ಭಾರತದಲ್ಲಿ ದಾಖಲೆಯ ಮಾರಾಟ ಕಂಡ ಸ್ಮಾರ್ಟ್‌ಫೋನ್ಸ್: ಯಾವ ಬ್ರಾಂಡ್​ಗೆ ನಂಬರ್ ಒನ್ ಸ್ಥಾನ ಗೊತ್ತಾ?

ಕೌಂಟರ್‌ಪಾಯಿಂಟ್‌ನ ವರದಿಯ ಪ್ರಕಾರ, ಜನರು ಈಗ ದುಬಾರಿ ಫೋನ್‌ಗಳನ್ನು ಖರೀದಿಸುತ್ತಿರುವುದು ಸ್ಮಾರ್ಟ್‌ಫೋನ್ ಬೆಲೆ ಏರಿಕೆಗೆ ಕಾರಣವಾಗಿದೆ. ಅದೇ ಸಮಯದಲ್ಲಿ, ಈ ವರ್ಷ ಜನರು ಹಬ್ಬದ ಸೀಸನ್‌ನಲ್ಲಿ ಸಾಕಷ್ಟು ಫೋನ್‌ಗಳನ್ನು ಖರೀದಿಸಿರುವುದು ಮಾರಾಟದ ಹೆಚ್ಚಳಕ್ಕೆ ಕಾರಣವಂತೆ.

ಭಾರತದಲ್ಲಿ ದಾಖಲೆಯ ಮಾರಾಟ ಕಂಡ ಸ್ಮಾರ್ಟ್‌ಫೋನ್ಸ್: ಯಾವ ಬ್ರಾಂಡ್​ಗೆ ನಂಬರ್ ಒನ್ ಸ್ಥಾನ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 04, 2024 | 3:34 PM

ಸ್ಮಾರ್ಟ್‌ಫೋನ್ ಇಂದು ಬಹುತೇಕ ಎಲ್ಲರೂ ಬಳಸುವ ಸಾಧನವಾಗಿದೆ. ಜನರು ಇತ್ತೀಚಿನ ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ಬರುವ ನೂತನ ಫೋನ್‌ಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್ 2024) ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಶೇ. 3 ವಾರ್ಷಿಕ ಬೆಳವಣಿಗೆ ಕಂಡುಬಂದಿದೆ. ಅಲ್ಲದೆ, ಅವುಗಳ ಬೆಲೆಗಳಲ್ಲಿ ವಾರ್ಷಿಕ ಶೇ. 12 ಹೆಚ್ಚಳ ಆಗಿದೆ. ಇದು ಯಾವುದೇ ತ್ರೈಮಾಸಿಕದಲ್ಲಿ ಇದುವರೆಗಿನ ಅತ್ಯಧಿಕವಾಗಿದೆ. ಈ ತ್ರೈಮಾಸಿಕದಲ್ಲಿ, 5G ಫೋನ್‌ಗಳು ಪ್ರಾಬಲ್ಯ ಹೊಂದಿವೆ ಮತ್ತು ಅವುಗಳ ಮಾರಾಟ ಕೂಡ ಅತ್ಯಧಿಕವಾಗಿದೆ.

ಕೌಂಟರ್‌ಪಾಯಿಂಟ್‌ನ ವರದಿಯ ಪ್ರಕಾರ, ಜನರು ಈಗ ದುಬಾರಿ ಫೋನ್‌ಗಳನ್ನು ಖರೀದಿಸುತ್ತಿರುವುದು ಸ್ಮಾರ್ಟ್‌ಫೋನ್ ಬೆಲೆ ಏರಿಕೆಗೆ ಕಾರಣವಾಗಿದೆ. ಅದೇ ಸಮಯದಲ್ಲಿ, ಈ ವರ್ಷ ಜನರು ಹಬ್ಬದ ಸೀಸನ್‌ನಲ್ಲಿ ಸಾಕಷ್ಟು ಫೋನ್‌ಗಳನ್ನು ಖರೀದಿಸಿರುವುದು ಮಾರಾಟದ ಹೆಚ್ಚಳಕ್ಕೆ ಕಾರಣವಂತೆ.

ನಂಬರ್ ಒನ್ ಕಂಪನಿ ಯಾವುದು?:

ಸ್ಯಾಮ್‌ಸಂಗ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಲವಾದ ಹಿಡಿತ ಸಾಧಿಸಿದೆ. 2024 ರ ಮೂರನೇ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಫೋನುಗಳನ್ನು ಮಾರಾಟ ಮಾಡಿದ ಬ್ರ್ಯಾಂಡ್ ಆಗಿದೆ. ಇದರ ಮಾರುಕಟ್ಟೆ ಪಾಲು ಶೇ. 22.8 ಆಗಿದೆ. ಕೌಂಟರ್‌ಪಾಯಿಂಟ್‌ನ ಹಿರಿಯ ವಿಶ್ಲೇಷಕರಾದ ಪ್ರಾಚಿರ್ ಸಿಂಗ್, “ಸ್ಯಾಮ್​ಸಂಗ್​ನ ಮಾರುಕಟ್ಟೆ ಪಾಲು ಶೇ. 23 ಆಗಿದೆ, ಇದು ಅತ್ಯಧಿಕವಾಗಿದೆ. ಕಂಪನಿಯು ತನ್ನ ಪ್ರಮುಖ ಗ್ಯಾಲಕ್ಸಿ S ಸರಣಿಯ ಮೇಲೆ ಕೇಂದ್ರೀಕರಿಸುತ್ತಿದೆ ಮತ್ತು ಕಡಿಮೆ ಬೆಲೆಯ ಫೋನ್‌ಗಳನ್ನು ಉತ್ತಮಗೊಳಿಸುತ್ತಿದೆ. ಮುಖ್ಯವಾಗಿ ಮಧ್ಯಮ ಬೆಲೆಗೆ ಒಳ್ಳೆಯ ಫೋನ್ ತರುತ್ತಿದೆ. ಗ್ಯಾಲಕ್ಸಿ A-ಸರಣಿ ಫೋನ್‌ಗಳಲ್ಲಿ AI ವೈಶಿಷ್ಟ್ಯಗಳನ್ನು ಸಹ ನೀಡುತ್ತಿದೆ, ಇದು ದುಬಾರಿ ಫೋನ್‌ಗಳನ್ನು ಖರೀದಿಸಲು ಜನರನ್ನು ಪ್ರೇರೇಪಿಸುತ್ತಿದೆ” ಎಂದರು.

ಇದನ್ನೂ ಓದಿ: ಈಗ ನೀವು ಹೆಲಿಕಾಪ್ಟರ್ ಕೂಡ ಖರೀದಿಸಬಹುದು: ಬೆಲೆ ತಿಳಿದರೆ ಎಷ್ಟೊಂದು ಕಡಿಮೆ ಎನ್ನುತ್ತೀರಿ

ಆಪಲ್ ಎರಡನೇ ಸ್ಥಾನ:

2024 ರ ಮೂರನೇ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಫೋನುಗಳನ್ನು ಮಾರಾಟ ಮಾಡಿದ ಬ್ರ್ಯಾಂಡ್​ನಲ್ಲಿ ಆಪಲ್ ಎರಡನೇ ಸ್ಥಾನದಲ್ಲಿದೆ. ಇದರ ಮಾರುಕಟ್ಟೆ ಪಾಲು ಶೇ. 22 ಆಗಿದೆ. ಆಪಲ್ ಕೂಡ ಸಣ್ಣ ಪಟ್ಟಣಗಳತ್ತ ಹೆಚ್ಚಿನ ಗಮನ ಹರಿಸುತ್ತಿದೆ, ಇದರಿಂದಾಗಿ ಹೊಸ ಐಫೋನ್‌ಗಳ ಮಾರಾಟವು ಹೆಚ್ಚುತ್ತಿದೆ. ಹಬ್ಬದ ಸೀಸನ್‌ಗೆ ಮುಂಚಿತವಾಗಿ ಐಫೋನ್ 15 ಮತ್ತು ಐಫೋನ್ 16 ರ ಉತ್ತಮ ಮಾರಾಟದಿಂದ ಆಪಲ್ ಲಾಭ ಪಡೆದಿದೆ. ವರದಿಯ ಪ್ರಕಾರ, ಜನರು ಈಗ ದುಬಾರಿ ಫೋನ್‌ಗಳನ್ನು ಖರೀದಿಸುತ್ತಿದ್ದಾರೆ ಮತ್ತು ಭಾರತದಲ್ಲಿ ದುಬಾರಿ ಫೋನ್‌ಗಳನ್ನು ಖರೀದಿಸುವವರಿಗೆ ಆಪಲ್ ಮೊದಲ ಆಯ್ಕೆಯಾಗಿದೆ. ಇದಕ್ಕೆ ಕಾರಣ ಆಪಲ್​ನ ಬ್ರ್ಯಾಂಡ್ ಇಮೇಜ್.

ಮೌಲ್ಯದ ಷೇರಿನ ವಿಷಯದಲ್ಲಿ, ಒಪ್ಪೋ ಮತ್ತು ಶವೋಮಿ, ವಿವೋ ಹಿಂದೆ ಬಿದ್ದಿದ್ದು ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದೆ. ಇನ್ನು 10,000 ಮತ್ತು 15,000 ನಡುವಿನ ಫೋನ್‌ಗಳಲ್ಲಿ 5G ಲಭ್ಯ ಇರುವುದರಿಂದ ಇದರ ಮಾರಾಟವು ಶೇ. 93 ರಷ್ಟು ತಲುಪಿದೆ. ಇಂದು ಕಂಪನಿಗಳು ಅಗ್ಗದ ಫೋನ್‌ಗಳಲ್ಲಿ 5G ಸಂಪರ್ಕ ನೀಡುತ್ತಿರುವುದು ಇದಕ್ಕೆ ಕಾರಣ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ