Camera Tips: ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿರುವ ಈ ಆಯ್ಕೆಗಳನ್ನು ಬಳಸಿದ್ದೀರಾ?: ಇದು ಯಾಕೆ ಇರುತ್ತದೆ ಗೊತ್ತೇ?
ಸಾಮಾನ್ಯ ಜನರಿಗೆ ಕ್ಯಾಮೆರಾ ಸೆಟ್ಟಿಂಗ್ಸ್ ಆಯ್ಕೆಯನ್ನು ಉಪಯೋಗಿಸುವುದು ಹೇಗೆ ಎಂಬುದು ಕೂಡ ತಿಳಿದಿಲ್ಲ. ಇದನ್ನು ನೀವು ಅರಿತರೆ ಡಿಎಸ್ಎಲ್ಆರ್ನಲ್ಲಿ ಬರುವ ಫೋಟೋದಂತೆ ಸ್ಮಾರ್ಟ್ಫೋನ್ನಲ್ಲಿ ಫೋಟೋ ಸೆರೆ ಹಿಡಿಯಬಹುದು. ಈ ಕುರಿತ ಕೆಲ ಮಾಹಿತಿ ಇಲ್ಲಿದೆ.
ಇಂದು ಮಾರುಕಟ್ಟೆಯಲ್ಲಿ ಕ್ಯಾಮೆರಾ ಸ್ಮಾರ್ಟ್ಫೋನ್ಗಳ (Smartphone) ಹಾವಳಿ ಜೋರಾಗಿದೆ. ಹೆಚ್ಚಿನ ಮೊಬೈಲ್ ಕಂಪನಿಗಳು ಕ್ಯಾಮೆರಾಕ್ಕೆ ಹೆಚ್ಚು ನೀಡಿ ಫೋನುಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ಪ್ರಸಿದ್ಧ ಒನ್ಪ್ಲಸ್ ಕಂಪನಿ ತನ್ನ 11 ಪ್ರೊ+ (OnePlus 11 Pro+) ಫೋನಿನಲ್ಲಿ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಪರಿಚಯಿಸಿತ್ತು. ಮುಂಬರುವ ಹೆಚ್ಚಿನ ಫೋನುಗಳು ಕೂಡ 200, 108, 50 ಮೆಗಾ ಪಿಕ್ಸಲ್ ಕ್ಯಾಮೆರಾದಿಂದಲೇ ಕೂಡಿದೆ. ಇವುಗಳು ಕಡಿಮೆ ಬೆಲೆಗೆ ಇದೆ ಎಂಬುದು ವಿಶೇಷ. ಆದರೆ, ಫೋಟೋ ನಾವು ಗ್ರಹಿಸಿದಂತೆ ಚೆನ್ನಾಗಿ ಬಂದಿಲ್ಲ ಎಂದಾದರೆ ಕ್ಯಾಮೆರಾ (Camera) ಎಷ್ಟು ಮೆಗಾ ಪಿಕ್ಸೆಲ್ನದ್ದಾದರೇನು ಅಲ್ಲವೇ?.
ಹೆಚ್ಚಿನವರು ದೊಡ್ಡ ಮೆಗಾ ಪಿಕ್ಸೆಲ್ ಕ್ಯಾಮೆರಾದ ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ. ಇದರಲ್ಲಿ ಕ್ಯಾಮೆರಾ ತೆರೆದು ಫೋಟೋ ಕ್ಲಿಕ್ಕಿಸುತ್ತಾರೆ, ಅಷ್ಟೆ. ಕ್ಯಾಮೆರಾದಲ್ಲಿರುವ ಸೆಟ್ಟಿಂಗ್ಸ್, ಅಡ್ಜಸ್ಟಮೆಂಟ್ ಇದು ಯಾವುದನ್ನೂ ಗಮನಿಸುವುದಿಲ್ಲ. ಸಾಮಾನ್ಯ ಜನರಿಗೆ ಈ ಸೆಟ್ಟಿಂಗ್ಸ್ ಆಯ್ಕೆಯನ್ನು ಉಪಯೋಗಿಸುವುದು ಹೇಗೆ ಎಂಬುದು ಕೂಡ ತಿಳಿದಿಲ್ಲ. ಇದನ್ನು ನೀವು ಅರಿತರೆ ಡಿಎಸ್ಎಲ್ಆರ್ನಲ್ಲಿ ಬರುವ ಫೋಟೋದಂತೆ ಸ್ಮಾರ್ಟ್ಫೋನ್ನಲ್ಲಿ ಫೋಟೋ ಸೆರೆ ಹಿಡಿಯಬಹುದು. ಈ ಕುರಿತ ಕೆಲ ಮಾಹಿತಿ ಇಲ್ಲಿದೆ.
Twitter New Logo: ಟ್ವಿಟ್ಟರ್ಗೆ ಹೊಸ ಲೋಗೋ: ಅತಿ ದೊಡ್ಡ ಘೋಷಣೆ ಮಾಡಿದ ಎಲಾನ್ ಮಸ್ಕ್
ಫೋಕಸ್ ಮತ್ತು ಲೈಟ್ ಬಹಳ ಮುಖ್ಯ:
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಕ್ಯಾಮೆರಾವನ್ನು ತೆರೆದಾಗ ಹಳದಿ ಅಥವಾ ಬಿಳಿ ಬಣ್ಣದ ಗೆರೆಯ ಮಧ್ಯೆ ವೃತ್ತಾಕಾರವನ್ನು ಕಾಣಬಹುದು. ಹೆಚ್ಚಿನವರಿಗೆ ಇದು ಯಾಕೆ ಇರುತ್ತದೆ ಎಂಬುದು ತಿಳಿದಿಲ್ಲ. ಅದನ್ನು ಕಡೆಗಣಿಸಿ ಒಂದು ಫೋಟೋ ತೆಗೆಯುತ್ತಾರಷ್ಟೆ. ಆದರೆ, ಈ ಆಯ್ಕೆಯನ್ನು ಸರಿಯಾಗಿ ತಿಳಿದುಕೊಂಡರೆ ಅದ್ಭುತ ಫೋಟೋ ಸೆರೆ ಹಿಡಯಬಹುದು. ಬಿಳಿ ಅಥವಾ ಹಳದಿ ಬಣ್ಣದ ಗೆರೆಯನ್ನು ಮೇಲೆ-ಕೆಳಗೆ ಮಾಡುವ ಮೂಲಕ ಬೆಳಕನ್ನು ಹೆಚ್ಚು ಕಡಿಮೆ ಮಾಡಬಹುದು. ರಾತ್ರಿ ಸಮಯದಲ್ಲಿ ಫೋಟೋ ತೆಗೆಯುವಾಗ ಅಥವಾ ಹೆಚ್ಚಿನ ಬೆಳಕಿದ್ದ ಸಂದರ್ಭ ಬೆಳಕನ್ನು ಕಡಿಮೆ ಮಾಡಲು ಇದು ಉಪಕಾರಿ ಆಗುತ್ತದೆ.
ನೀವು ಕ್ಯಾಮೆರಾವನ್ನು ತೆರೆದು ನೇರವಾಗಿ ಫೋಟೋ ಕ್ಲಿಕ್ಕಿಸ ಬಾರದು. ಫೋಕಸ್ ಎಂಬುದು ಬಹುಳ ಮುಖ್ಯ. ಇದಕ್ಕಾಗಿ ನೀವು ನಿಮಗೆ ಬೇಕಾಗಿರುವ ವಸ್ತು ಕ್ಯಾಮೆರಾದಲ್ಲಿ ಕಂಡಾಗ ಅದರ ಮೇಲೆ ಒಮ್ಮೆ ಟ್ಯಾಪ್ ಮಾಡಿ. ಆಗ ನೀವು ಟ್ಯಾಪ್ ಮಾಡಿದ ವಸ್ತು ಮಾತ್ರ ಫೋಕಸ್ ಆಗಿ ಉಳಿದ ಎಲ್ಲ ಭಾಗಗಳು ಬ್ಲರ್ ಆಗುತ್ತದೆ.
HDR ಅನ್ನು ಬಳಸಿ:
HDR, ಅಥವಾ ಹೈ ಡೈನಾಮಿಕ್ ರೇಂಜ್ ಸ್ಮಾರ್ಟ್‌ಫೋನ್ ಕ್ಯಾಮೆರಾ ಅಪ್ಲಿಕೇಶನ್‌ಗಳಲ್ಲಿರುವ ಪ್ರಮುಖ ವೈಶಿಷ್ಟ್ಯವಾಗಿದೆ. ಸರಳವಾಗಿ ಹೇಳುವುದಾದರೆ, ಇದು ನೀವು ಸೆರೆ ಹಿಡಿಯುವ ಫೋಟೋವನ್ನು ಮತ್ತಷ್ಟು ಉತ್ತಮ ಗುಣಮಟ್ಟದಿಂದ ಬರುವಂತೆ ಮಾಡುತ್ತದೆ. ಮತ್ತು ಉತ್ತಮ ಬಣ್ಣಗಳಿಂದ ಸೆರೆ ಹಿಡಿಯುತ್ತದೆ. ಲ್ಯಾಂಡ್ಸ್ಕ್ಯಾಪ್ಸ್ ಮತ್ತು ಪೋರ್ಟ್ರೇಟ್ ಶಾಟ್‌ಗಳಿಗೆ ಇದು ಸೂಕ್ತವಾಗಿದೆ. ಇದನ್ನು ಆರಿಸಿ ಫೋಟೋ ತೆಗೆಯುವುದರಿಂದ ಬ್ಲರ್ ಆಗುವಂತಹ ಫೋಟೋ ಬರುವುದಿಲ್ಲ. ಉದಾಹರಣೆಗೆ ನೀವು ವೇಗವಾಗಿ ಚಲಿಸುವ ವಾಹನದ ಫೋಟೋ ತೆಗೆದರೆ ಅದು ಯಾವುದೇ ಬ್ಲರ್ ಆಗದಂತೆ ಸ್ಪಷ್ಟವಾಗಿ ಸೆರೆ ಹಿಡಿಯುತ್ತದೆ. ಈ ಆಯ್ಕೆ ನಿಮ್ಮ ಫೋನಿನ ಪರದೆಯ ಮೇಲೆ ಇರುತ್ತದೆ.
Moto G13: 13,999 ರೂ. ಬೆಲೆಯ ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 9,999 ರೂ. ಗೆ ಖರೀದಿಸಿ
ಗ್ರಿಡ್ ಆಯ್ಕೆಯನ್ನು ಬಳಸಿ:
ಗ್ರಿಡ್ ಆಯ್ಕೆ ಬಹುತೇಕ ಎಲ್ಲ ಸ್ಮಾರ್ಟ್ಫೋನ್ಗಳಲ್ಲಿ ಇರುತ್ತದೆ. ಇದು ಫೋಟೋವನ್ನು ಒಂಬತ್ತು ಸಮಾನ ಬ್ಲಾಕ್‌ಗಳಾಗಿ ವಿಭಜಿಸುತ್ತದೆ. ಅದು ಮೂರು-ಮೂರು-ಗ್ರಿಡ್ ಅನ್ನು ರೂಪಿಸುತ್ತದೆ (ಮೇಲಿನ ಚಿತ್ರದಲ್ಲಿರುವಂತೆ). ಇದರ ಮೂಲಕ ನಿಮಗೆ ಬೇಕಾಗಿರುವ ಸ್ಥಳವನ್ನು ಟ್ಯಾಪ್ ಮಾಡುವ ಮೂಲಕ ಫೋಟೋ ಕ್ಲಿಕ್ಕಿಸಬಹುದು.
ಇನ್ನೂ ಅನೇಕ ಆಯ್ಕೆಗಳಿವೆ:
ನಿಮ್ಮ ಫೋನ್‌ನಿನ ಕ್ಯಾಮೆರಾದಲ್ಲಿ ಡೀಫಾಲ್ಟ್ ಆಗಿ ಇನ್ನೂ ಅನೇಕ ಆಯ್ಕೆಗಳಿವೆ. ಪೋರ್ಟ್ರೇಟ್ ಎಂಬ ಆಯ್ಕೆ ತಿಳಿದಿರಬಹುದು. ಇದರ ಮೂಲಕ ಫೋಟೋ ತೆಗೆದರೆ ನೀವು ಸೆಲೆಕ್ಟ್ ಮಾಡಿರುವ ಸಬ್ಜೆಕ್ಟ್ ಮಾತ್ರ ಅದ್ಭುತವಾಗಿ ಬರುತ್ತದೆ. ಉಳಿದವೂ ಸಂಪೂರ್ಣ ಬ್ಲರ್ ಆಗುತ್ತದೆ. ಮೈಕ್ರೊ ಲೆನ್ಸ್ ಇಂದು ಹೆಚ್ಚಿನ ಮೊಬೈಲ್ನಲ್ಲಿದೆ. ಇದರ ಮೂಲಕ ಸಣ್ಣ ಸಣ್ಣ ವಸ್ತುಗಳನ್ನು ತೀರಾ ಹತ್ತಿರದಿಂದ ಸೆರೆ ಹಿಡಿಯಬಹುದು. ಪನೋರಪ ಎಂಬ ಆಯ್ಕೆ ಕೂಡ ಇದ್ದು ಇದರ ಮೂಲಕ ದೊಡ್ಡದಾದ ಜಾಗವನ್ನು ಸಂಪೂರ್ಣ ಫೋಟೋದಲ್ಲಿ ಸೆರೆ ಹಿಡಿಯಬಹುದು. ನೈಟ್ ಶಾಟ್ ಆಯ್ಕೆ ರಾತ್ರಿಯ ಸಮಯದಲ್ಲಿ ಫೋಟೋ ತೆಗೆಯಲು ಸೂಕ್ತವಾಗಿದ್ದು, ಉತ್ತಮ ಬೆಳಕನ್ನು ನೀಡುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ