಲೈವ್ ಪೇಚೆಕ್ ಮೂಲಕ ಮಾಡುತ್ತಾರೆ ಮತ್ತು ಇದರಲ್ಲಿ ಗಮನಾರ್ಹ ಭಾಗವು ಶೂನ್ಯ ಅಥವಾ ಕ್ರೆಡಿಟ್ಗೆ ಸೀಮಿತ ಅಕ್ಸೆಸ್ ಅನ್ನು ಹೊಂದಿರುತ್ತದೆ. ಇದರ ಪರಿಣಾಮವಾಗಿ, ಹಣಕಾಸಿನ ಸಾಕ್ಷರತೆಯಿಂದ ಹಿಡಿದು ಕ್ರೆಡಿಟ್ ಡೇಟಾದವರೆಗೆ ಭೌಗೋಳಿಕ ನಿರ್ಬಂಧಗಳವರೆಗಿನ ಕಾರಣಗಳಿಂದಾಗಿ ಅನೇಕ ಜನರು ಕಡಿಮೆ ಅಥವಾ ಸೇವೆಯನ್ನು ಹೊಂದಿಲ್ಲದವರಾಗಿದ್ದಾರೆ. ಸಂವೇದನಾಶೀಲವಾದ ಹಣಕಾಸು ಉತ್ಪನ್ನಗಳು ಮತ್ತು ತಂತ್ರಜ್ಞಾನದ ಸಂಯೋಜನೆಯು ಹಣಕಾಸಿನ ಸೇರ್ಪಡೆಯನ್ನು ಚಾಲನೆ ಮಾಡುವ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಸಕ್ರಿಯಗೊಳಿಸುತ್ತದೆ ಎಂಬುದನ್ನು ನಾವು ನಂಬುತ್ತೇವೆ.”
“ಭಾರತದಲ್ಲಿ ವಾಟ್ಸಪ್ ಪ್ರವೇಶವನ್ನು ಗಮನಿಸಿದರೆ ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ಬೇಡಿಕೆಯ ಆಧಾರದ ಮೇರೆಗೆ ಸಂಬಳವನ್ನು ಲಭ್ಯವಾಗುವಂತೆ ಮಾಡಲು ಇದು ಸರಿಯಾದ ದಿಕ್ಕಿನಲ್ಲಿ ನಾವು ಇಟ್ಟಿರುವ ಒಂದು ದಿಟ್ಟ ಹೆಜ್ಜೆಯಾಗಿದೆ ಎಂದು ನಾವು ಭಾವಿಸಿದ್ದೇವೆ,” ಎಂದು ಹೇಳಿದ್ದಾರೆ. Refyne ತನ್ನ ಆ್ಯಪ್ ನಲ್ಲಿ 11 ಭಾರತೀಯ ಭಾಷೆಗಳಲ್ಲಿ ಸಪೋರ್ಟ್ ಮಾಡುತ್ತದೆ ಮತ್ತು ಇದನ್ನು ಗೂಗಲ್ ಪ್ಲೇಸ್ಟೋರ್ ಮತ್ತು ಐಒಎಸ್ ನಲ್ಲಿ ಕೂಡ ಡೌನ್ಲೋಡ್ ಮಾಡಬಹುದು.
Published On - 2:49 pm, Thu, 28 July 22