Tech Tips: ನಿಮ್ಮ ಮೊಬೈಲ್ ಅನ್ನು ಟಿವಿ ರಿಮೋಟ್​ನಂತೆ ಬದಲಾಯಿಸಿ: ಹೇಗೆ ಗೊತ್ತೇ?

ಇನ್ನುಂದೆ ಟಿವಿ ರಿಮೋಟ್ ಕಳೆದು ಹೋದರೆ ಚಿಂತಿಸಬೇಕಿಲ್ಲ. ಇಂದು ಈ ಲೇಖನದಲ್ಲಿ ನಾವು ನಿಮಗೆ ತುಂಬಾ ಸುಲಭವಾದ ಟ್ರಿಕ್ ಅನ್ನು ಹೇಳಲಿದ್ದೇವೆ ಅದರ ಸಹಾಯದಿಂದ ನೀವು ಟಿವಿ ರಿಮೋಟ್ ಹಾಳಾಗಿದ್ದರೂ ಸಹ ಸ್ಮಾರ್ಟ್‌ಫೋನ್ ಮೂಲಕ ಟಿವಿಯನ್ನು ಸುಲಭವಾಗಿ ನಿಯಂತ್ರಿಸಬಹುದು.

Tech Tips: ನಿಮ್ಮ ಮೊಬೈಲ್ ಅನ್ನು ಟಿವಿ ರಿಮೋಟ್​ನಂತೆ ಬದಲಾಯಿಸಿ: ಹೇಗೆ ಗೊತ್ತೇ?
Tech Tips
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Nov 24, 2024 | 12:42 PM

ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಗ್ರಾಹಕರಲ್ಲಿ ಸಾಕಷ್ಟು ಜನಪ್ರಿಯವಾಗಿದೆ ಮತ್ತು ಬಜೆಟ್ ಎಲ್ಇಡಿ ಟಿವಿಯಿಂದ ಹಿಡಿದು ಉನ್ನತ-ಮಟ್ಟದ ಪ್ರೀಮಿಯಂ ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ರಿಯಲ್ ಮಿ, ಶವೋಮಿ, ಮೊಟೊರೊಲಾ ದಿಂದ ಹಿಡಿದು ನೀವು ಅನೇಕ ಅನೇಕ ಬ್ರಾಂಡ್ ಟಿವಿ ಮಾದರಿಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು. ಟಿವಿ ಮಾದರಿಗಳ ಪ್ರಮುಖ ಭಾಗವೆಂದರೆ ಟಿವಿ ರಿಮೋಟ್, ಇದರ ಸಹಾಯದಿಂದ ನೀವು ದೂರದಲ್ಲಿ ಕುಳಿತು ಟಿವಿಯನ್ನು ನಿರ್ವಹಿಸಬಹುದು, ಆದರೆ ರಿಮೋಟ್ ಹಾನಿಗೊಳಗಾದರೆ ಟಿವಿಯನ್ನು ಹೇಗೆ ನಿರ್ವಹಿಸುವುದು ಎಂಬ ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ.

ಆದರೆ ಇಂದು ಈ ಲೇಖನದಲ್ಲಿ ನಾವು ನಿಮಗೆ ತುಂಬಾ ಸುಲಭವಾದ ಟ್ರಿಕ್ ಅನ್ನು ಹೇಳಲಿದ್ದೇವೆ ಅದರ ಸಹಾಯದಿಂದ ನೀವು ಟಿವಿ ರಿಮೋಟ್ ಹಾಳಾಗಿದ್ದರೂ ಸಹ ಸ್ಮಾರ್ಟ್‌ಫೋನ್ ಮೂಲಕ ಟಿವಿಯನ್ನು ಸುಲಭವಾಗಿ ನಿಯಂತ್ರಿಸಬಹುದು. ಇನ್ನುಂದೆ ಟಿವಿ ರಿಮೋಟ್ ಕಳೆದು ಹೋದರೆ ಚಿಂತಿಸಬೇಕಿಲ್ಲ. ನಿಮ್ಮಲ್ಲಿ ಸ್ಮಾರ್ಟ್​ಫೋನ್ ಇದ್ದರೆ ಅದರ ಮೂಲಕ ಮನೆಯ ಟಿವಿಯನ್ನು ನೀವು ನಿಯಂತ್ರಿಸಬಹುದು.

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿ ರಿಮೋಟ್ ಆಗಿ ಬಳಸಬಹುದು. ಗೂಗಲ್ ಟಿವಿ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಆಂಡ್ರಾಯ್ಡ್ ಟಿವಿಯನ್ನು ನೀವು ನಿಯಂತ್ರಿಸಬಹುದು. ಇಷ್ಟು ಮಾತ್ರವಲ್ಲದೆ ನೀವು ಆ್ಯಂಡ್ರಾಯ್ಡ್ ಜೊತೆಗೆ ಆ್ಯಪಲ್ ಐಫೋನ್ ನಲ್ಲೂ ಇದೇ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಈ ಟ್ರಿಕ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮುಂದೆ ತಿಳಿಯಿರಿ.

ಆಂಡ್ರಾಯ್ಡ್ ಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸುವುದು ಹೇಗೆ?

  • ಗೂಗಲ್ ಪ್ಲೇ ಸ್ಟೋರ್​ನಿಂದ ಗೂಗಲ್ ಟಿವಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
  • ನಿಮ್ಮ ಟಿವಿ ಮತ್ತು ಮೊಬೈಲ್ ಅನ್ನು ಒಂದೇ ವೈ-ಫೈಗೆ ಸಂಪರ್ಕಿಸಿ. ಮನೆಯಲ್ಲಿ ವೈ-ಫೈ ಇಲ್ಲದಿದ್ದರೆ, ನೀವು ಬ್ಲೂಟೂತ್ ಮೂಲಕವೂ ಕನೆಕ್ಟ್ ಮಾಡಬಹುದು.
  • ಮೊದಲು ಅಪ್ಲಿಕೇಶನ್‌ನಲ್ಲಿ ರಿಮೋಟ್ ಬಟನ್ ಕ್ಲಿಕ್ ಮಾಡಿ.
  • ಈಗ ಸ್ಮಾರ್ಟ್​ಫೋನ್​ನಲ್ಲಿರುವ ಆ್ಯಪ್ ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಟಿವಿ ಕಾಣಿಸಿಕೊಂಡ ತಕ್ಷಣ ಅದನ್ನು ಆಯ್ಕೆಮಾಡಿ.
  • ನಂತರ ನಿಮ್ಮ ಟಿವಿ ಪರದೆಯ ಮೇಲೆ ಒಂದು ಕೋಡ್ ಕಾಣಿಸುತ್ತದೆ. ಅಪ್ಲಿಕೇಶನ್‌ನಲ್ಲಿ ಆ ಕೋಡ್ ಅನ್ನು ನಮೂದಿಸಿ ಮತ್ತು ಕನೆಕ್ಟ್ ಆಯ್ಕೆಯನ್ನು ಟ್ಯಾಪ್ ಮಾಡಿ.
  • ಒಮ್ಮೆ ನಿಮ್ಮ ಫೋನ್ ಕನೆಕ್ಟ್ ಆದರೆ, ನೀವು ಅದನ್ನು ಸಾಮಾನ್ಯ ರಿಮೋಟ್‌ನಂತೆ ಬಳಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Xನಲ್ಲಿ ಯಾವುದೇ ವಿಷಯ ರಾತ್ರೋರಾತ್ರಿ ಹೇಗೆ ಟ್ರೆಂಡ್ ಆಗುತ್ತದೆ?: ತಿಳಿಯಿರಿ ಈ ಇಂಟ್ರೆಸ್ಟಿಂಗ್ ಮ್ಯಾಟರ್

ಐಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸುವುದು ಹೇಗೆ?

  • ನಿಮ್ಮ ಐಫೋನ್ ಮತ್ತು ಟಿವಿಯನ್ನು ಒಂದೇ ವೈ-ಫೈಗೆ ಸಂಪರ್ಕಪಡಿಸಿ.
  • ಆ್ಯಪ್ ಸ್ಟೋರ್‌ನಿಂದ ಗೂಗಲ್ ಟಿವಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿರಿ.
  • ಗೂಗಲ್ ಟಿವಿ ಅಪ್ಲಿಕೇಶನ್‌ನಲ್ಲಿ ಟಿವಿ ರಿಮೋಟ್ ಐಕಾನ್ ಮೇಲೆ ಟ್ಯಾಪ್ ಮಾಡಿ.
  • ಈಗ ಸ್ಮಾರ್ಟ್​ಫೋನ್​ನಲ್ಲಿರುವ ಆ್ಯಪ್ ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಟಿವಿ ಕಾಣಿಸಿಕೊಂಡ ತಕ್ಷಣ ಅದನ್ನು ಆಯ್ಕೆಮಾಡಿ.
  • ನಿಮ್ಮ ಟಿವಿ ಪರದೆಯ ಮೇಲೆ 6 ಅಂಕಿಗಳ ಕೋಡ್ ಕಾಣಿಸುತ್ತದೆ. ಅಪ್ಲಿಕೇಶನ್‌ನಲ್ಲಿ ಕೋಡ್ ನಮೂದಿಸಿ ಮತ್ತು ಕನೆಕ್ಟ್ ಮಾಡಿ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ