AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಮಳೆಗೆ ಲ್ಯಾಪ್​ಟಾಪ್ ಒದ್ದೆಯಾದರೆ ಅಕ್ಕಿಯಲ್ಲಿ ಹಾಕಬೇಡಿ: ತಕ್ಷಣ ಹೀಗೆ ಮಾಡಿ

ಈ ಮಳೆಗಾಲದಲ್ಲಿ ನಿಮ್ಮ ಲ್ಯಾಪ್‌ಟಾಪ್ ಒದ್ದೆಯಾಗಿದ್ದರೆ ಅಥವಾ ಯಾವುದೋ ಕಾರಣದಿಂದ ನೀರು ಬಂದಿದ್ದರೆ, ಗ್ಯಾಜೆಟ್ ಅನ್ನು ಅಕ್ಕಿಗೆ ಹಾಕಕುವ ಅಗತ್ಯವಿಲ್ಲ. ಲ್ಯಾಪ್​ಟಾಪ್ ಒದ್ದೆಯಾದರೆ ಅದನ್ನು ಸರಿಪಡಿಸುವುದು ಹೇಗೆ ಎಂದು ನಾವು ಕೆಲವು ಸುಲಭ ವಿಧಾನಗಳ ಬಗ್ಗೆ ಹೇಳಲಿದ್ದೇವೆ, ಅದರ ಸಹಾಯದಿಂದ ನಿಮ್ಮ ಲ್ಯಾಪ್‌ಟಾಪ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.

Tech Tips: ಮಳೆಗೆ ಲ್ಯಾಪ್​ಟಾಪ್ ಒದ್ದೆಯಾದರೆ ಅಕ್ಕಿಯಲ್ಲಿ ಹಾಕಬೇಡಿ: ತಕ್ಷಣ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 21, 2024 | 11:54 AM

Share

ನೀವು ಲ್ಯಾಪ್‌ಟಾಪ್ ಬಳಸುತ್ತಿದ್ದರೆ, ನೇಕ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಒಂದು ಸಣ್ಣ ತಪ್ಪಿನಿಂದಾಗಿ ನಿಮ್ಮ ಲ್ಯಾಪ್‌ಟಾಪ್ ಹಾನಿಗೊಳಗಾಗಬಹುದು. ಮುಖ್ಯವಾಗಿ ಈ ಮಳೆಗಾಲದಲ್ಲಿ ಬ್ಯಾಗ್‌ನಲ್ಲಿ ಇಟ್ಟ ನಂತರವೂ ನಮ್ಮ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳಂತಹ ಗ್ಯಾಜೆಟ್‌ಗಳಿಗೆ ನೀರು ಸೇರುವುದು ಅನೇಕ ಬಾರಿ ಸಂಭವಿಸುತ್ತದೆ. ಸಾಮಾನ್ಯವಾಗಿ, ಈ ಸಾಧನಗಳಿಂದ ನೀರನ್ನು ತೆಗೆದುಹಾಕಲು ನಾವು ಅಕ್ಕಿ ಅಥವಾ ಹೇರ್ ಡ್ರೈಯರ್ ವಿಧಾನಗಳನ್ನು ಬಳಸುತ್ತೇವೆ. ಆದರೆ, ಇದು ಸಂಪೂರ್ಣವಾಗಿ ಯಶಸ್ವಿ ಆಗುವುದಿಲ್ಲ.

ಲ್ಯಾಪ್​ಟಾಪ್ ಒದ್ದೆಯಾದರೆ ಅದನ್ನು ಸರಿಪಡಿಸುವುದು ಹೇಗೆ ಎಂದು ನಾವು ಕೆಲವು ಸುಲಭ ವಿಧಾನಗಳ ಬಗ್ಗೆ ಹೇಳಲಿದ್ದೇವೆ, ಅದರ ಸಹಾಯದಿಂದ ನಿಮ್ಮ ಲ್ಯಾಪ್‌ಟಾಪ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.

ನಿಮ್ಮ ಲ್ಯಾಪ್‌ಟಾಪ್ ಒದ್ದೆಯಾಗಿದ್ದರೆ ತಕ್ಷಣ ಈ ಕೆಲಸವನ್ನು ಮಾಡಿ:

ನಿಮ್ಮ ಲ್ಯಾಪ್‌ಟಾಪ್ ಸ್ಲೀಪ್ ಮೋಡ್‌ನಲ್ಲಿದ್ದರೆ, ಮೊದಲು ಮುಖ್ಯ ಪವರ್ ಬಟನ್ ಸಹಾಯದಿಂದ ಅದನ್ನು ಸ್ವಿಚ್ ಆಫ್ ಮಾಡಿ. ಇದರ ನಂತರ, ಲ್ಯಾಪ್‌ಟಾಪ್‌ಗೆ ಯಾವುದೇ USB ಅಥವಾ ಇತರ ಪರಿಕರಗಳನ್ನು ಪ್ಲಗ್ ಇನ್ ಮಾಡಿದ್ದರೆ, ಎಲ್ಲವನ್ನೂ ಅನ್‌ಪ್ಲಗ್ ಮಾಡಿ. ಈ ಸಮಯದಲ್ಲಿ ನಿಮ್ಮ ಲ್ಯಾಪ್‌ಟಾಪ್ ಚಾರ್ಜ್ ಆಗುತ್ತಿರಬಾರದು ಮತ್ತು ನಿಮ್ಮ ಚಾರ್ಜಿಂಗ್ ಪೋರ್ಟ್ ಖಾಲಿಯಾಗಿರ ಬೇಕು ಎಂಬುದನ್ನು ನೆನಪಿನಲ್ಲಿಡಿ.

ಈಗ ಈ ಹಂತಗಳನ್ನು ಅನುಸರಿಸಿ:

ಲ್ಯಾಪ್‌ಟಾಪ್ ಅನ್ನು ಸ್ವಿಚ್ ಆಫ್ ಮಾಡಿದ ನಂತರ, ಎಲ್ಲಾ ಪರಿಕರಗಳನ್ನು ಅನ್‌ಪ್ಲಗ್ ಮಾಡಿ. ಬಳಿಕ ಲ್ಯಾಪ್‌ಟಾಪ್ ಅನ್ನು ತಲೆಕೆಳಗಾಗಿ ಮಾಡಿ ಮತ್ತು ನಂತರ ಲ್ಯಾಪ್‌ಟಾಪ್ ಬ್ಯಾಟರಿಯನ್ನು ಹೊರತೆಗೆಯಿರಿ. ನಿಮ್ಮ ಲ್ಯಾಪ್‌ಟಾಪ್ ಈ ಆಯ್ಕೆಯನ್ನು ಹೊಂದಿಲ್ಲದಿದ್ದರೆ, ಆ ಹಂತವನ್ನು ಬಿಟ್ಟುಬಿಡಿ ಮತ್ತು ನಂತರ ಮೃದುವಾದ ಬಟ್ಟೆಯ ಸಹಾಯದಿಂದ ಲ್ಯಾಪ್‌ಟಾಪ್ ಅನ್ನು ಒರೆಸಿ. ಲ್ಯಾಪ್‌ಟಾಪ್ ಅನ್ನು ಟವೆಲ್ ಮೇಲೆ ತಲೆಕೆಳಗಾಗಿ ಇರಿಸಿ. ಕನಿಷ್ಠ ನಾಲ್ಕು ಗಂಟೆಗಳ ಕಾಲ ಈ ಲ್ಯಾಪ್‌ಟಾಪ್ ಹಾಗೇ ಬಿಡಿ.

ಇದನ್ನೂ ಓದಿ: ಟೆಲಿಕಾಂ ಕ್ಷೇತ್ರದಲ್ಲಿ BSNL ಹೊಸ ಕ್ರಾಂತಿ: ಸಿಮ್, ನೆಟ್‌ವರ್ಕ್ ಇಲ್ಲದೇ ಕಾಲ್ ಮಾಡ್ಬಹುದು..!

ಅಕ್ಕಿಯಲ್ಲಿ ಲ್ಯಾಪ್‌ಟಾಪ್ ಹಾಕುವ ಅಗತ್ಯವಿಲ್ಲ:

ಮೇಲೆ ತಿಳಿಸಿದ ತಂತ್ರಗಳೊಂದಿಗೆ, ನಿಮ್ಮ ಲ್ಯಾಪ್‌ಟಾಪ್ ಅನ್ನು ಒಣಗಿಸಲು ಸುಲಭ ತಂತ್ರವಾಗಿದೆ. ಒದ್ದೆಯಾದ ಲ್ಯಾಪ್‌ಟಾಪ್ ಅನ್ನು ಒಣಗಿಸಲು ಮತ್ತು ಸರಿಪಡಿಸಲು, ನೀವು ಅದರ ಮೇಲೆ ಅಕ್ಕಿ ಸುರಿಯಬೇಕಾಗಿಲ್ಲ ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಲ್ಯಾಪ್‌ಟಾಪ್ ಅನ್ನು ಅಕ್ಕಿಯಲ್ಲಿ ಇಡಬೇಕಾಗಿಲ್ಲ. ಈ ಗ್ಯಾಜೆಟ್ ಅನ್ನು ಒಣಗಿಸಲು ನಿಮಗೆ ಹೇರ್ ಡ್ರೈಯರ್ ಕೂಡ ಅಗತ್ಯವಿಲ್ಲ.

ಮಳೆಗಾಲದಲ್ಲಿ ಹೊರಗೆ ಹೋಗುವಾಗ ಯಾವಾಗಲೂ ವಾಟರ್ ಪ್ರೂಫ್ ಲ್ಯಾಪ್‌ಟಾಪ್ ಬ್ಯಾಗ್ ಬಳಸಿ. ಇದು ನಿಮ್ಮ ಲ್ಯಾಪ್‌ಟಾಪ್ ಅನ್ನು ಮಳೆ ನೀರಿನಿಂದ ರಕ್ಷಿಸುತ್ತದೆ ಮತ್ತು ತೇವಾಂಶದಿಂದ ದೂರವಿರಿಸುತ್ತದೆ. ವಾಟರ್ ಪ್ರೋಫ್ ಬ್ಯಾಗ್​​ನಲ್ಲಿ ಚೆನ್ನಾಗಿ ಪ್ಯಾಕ್ ಮಾಡಿ ಲ್ಯಾಪ್‌ಟಾಪ್ ತೆಗೆದುಕೊಂಡು ಹೋಗಬಹುದು. ಅಂತೆಯೆ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೆ ಲ್ಯಾಪ್‌ಟಾಪ್‌ನ ಬ್ಯಾಟರಿ ಮತ್ತು ಪವರ್ ಸಾಕೆಟ್ ಬಗ್ಗೆ ಗಮನಹರಿಸಿ. ಲ್ಯಾಪ್‌ಟಾಪ್ ಅನ್ನು ನೀರು ಅಥವಾ ತೇವಾಂಶದ ಬಳಿ ಚಾರ್ಜ್ ಮಾಡದಿರಲು ಪ್ರಯತ್ನಿಸಿ ಮತ್ತು ಸರಿಯಾಗಿ ಇನ್ಸುಲೇಟೆಡ್ ಪವರ್ ಸಾಕೆಟ್ ಅನ್ನು ಬಳಸಿ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!