Twitter New Logo: ಟ್ವಿಟ್ಟರ್​ನಲ್ಲಿ ನೀಲಿ ಹಕ್ಕಿ ಮಾಯ: ಹೊಸ ಲೋಗೋ ಬಿಡುಗಡೆ ಮಾಡಿದ ಎಲಾನ್ ಮಸ್ಕ್

Twitter Logo: ಎಲಾನ್ ಮಸ್ಕ್ ಇದೀಗ ಅತಿ ದೊಡ್ಡ ಬದಲಾವಣೆ ಮಾಡಿದ್ದು, ಹೊಸ ಲೋಗೋವನ್ನು ಲಾಂಚ್ ಮಾಡಿದ್ದಾರೆ. ಟ್ವಿಟ್ಟರ್​ನಲ್ಲಿ ಇದೀಗ ನೀಲಿ ಹಕ್ಕಿಯ ಲೋಗೋವಿಲ್ಲ. ಬದಲಾಗಿ ಕಪ್ಪು ಅಕ್ಷರದಲ್ಲಿ ಎಕ್ಸ್ ಎಂದು ಬರೆದಿರುವ ಲೋಗೋ ಕಾಣಿಸುತ್ತಿದೆ.

Twitter New Logo: ಟ್ವಿಟ್ಟರ್​ನಲ್ಲಿ ನೀಲಿ ಹಕ್ಕಿ ಮಾಯ: ಹೊಸ ಲೋಗೋ ಬಿಡುಗಡೆ ಮಾಡಿದ ಎಲಾನ್ ಮಸ್ಕ್
Twitter New Logo
Follow us
Vinay Bhat
|

Updated on:Jul 24, 2023 | 4:11 PM

ಟ್ವಿಟ್ಟರ್ (Twitter) ಅನ್ನು ತನ್ನ ತೆಕ್ಕೆಗೆ ಪಡೆದುಕೊಂಡ ಬಳಿಕ ಎಲಾನ್ ಮಸ್ಕ್ (Elon Musk) ಈ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್​ನಲ್ಲಿ ಮಹತ್ವದ ಬದಲಾವಣೆ ಮಾಡುತ್ತಿದ್ದಾರೆ. ಈ ಹಿಂದೆ ಟ್ವಿಟ್ಟರ್​ನಲ್ಲಿ ಹೊಸ ಫೀಚರ್​ಗಳನ್ನು ತಂದು ನೂತನ ರೂಪ ನೀಡಿದ್ದ ಮಸ್ಕ್ ಇದೀಗ ಅತಿ ದೊಡ್ಡ ಬದಲಾವಣೆ ಮಾಡಿದ್ದು, ಹೊಸ ಲೋಗೋವನ್ನು ಲಾಂಚ್ ಮಾಡಿದ್ದಾರೆ.

ಟ್ವಿಟ್ಟರ್​ನಲ್ಲಿ ಇದೀಗ ನೀಲಿ ಹಕ್ಕಿಯ ಲೋಗೋವಿಲ್ಲ. ಬದಲಾಗಿ ಕಪ್ಪು ಅಕ್ಷರದಲ್ಲಿ ಎಕ್ಸ್ (X) ಎಂದು ಬರೆದಿರುವ ಲೋಗೋ ಕಾಣಿಸುತ್ತಿದೆ. ಮಸ್ಕ್ ಭಾನುವಾರವಷ್ಟೆ, ಸದ್ಯದಲ್ಲೇ ಟ್ವಿಟ್ಟರ್ ಲೋಗೋ ಬದಲಾವಣೆ ಆಗಲಿದೆ ಎಂದು ಹೇಳಿದ್ದರು. ಆದರೆ, ಒಂದೇ ದಿನದಲ್ಲಿ ನೂತನ ಲೋಗೋ ಬಿಡುಗಡೆ ಮಾಡಿರುವುದು ಬಳಕೆದಾರರನ್ನು ಅಚ್ಚರಿ ಮೂಡಿಸಿದೆ. ಈ ನೂತನ ಲೋಗೋಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ
Image
Driving Licence: ಸುಲಭವಾಗಿ ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
Image
Camera Tips: ಸ್ಮಾರ್ಟ್​ಫೋನ್ ಕ್ಯಾಮೆರಾದಲ್ಲಿರುವ ಈ ಆಯ್ಕೆಗಳನ್ನು ಬಳಸಿದ್ದೀರಾ?: ಇದು ಯಾಕೆ ಇರುತ್ತದೆ ಗೊತ್ತೇ?
Image
JioBook laptop: ಜುಲೈ 31ಕ್ಕೆ ಜಿಯೋ ಬುಕ್ ಲ್ಯಾಪ್​ಟಾಪ್ ಬಿಡುಗಡೆ: ಬೆಲೆ ಕೇವಲ …
Image
Tecno Pova Neo 3: ಸಖತ್ ಸೌಂಡ್ ಮಾಡುತ್ತಿದೆ ಸದ್ದಿಲ್ಲದೆ ಮಾರುಕಟ್ಟೆಗೆ ಎಂಟ್ರಿಕೊಟ್ಟ ಟೆಕ್ನೋ ಪೋವಾ ನಿಯೋ 3 ಸ್ಮಾರ್ಟ್​ಫೋನ್

Boat Smart Ring: ಬೋಟ್ ಸ್ಮಾರ್ಟ್ ರಿಂಗ್ ಧರಿಸಿ, ನಿಮ್ಮ ಹೆಲ್ತ್, ಫಿಟ್ನೆಸ್ ಫುಲ್ ರಿಪೋರ್ಟ್ ಪಡೆಯಿರಿ!

ಟ್ವಿಟ್ವರ್‌ನ CEO, ಲಿಂಡಾ ಯಾಕರಿನೊ, ಹೊಸ ಲೋಗೋದ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಹಲವಾರು ದೊಡ್ಡ ಬದಲಾವಣೆಗಳನ್ನು ತಂದಿದ್ದಾರೆ. ಅದು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದರಿಂದ ಹಿಡಿದು ಇಂದಿನ ಲೋಗೋವನ್ನು ಬದಲಾಯಿಸುವವರೆಗೆ ನಡೆದಿದೆ.

ಇದೀಗ ನೀವು X.com ಎಂದು ಟೈಪ್ ಮಾಡಿದರೆ ಟ್ವಿಟರ್‌ ಪೇಜ್ ತೆರೆಯುತ್ತದೆ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ. ಆದಾಗ್ಯೂ, ವೆಬ್‌ಸೈಟ್ ಇನ್ನೂ Twitter.com ಅನ್ನು ಪ್ರಾಥಮಿಕ ಡೊಮೇನ್ ಆಗಿ ಬಳಸುತ್ತಿದೆ. ಸಾಮಾನ್ಯವಾಗಿ ಮಸ್ಕ್ ಅವರ ಪೋಸ್ಟ್​ಗೆ ಟ್ವಿಟ್ಟರ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ. ಅದು ಈ ಬಾರಿ ಕೂಡ ಮುಂದುವರೆದಿದೆ, ಕೆಲವರು ಈ ನೂತನ ಬದಲಾವಣೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರೆ, ಇನ್ನು ಕೆಲವರು “#GoodbyeTwitter” ಎಂದು ಬರೆದು ಹಳೆಯ ಲೋಗೋವನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Mon, 24 July 23

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ