Realme C51: ಬಜೆಟ್ ಬೆಲೆಗೆ ಭರ್ಜರಿ ಕ್ಯಾಮೆರಾ ಫೋನ್: ಬಿಡುಗಡೆ ಆಯಿತು ರಿಯಲ್ ಮಿ C51 ಸ್ಮಾರ್ಟ್ಫೋನ್
ರಿಯಲ್ ಮಿ C51 ಸ್ಮಾರ್ಟ್ಫೋನ್ ಸದ್ಯಕ್ಕೆ ಚೀನಾದ ತೈವಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಆದರೆ, ಇನ್ನೇನು ಕೆಲವೇ ದಿನಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆಯಂತೆ. ಈ ಫೋನ್ ಏಕೈಕ 4GB RAM + 64GB ಸ್ಟೋರೇಜ್ ರೂಪಾಂತರದಲ್ಲಿ ರಿಲೀಸ್ ಆಗಿದೆ.

ಕಳೆದ ಎರಡು ತಿಂಗಳುಗಳಿಂದ ಪ್ರಸಿದ್ಧ ರಿಯಲ್ ಮಿ (Realme) ಸಂಸ್ಥೆ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphones) ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಕ್ಯಾಮೆರಾ ಪ್ರಿಯರಿಗಾಗಿ ಅಧಿಕ ಮೆಗಾ ಪಿಕ್ಸೆಲ್ ಫೋನನ್ನು ಅನಾವರಣ ಮಾಡುತ್ತಿದೆ. ಇತ್ತೀಚೆಗಷ್ಟೆ 200 ಮೆಗಾ ಪಿಕ್ಸೆಲ್, 100 ಮೆಗಾ ಪಿಕ್ಸೆಲ್ ಕ್ಯಾಮೆರಾದ ಮೊಬೈಲ್ಗಳನ್ನು ಲಾಂಚ್ ಮಾಡಿತ್ತು. ಅದುಕೂಡ ಕಡಿಮೆ ಬೆಲೆಗೆ ಎಂಬುದು ವಿಶೇಷ. ಹೀಗಿರುವಾಗ ಇದೀಗ ಬಜೆಟ್ ಬೆಲೆಗೆ ಮತ್ತೊಂದು ಆಕರ್ಷಕ ಕ್ಯಾಮೆರಾ ಆಯ್ಕೆ ಇರುವ ರಿಯಲ್ ಮಿ C51 (Realme C51) ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಚಯಿಸಿದೆ.
ರಿಯಲ್ ಮಿ C51 ಬೆಲೆ ಎಷ್ಟು?:
ರಿಯಲ್ ಮಿ C51 ಸ್ಮಾರ್ಟ್ಫೋನ್ ಸದ್ಯಕ್ಕೆ ಚೀನಾದ ತೈವಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಆದರೆ, ಇನ್ನೇನು ಕೆಲವೇ ದಿನಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆಯಂತೆ. ಈ ಫೋನ್ ಏಕೈಕ 4GB RAM + 64GB ಸ್ಟೋರೇಜ್ ರೂಪಾಂತರದಲ್ಲಿ ರಿಲೀಸ್ ಆಗಿದೆ. ಇದರ ಬೆಲೆ TWD 3,990, ಅಂದರೆ ಭಾರತದಲ್ಲಿ ಸುಮಾರು 10,400ರೂ. ಎನ್ನಬಹುದು. ಇದು ಕಾರ್ಬನ್ ಬ್ಲಾಕ್ ಮತ್ತು ಮಿಂಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಟಿಪ್ಸ್ಟರ್ ನೀಡಿರುವ ಮಾಹಿತಿಯ ಪ್ರಕಾತ ಈ ಫೋನ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಮತ್ತು ಇದೇ ರೀತಿಯ ಫೀಚರ್ಗಳನ್ನು ಹೊಂದಿರುತ್ತದೆ ಎಂದು ಹೇಳಿಕೊಂಡಿದೆ.
ರಿಯಲ್ ಮಿ C51 ಫೀಚರ್ಸ್ ಏನಿದೆ?:
ಹೊಸದಾಗಿ ಬಿಡುಗಡೆಯಾದ ರಿಯಲ್ ಮಿ C51 ಸ್ಮಾರ್ಟ್ಫೋನ್ 720 x1,600 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.7-ಇಂಚಿನ HD ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 560nits ಗರಿಷ್ಠ ಹೊಳಪನ್ನು ಹೊಂದಿದೆ. ಆಕ್ಟಾ-ಕೋರ್ Unisoc T612 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಫೋನ್ RAM ವಿಸ್ತರಣೆ ತಂತ್ರಜ್ಞಾನವನ್ನು ಸಹ ಹೊಂದಿದೆ, ಇದು ಬಳಕೆದಾರರಿಗೆ 4GB ಬಳಕೆಯಾಗದ ಸಂಗ್ರಹಣೆಯನ್ನು ವರ್ಚುವಲ್ RAM ಆಗಿ ಬಳಸಲು ಅನುಮತಿಸುತ್ತದೆ.
ಇದು ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್‌ನೊಂದಿಗೆ ರನ್ ಆಗುತ್ತದೆ. ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು f/1.8 ಅಪರ್ಚರ್ ಮತ್ತು ಅನಿರ್ದಿಷ್ಟ ಸೆಕೆಂಡರಿ ಸಂವೇದಕದೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್‌ನಿಂದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಫೋನ್ ಮುಂಭಾಗದಲ್ಲಿ F/2.0 ದ್ಯುತಿರಂಧ್ರದೊಂದಿಗೆ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಹೆಚ್ಚುವರಿಯಾಗಿ, ರಿಯಲ್ ಮಿ C51 ಸ್ಮಾರ್ಟ್ಫೋನ್ನಲ್ಲಿ 33W SuperVOOC ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ನೀಡಲಾಗಿದೆ. ಈ ಫೋನ್ 3.5mm ಹೆಡ್‌ಫೋನ್ ಜ್ಯಾಕ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಡ್ಯುಯಲ್ ಸಿಮ್ ಬೆಂಬಲವನ್ನು ಒಳಗೊಂಡಿವೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ