Tech Tips: ಆಧಾರ್ ಕಾರ್ಡ್ ಕಳೆದು ಅಥವಾ ಹರಿದು ಹೋದರೆ ನಕಲಿ ಕಾರ್ಡ್ ಪಡೆಯುವುದು ಹೇಗೆ?
UIDAI ಟೋಲ್-ಫ್ರೀ ಸಂಖ್ಯೆ 1947 ಗೆ ಕರೆ ಮಾಡುವ ಮೂಲಕ ನೀವು ಕಳೆದುಹೋದ ಆಧಾರ್ ಕಾರ್ಡ್ ಬಗ್ಗೆ ದೂರು ನೀಡಬಹುದು. ನೀವು ಅಧಿಕೃತ ವೆಬ್‌ಸೈಟ್ help@uidai.gov.in ಗೆ ಇಮೇಲ್ ಮಾಡುವ ಮೂಲಕವೂ ದೂರು ನೀಡಬಹುದು. ನೀವು ದೂರು ನೀಡದಿದ್ದರೆ, ಎಲ್ಲಾದರು ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾದರೆ ನೀವೇ ಜವಾಬ್ದಾರರಾಗಿರುತ್ತೀರಿ.

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದರೆ? ಅಥವಾ ಆಧಾರ್ ಕಾರ್ಡ್ ಹರಿದರೆ, ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ. ನೀವು ನಕಲಿ ಆಧಾರ್ ಕಾರ್ಡ್ ಸುಲಭವಾಗಿ ಪಡೆಯಬಹುದು. ಆಧಾರ್ ಕಾರ್ಡ್ ಅನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ UIDAI ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಪಡೆಯಬಹುದು. ಆದಾಗ್ಯೂ, ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೆ, ಮೊದಲು ನೀವು ಆಧಾರ್ ಕಾರ್ಡ್ ಕಳೆದುಹೋದ ಬಗ್ಗೆ ದೂರು ನೀಡಬೇಕು. ಹಾಗಾದರೆ ದೂರು ನೀಡುವುದು ಹೇಗೆ?, ನಕಲಿ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳುವುದು ಹೇಗೆ?, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದುಹೋದ ಆಧಾರ್ ಕಾರ್ಡ್ ಬಗ್ಗೆ ಎಲ್ಲಿ ದೂರು ನೀಡಬೇಕು?:
UIDAI ಟೋಲ್-ಫ್ರೀ ಸಂಖ್ಯೆ 1947 ಗೆ ಕರೆ ಮಾಡುವ ಮೂಲಕ ನೀವು ಕಳೆದುಹೋದ ಆಧಾರ್ ಕಾರ್ಡ್ ಬಗ್ಗೆ ದೂರು ನೀಡಬಹುದು. ನೀವು ಅಧಿಕೃತ ವೆಬ್‌ಸೈಟ್ help@uidai.gov.in ಗೆ ಇಮೇಲ್ ಮಾಡುವ ಮೂಲಕವೂ ದೂರು ನೀಡಬಹುದು. ನೀವು ದೂರು ನೀಡದಿದ್ದರೆ, ಎಲ್ಲಾದರು ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾದರೆ ನೀವೇ ಜವಾಬ್ದಾರರಾಗಿರುತ್ತೀರಿ.
ಆನ್‌ಲೈನ್‌ನಲ್ಲಿ ನಕಲಿ ಆಧಾರ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?:
ಹಂತ 1: ಮೊದಲನೆಯದಾಗಿ ನೀವು ಅಧಿಕೃತ UIDAI ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಹಂತ 2: ಇದರ ನಂತರ ಆಧಾರ್ ಸೇವಾ ವಿಭಾಗವು UIDAI ವೆಬ್‌ಸೈಟ್‌ನಲ್ಲಿ ಕಾಣಿಸುತ್ತದೆ. ಇದು ಮೆನು ಬಾರ್ ಅಥವಾ ಡ್ರಾಪ್ ಡೌನ್ ಮೆನುವಿನಲ್ಲಿ ಕಾಣಿಸುತ್ತದೆ.
ಹಂತ 3: ನಂತರ ನೀವು “ಲಾಸ್ಟ್ UID/EID ಹಿಂಪಡೆಯಿರಿ” ಆಯ್ಕೆಯನ್ನು ನೋಡುತ್ತೀರಿ. ಇದು ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯುತ್ತದೆ, ಅಲ್ಲಿಂದ ನೀವು ನಕಲಿ ಆಧಾರ್ ಕಾರ್ಡ್‌ಗಾಗಿ ವಿನಂತಿಸಬಹುದು.
ಹಂತ 4: ಇದರ ನಂತರ ನೀವು “ಲಾಸ್ಟ್ ಯುಐಡಿ/ಇಐಡಿ ಹಿಂಪಡೆಯಿರಿ” ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಆಧಾರ್ ಸಂಖ್ಯೆ ಅಥವಾ ದಾಖಲಾತಿ ಸಂಖ್ಯೆಯನ್ನು ನಮೂದಿಸಬೇಕು.
Tech Tips: ವಿಮಾನದಲ್ಲಿ ಹೋಗೋವಾಗ ಮೊಬೈಲ್ ಫ್ಲೈಟ್ ಮೋಡ್ನಲ್ಲಿ ಇರಿಸದಿದ್ದರೆ ಏನಾಗುತ್ತೆ?
ಹಂತ 5: ನಂತರ ನೀವು ಪೂರ್ಣ ಹೆಸರು, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್‌ನಂತಹ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ. ನಂತರ ಭದ್ರತಾ ಕೋಡ್ ಅನ್ನು ನೋಡುತ್ತೀರಿ. ಇದರ ನಂತರ ನೋಂದಾಯಿತ ವಿಳಾಸ ಮತ್ತು ಜನ್ಮ ದಿನಾಂಕದಂತಹ ಹೆಚ್ಚುವರಿ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.
ಹಂತ 6: ವಿವರಗಳನ್ನು ಭರ್ತಿ ಮಾಡಿದ ನಂತರ, ನೀವು Send OTP ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ನೀವು ಒನ್ ಟೈಮ್ ಪಾಸ್ವರ್ಡ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಇದರ ನಂತರ ನೀವು OTP ಅನ್ನು ನಮೂದಿಸುವ ಮೂಲಕ ಪರಿಶೀಲಿಸಬೇಕಾಗುತ್ತದೆ.
ಹಂತ 7: ಒಮ್ಮೆ ನೀವು OTP, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 8: OTP ಪರಿಶೀಲನೆಯ ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಪ್ರದರ್ಶಿಸಲಾಗುತ್ತದೆ. ಇದಾದ ನಂತರ ಅದನ್ನು ಆಯ್ಕೆ ಮಾಡಿ ದೃಢೀಕರಿಸಬೇಕಾಗುತ್ತದೆ.
ಗಮನಿಸಿ – ಆಧಾರ್ ಕಾರ್ಡ್ ಸಂಖ್ಯೆ ಮತ್ತು ದಾಖಲಾತಿ ID ಸಹಾಯದಿಂದ ನೀವು UIDAI ಪೋರ್ಟಲ್‌ನಿಂದ ನಕಲಿ ಆಧಾರ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ