Samsung Galaxy Unpacked 2023; ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅನ್‌ಪ್ಯಾಕ್ ಈವೆಂಟ್ ಲೈವ್ ವೀಕ್ಷಿಸುವುದು ಹೇಗೆ? ಸ್ಮಾರ್ಟ್​ಫೋನ್ ಬಿಡುಗಡೆಗೆ ಕ್ಷಣಗಣನೆ

|

Updated on: Jul 26, 2023 | 11:57 AM

ಸ್ಯಾಮ್‌ಸಂಗ್‌ ತನ್ನ ಬೇರೆ ಬೇರೆ ಉತ್ಪನ್ನಗಳನ್ನು ಪರಿಚಯಿಸಲು ಈ ವರ್ಷದಲ್ಲಿ ಎರಡನೇ Galaxy Unpacked (ಗ್ಯಾಲಕ್ಸಿ ಅನ್‌ಪ್ಯಾಕ್) ಈವೆಂಟ್​​ನ್ನು ಆಯೋಜಿಸಿದೆ.

Samsung Galaxy Unpacked 2023; ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅನ್‌ಪ್ಯಾಕ್ ಈವೆಂಟ್ ಲೈವ್ ವೀಕ್ಷಿಸುವುದು ಹೇಗೆ? ಸ್ಮಾರ್ಟ್​ಫೋನ್ ಬಿಡುಗಡೆಗೆ ಕ್ಷಣಗಣನೆ
Samsung Galaxy Unpacked ಈವೆಂಟ್ ಟೀಸರ್ Galaxy Z ಫ್ಲಿಪ್ 5
Follow us on

ಸ್ಯಾಮ್‌ಸಂಗ್‌ ತನ್ನ ಬೇರೆ ಬೇರೆ ಉತ್ಪನ್ನಗಳನ್ನು ಪರಿಚಯಿಸಲು ಈ ವರ್ಷದಲ್ಲಿ ಎರಡನೇ Samsung Galaxy Unpacked (ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅನ್‌ಪ್ಯಾಕ್) ಈವೆಂಟ್​​ನ್ನು ಆಯೋಜಿಸಿದೆ. ಇನ್ನೂ ಈ ಕಾರ್ಯಕ್ರಮ ಇಂದು ನಡೆಯಲ್ಲಿದ್ದು, ಗ್ರಾಹಕರು ತುಂಬಾ ಉತ್ಸಾಹಿಗಳಾಗಿ ಕಾಯುತ್ತಿದ್ದಾರೆ, ಕಾರ್ಯಕ್ರಮದಲ್ಲಿ ಯಾವೆಲ್ಲ ಆಫರ್​ಗಳು​ ಮತ್ತು ಹೊಸ ಹೊಸ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಾರೆ ಎಂಬದರ ಬಗ್ಗೆ ಗ್ರಾಹಕರಲ್ಲಿ ಕುತೂಹಲ ಹೆಚ್ಚಾಗಿದೆ. ಈ ಈವೆಂಟ್​​​ನ್ನು ಲೈವ್ ಆಗಿ ವೀಕ್ಷಿಸುವುದು ಹೇಗೆ? ಈ ಬಾರಿ ಯಾವೆಲ್ಲ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್‌ನ ಯಾವೆಲ್ಲ ಉತ್ಪನ್ನಗಳ ಬಿಡುಗಡೆ

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಅನ್ಪ್ಯಾಕ್ಡ್ 2023 ಈವೆಂಟ್​​ನಲ್ಲಿ ಯಾವೆಲ್ಲ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಾರೆ ಎಂಬುದನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಸ್ಯಾಮ್‌ಸಂಗ್ ಈ ವರ್ಷದಲ್ಲಿ ಎರಡು ಬಹು ನಿರೀಕ್ಷಿತ ಫೋನ್​​ಗಳನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಒಂದು ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಫ್ಲಿಪ್ 5 ಬಿಡುಗಡೆ ಮಾಡುತ್ತಿದೆ. ಇದರ ಜತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 6ನ್ನು ಪರಿಚಯಿಸಲು ಮುಂದಾಗಿದೆ. ಇನ್ನೂ ಅನೇಕ ಸ್ಯಾಮ್‌ಸಂಗ್ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ.

ಈವೆಂಟ್​ನ್ನು​​ ಹೇಗೆ? ಎಲ್ಲಿ ವೀಕ್ಷಿಸುವುದು?

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಅನ್‌ಪ್ಯಾಕ್ ಈವೆಂಟ್​​ ವೀಕ್ಷಿಸಲು ನೀವು ದಕ್ಷಿಣ ಕೋರಿಯಾದ ಸಿಯೋಲ್‌ಗೆ ಹೋಗಬೇಕಿಲ್ಲ. ಈ ಈವೆಂಟ್​ನ್ನು ಲೈವ್-ಸ್ಟ್ರೀಮಿಂಗ್ ಮೂಲಕ ನೋಡಬಹುದು, ಲೈವ್ ಸ್ಟ್ರೀಮ್​​ನ್ನು YouTubeನಲ್ಲಿ ಹೋಸ್ಟ್ ಮಾಡುತ್ತಿದೆ.

ಇದನ್ನೂ ಓದಿ:ಸೂಪರ್ ಸ್ಮಾರ್ಟ್​ಫೋನ್ ಬಿಡುಗಡೆಗೆ ಸ್ಯಾಮ್​ಸಂಗ್ ರೆಡಿ!

ಈವೆಂಟ್ ಪ್ರಾರಂಭದ ಸಮಯ

Galaxy ಅನ್ಪ್ಯಾಕ್ಡ್ ಈವೆಂಟ್ ಸಿಯೋಲ್‌ನಲ್ಲಿ ಸ್ಥಳೀಯ ಸಮಯದ ಪ್ರಕಾರ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ, ಇನ್ನೂ ಬೇರೆ ದೇಶಗಳಲ್ಲಿ ಈ ಸಮಯದ ಪ್ರಕಾರ ಪ್ರಸಾರವಾಗುತ್ತದೆ.

11 AM UTC

7 AM ET

4 AM PT

1 PM CET

4:30 PM IST

Galaxy Unpacked ಈವೆಂಟ್​ನ್ನು ಲೈವ್ ಸ್ಟ್ರೀಮ್ ಆಗಿ ನೋಡುವುದು ಹೇಗೆ?

Galaxy Unpacked 2023 ಈವೆಂಟ್​​ನ್ನು ಲೈವ್ ಆಗಿ ವೀಕ್ಷಿಸಲು, ಕೆಳಗೆ ನೀಡಿರುವ YouTube ಎಂಬೆಡ್ ಲಿಂಕ್​ನಲ್ಲಿ ನೋಡಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಬೆಲ್ ಐಕಾನ್ ಅನ್ನು ಟ್ಯಾಪ್ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ