Tech Tips: ವಾಟ್ಸ್ಆ್ಯಪ್ನಲ್ಲಿ ನಿಮ್ಮ ಪ್ರೊಫೈಲ್ ಫೋಟೋ ಯಾರು ನೋಡಬೇಕೆಂದು ನೀವೇ ಆಯ್ಕೆ ಮಾಡಿ
ಒಂದರ ಹಿಂದೆ ಒಂದರಂತೆ ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುವ ವಾಟ್ಸ್ಆ್ಯಪ್ನಲ್ಲಿ ಕೆಲವೊಂದು ಹಿಡನ್ ಫೀಚರ್ಗಳು ಕೂಡ ಇವೆ. ಈ ಆಯ್ಕೆಯನ್ನು ಸ್ವತಃ ವಾಟ್ಸ್ಆ್ಯಪ್ ನೀಡಿದೆ. ಆದರೆ, ಅನೇಕರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಮುಖ್ಯವಾಗಿ ನಿಮ್ಮ ಪ್ರೊಫೈಲ್ ಫೋಟೋವನ್ನು ಮರೆಮಾಡುವುದು. ನೀವು ಆಯ್ಕೆ ಮಾಡುವ ವ್ಯಕ್ತಿ ಮಾತ್ರ ನಿಮ್ಮ ಪ್ರೊಫೈಲ್ ಫೋಟೋವನ್ನು ನೋಡಬಹುದಾದ ಫೀಚರ್ ಅನ್ನು ವಾಟ್ಸ್ಆ್ಯಪ್ ನೀಡಿದೆ.

ಕ್ಷಣಾರ್ಧದಲ್ಲಿ ಸಂದೇಶದ ಮೂಲಕ ಸಂವಹನ ನಡೆಸಲು ಇಂದು ಬಹುತೇಕ ಜನರು ಉಪಯೋಗಿಸುತ್ತಿರುವ ಆ್ಯಪ್ ಎಂದರೆ ಅದು ವಾಟ್ಸ್ಆ್ಯಪ್ (WhatsApp). ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಈ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಉಪಯೋಗಿಸುತ್ತಿದ್ದಾರೆ. ವಾರಕ್ಕೊಂದು ನೂತನ ಫೀಚರ್ಗಳನ್ನು ಪರಿಚಯಿಸುವ ವಾಟ್ಸ್ಆ್ಯಪ್ನಲ್ಲಿ ಸಾಲು ಸಾಲು ಅಪ್ಡೇಟ್ಗಳು ಬರಲಿದ್ದು ಕೆಲವೊಂದು ಪರೀಕ್ಷಾ ಹಂತದಲ್ಲಿದೆ. ಒಂದರ ಹಿಂದೆ ಒಂದರಂತೆ ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುವ ವಾಟ್ಸ್ಆ್ಯಪ್ನಲ್ಲಿ ಕೆಲವೊಂದು ಹಿಡನ್ ಫೀಚರ್ಗಳು ಕೂಡ ಇವೆ. ಈ ಆಯ್ಕೆಯನ್ನು ಸ್ವತಃ ವಾಟ್ಸ್ಆ್ಯಪ್ ನೀಡಿದೆ. ಆದರೆ, ಅನೇಕರಿಗೆ ಈ ಬಗ್ಗೆ ತಿಳಿದಿರುವುದಿಲ್ಲ.
ಮುಖ್ಯವಾಗಿ ನಿಮ್ಮ ಪ್ರೊಫೈಲ್ ಫೋಟೋವನ್ನು ಮರೆಮಾಡುವುದು. ನೀವು ಆಯ್ಕೆ ಮಾಡುವ ವ್ಯಕ್ತಿ ಮಾತ್ರ ನಿಮ್ಮ ಪ್ರೊಫೈಲ್ ಫೋಟೋವನ್ನು ನೋಡಬಹುದಾದ ಫೀಚರ್ ಅನ್ನು ವಾಟ್ಸ್ಆ್ಯಪ್ ನೀಡಿದೆ. ಆದರೆ, ಇದು ಅನೇಕರಿಗೆ ತಿಳಿದಿಲ್ಲ. ಈ ಟ್ರಿಕ್ ಮೂಲಕ ನೀವು ಯಾರಿಂದಲೂ ನಿಮ್ಮ ಪ್ರೊಫೈಲ್ ಫೋಟೋವನ್ನು ಸುಲಭವಾಗಿ ಮರೆಮಾಡಬಹುದು.
ಇದಕ್ಕಾಗಿ ನೀವು ಸೆಟ್ಟಿಂಗ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಮೊದಲು ನೀವು ವಾಟ್ಸ್ಆ್ಯಪ್ ಅನ್ನು ತೆರೆಯಬೇಕು. ಇದರ ನಂತರ ನೀವು ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಬೇಕು. ಈಗ ನೀವು ಸೆಟ್ಟಿಂಗ್‌ಗಳಿಗೆ ಹೋಗಬೇಕು. ಇಲ್ಲಿ ನೀವು ಅನೇಕ ಆಯ್ಕೆಗಳನ್ನು ನೋಡುತ್ತೀರಿ, ಇದರಲ್ಲಿ ನೀವು ಪ್ರೈವಸಿ ಮೇಲೆ ಕ್ಲಿಕ್ ಮಾಡಿದ ತಕ್ಷಣ, ನೀವು ಅನೇಕ ಗೌಪ್ಯತೆ ಆಯ್ಕೆಗಳನ್ನು ನೋಡುತ್ತೀರಿ, ಅದರಲ್ಲಿ ನೀವು ಲಾಸ್ಟ್ ಸೀನ್, ಪ್ರೊಫೈಲ್ ಫೋಟೋ, ಅಬೌಟ್ ಮತ್ತು ಇತರ ವಿವರಗಳನ್ನು ಕಾಣುತ್ತೀರಿ.
Tech Tips: ಲ್ಯಾಪ್‌ಟಾಪ್‌ನಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡೋದು ಹೇಗೆ?: ಕೀಬೋರ್ಡ್ ಬಟನ್‌ಗಳ ಮ್ಯಾಜಿಕ್ ನೋಡಿ
ಪ್ರೊಫೈಲ್ ಫೋಟೋ ಅಥವಾ ಡಿಪಿ ಮರೆಮಾಡಲು, ನೀವು ಪ್ರೊಫೈಲ್ ಫೋಟೋ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ನೀವು 4 ಆಯ್ಕೆಗಳನ್ನು ಪಡೆಯುತ್ತೀರಿ. ಮೊದಲ ಆಯ್ಕೆಯೆಂದರೆ ಎವರಿಒನ್ (Everyone), ಮೈ ಕಾಂಟ್ಯಾಕ್ಟ್ಸ್ (My Contacts), ಮೈ ಕಾಂಟೆಕ್ಟ್ ಹೊರತುಪಡಿಸಿ, ನೋಬಡಿ (Nobody). ನೀವು ಕೆಲವು ನಿರ್ದಿಷ್ಟ ವ್ಯಕ್ತಿಗಳಿಂದ ನಿಮ್ಮ ಪ್ರೊಫೈಲ್ ಅನ್ನು ಮರೆಮಾಡಲು ಬಯಸಿದರೆ, ನೀವು ಮೈ ಕಾಂಟೆಕ್ಟ್ ಹೊರತುಪಡಿಸಿ ಆಯ್ಕೆ ಮಾಡಬೇಕು. ಇಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ತೋರಿಸಲು ಬಯಸದ ಜನರನ್ನು ಆಯ್ಕೆ ಮಾಡಬಹುದು.
ಹಾಗೆಯೆ ವಾಟ್ಸ್ಆ್ಯಪ್ನಲ್ಲಿ ನೀವು ಆನ್ಲೈನ್ನಲ್ಲಿ ಇದ್ದರೂ ಕಾಣದಂತೆ ಹೈಡ್ ಮಾಡಬಹುದು. ಇಷ್ಟೇ ಅಲ್ಲದೆ ಲಾಸ್ಟ್ ಸೀನ್ ಮತ್ತು ಎಬೌಟ್ ಆಯ್ಕೆಯನ್ನು ಯಾರಿಗೆ ಬೇಕು ಅವರಿಗೆ ಮಾತ್ರ ಕಾಣುವಂತೆ ಮಾಡಬಹುದು. ಈ ಹಿಂದೆ ಇದರಲ್ಲಿ ನೋಬಡಿ (Nobody), ಮೈ ಕಾಂಟ್ಯಾಕ್ಟ್ಸ್ (My Contacts), ಎವರಿಒನ್ (Everyone) ಎಂಬ ಆಯ್ಕೆ ಮಾತ್ರ ನೀಡಲಾಗಿತ್ತು. ಇತ್ತೀಚೆಗಷ್ಟೆ ಪರಿಚಯಿಸಿದ ಹೊಸ ಫೀಚರ್ನಲ್ಲಿ ಮೈ ಕಾಂಟ್ಯಾಕ್ಸ್ಟ್ ಎಕ್ಸೆಪ್ಟ್ಎಂಬ ಹೊಸ ಆಯ್ಕೆ ನೀಡಲಾಗಿದೆ. ಈ ಮೂಲಕ ನಿಮಗೆ ಅಗತ್ಯವಿರುವವರಿಗೆ ಮಾತ್ರ ನಿಮ್ಮ ಡಿಪಿ, ಲಾಸ್ಟ್ ಸೀನ್ ಮತ್ತು ಎಬೌಟ್ ಆಯ್ಕೆಯನ್ನು ನೋಡುವಂತೆ ಮಾಡಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ