AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Telegram: ಟೆಲಿಗ್ರಾಮ್ ಹೊಸ ಅಪ್ಡೇಟ್​ನಲ್ಲಿ ಗ್ರೂಪ್ ವಿಡಿಯೋ ಕಾಲ್, ಅನಿಮೇಟೆಡ್ ಎಮೋಜಿ ಸೌಲಭ್ಯ; ಇಲ್ಲಿದೆ ವಿವರ

ಗ್ರೂಪ್ ವಿಡಿಯೋ ಕಾಲ್ ಜೊತೆಗೆ, ಟೆಲಿಗ್ರಾಮ್ ಅಪ್ಲಿಕೇಶನ್ ಇತ್ತೀಚಿನ ಅಪ್ಡೇಟ್ ಮೂಲಕ ಕೆಲವು ಇಂಟರ್ಫೇಸ್-ಮಟ್ಟದ ಬದಲಾವಣೆಗಳನ್ನು ಪರಿಚಯಿಸಿದೆ. ಈ ಬದಲಾವಣೆಗಳಲ್ಲಿ ಅನಿಮೇಟೆಡ್ ಬ್ಯಾಕ್‌ಗ್ರೌಂಡ್ ಸೇರ್ಪಡೆ, ಹೊಸ ಮೆಸೇಜಿಂಗ್ ಅನಿಮೇಷನ್‌ಗಳು ಮತ್ತು ಹೊಸ ಆನಿಮೇಟೆಡ್ ಎಮೋಜಿಗಳು ಸೇರಿವೆ.

Telegram: ಟೆಲಿಗ್ರಾಮ್ ಹೊಸ ಅಪ್ಡೇಟ್​ನಲ್ಲಿ ಗ್ರೂಪ್ ವಿಡಿಯೋ ಕಾಲ್, ಅನಿಮೇಟೆಡ್ ಎಮೋಜಿ ಸೌಲಭ್ಯ; ಇಲ್ಲಿದೆ ವಿವರ
ಟೆಲಿಗ್ರಾಂ
Follow us
TV9 Web
| Updated By: ganapathi bhat

Updated on: Jun 28, 2021 | 3:33 PM

ಟೆಲಿಗ್ರಾಮ್ ಬಹುನಿರೀಕ್ಷೆಯ ಗ್ರೂಪ್ ವಿಡಿಯೋ ಕರೆಗಳ ಆಯ್ಕೆಯನ್ನು ಪರಿಚಯಿಸಿದೆ. ಮೊಬೈಲ್, ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ಬಳಕೆದಾರರು ತಮ್ಮ ಗ್ರೂಪ್ ಆಡಿಯೊ ಚಾಟ್‌ಗಳನ್ನು ವೀಡಿಯೊ ಕಾನ್ಫರೆನ್ಸ್ ಕರೆಗಳಾಗಿ ಪರಿವರ್ತಿಸಲು ನವೀಕರಣವನ್ನು ಬಳಸಿಕೊಳ್ಳಬಹುದು. ಲಂಡನ್ ಮೂಲದ ಈ ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್‌ ಫೇಸ್‌ಬುಕ್ ಮೆಸೆಂಜರ್, ವಾಟ್ಸಾಪ್ ಮತ್ತು ಆಪಲ್‌ನ ಫೇಸ್‌ಟೈಮ್‌‌ ಬಳಿಕ ಈ ಹೊಸ ನಡೆ ತೆಗೆದುಕೊಂಡಿದೆ. 

ಗ್ರೂಪ್ ವಿಡಿಯೋ ಕಾಲ್ ಜೊತೆಗೆ, ಟೆಲಿಗ್ರಾಮ್ ಅಪ್ಲಿಕೇಶನ್ ಇತ್ತೀಚಿನ ಅಪ್ಡೇಟ್ ಮೂಲಕ ಕೆಲವು ಇಂಟರ್ಫೇಸ್-ಮಟ್ಟದ ಬದಲಾವಣೆಗಳನ್ನು ಪರಿಚಯಿಸಿದೆ. ಈ ಬದಲಾವಣೆಗಳಲ್ಲಿ ಅನಿಮೇಟೆಡ್ ಬ್ಯಾಕ್‌ಗ್ರೌಂಡ್ ಸೇರ್ಪಡೆ, ಹೊಸ ಮೆಸೇಜಿಂಗ್ ಅನಿಮೇಷನ್‌ಗಳು ಮತ್ತು ಹೊಸ ಆನಿಮೇಟೆಡ್ ಎಮೋಜಿಗಳು ಸೇರಿವೆ.

ಈ ಮೊದಲು ಟೆಲಿಗ್ರಾಮ್ ಗ್ರೂಪ್ ವಿಡಿಯೋ ಕರೆಗಳನ್ನು ಆಡಿಯೋ ವಿಧಾನದಲ್ಲಿ ಮಾತ್ರ ಮಾಡಲು ಅವಕಾಶವಿತ್ತು. ಆದರೆ, ಈಗ ಟೆಲಿಗ್ರಾಮ್ ಅಪ್ಡೇಟ್ ಮೂಲಕ ಬಳಕೆದಾರರು ತಮ್ಮ ಗ್ರೂಪ್ ಆಡಿಯೊ ಸಂಭಾಷಣೆಗಳನ್ನು ವಿಡಿಯೋ ಕರೆಗಳಾಗಿ ಪರಿವರ್ತಿಸಬಹುದಾಗಿದೆ. ಹೀಗೆ ಅನುಮತಿಸುವ ಸಾಮರ್ಥ್ಯ ಟೆಲಿಗ್ರಾಮ್‌ನ ಪ್ರಮುಖ ಬದಲಾವಣೆ ಆಗಿದೆ‌.

ಬಳಕೆದಾರರು ತಮ್ಮ ವಿಡಿಯೋವನ್ನು ಆನ್ ಮಾಡಲು ಗ್ರೂಪ್ ಆಡಿಯೊ ಕರೆಯಲ್ಲಿ ಕ್ಯಾಮೆರಾ ಐಕಾನ್ ಟ್ಯಾಪ್ ಮಾಡಬೇಕಾಗುತ್ತದೆ. ಒಮ್ಮೆ ವಿಡಿಯೋ ಕಾಲ್ ಸಕ್ರಿಯಗೊಳಿಸಿದ ನಂತರ, ನಿಮ್ಮ ಗ್ರೂಪ್‌ನ ಸದಸ್ಯರಲ್ಲಿ ಒಬ್ಬರ ವಿಡಿಯೋವನ್ನು ನೋಡಲು ನೀವು ಪಿನ್ ಮಾಡಬಹುದು. ಈಗಿರುವ ವಿಡಿಯೋ ಕರೆಗಳ ಆಯ್ಕೆಯಂತೆ ಒಬ್ಬರನ್ನು ಪಿನ್ ಮಾಡಬಹುದು.

ಟೆಲಿಗ್ರಾಮ್ ಸ್ಕ್ರೀನ್ ಶೇರ್ ಮಾಡುವ ಆಯ್ಕೆಯನ್ನು ಮತ್ತು ನಿಮ್ಮ ಕ್ಯಾಮೆರಾ ಫೀಡ್ ತೋರಿಸುವ ಆಯ್ಕೆ ನೀಡಿದೆ. ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಲ್ಲಿನ ಬಳಕೆದಾರರು ವಿಡಿಯೋ ಕರೆಗಳ ಸಮಯದಲ್ಲಿ ಸೈಡ್ ಪ್ಯಾನಲ್ ತೆರೆಯಬಹುದು ಮತ್ತು ವೀಡಿಯೊ ಗ್ರಿಡ್‌ನ ಸ್ಪ್ಲಿಟ್-ಸ್ಕ್ರೀನ್ ವೀಕ್ಷಣೆ ಮತ್ತು ಭಾಗವಹಿಸುವವರ ಪಟ್ಟಿಯನ್ನು ನೋಡಬಹುದಾಗಿದೆ. ವಿಡಿಯೋ ಕಾಲ್ ಪೋರ್ಟ್ರೈಟ್ ಹಾಗೂ ಲ್ಯಾಂಡ್‌ಸ್ಕೇಪ್ ಆಯ್ಕೆ ಎರಡರಲ್ಲೂ ಲಭ್ಯವಿದೆ.

ಡೆಸ್ಕ್‌ಟಾಪ್ ‌ಟೆಲಿಗ್ರಾಮ್ ವಿಡಿಯೋ ಕಾಲ್‌ನಲ್ಲಿ ಸೆಲೆಕ್ಟಿವ್ ಸ್ಕ್ರೀನ್ ಶೇರಿಂಗ್ ಆಯ್ಕೆ‌ ಕೂಡ ಲಭ್ಯವಿದೆ. ಇದರಂತೆ ಆಯ್ದ ವೀಕ್ಷಕರಿಗೆ ಮಾತ್ರ ವಿಡಿಯೋ ಕಾಲ್ ಸ್ಕ್ರೀನ್ ಶೇರ್ ಮಾಡಬಹುದು. ಜೊತೆಗೆ ಡೆಸ್ಕ್‌ಟಾಪ್‌ ವಿಧಾನದಲ್ಲಿ ವಿಡಿಯೋ ಕಾಲ್ ಮಾಡುವಾಗ ಪ್ರತ್ಯೇಕವಾಗಿ ಮೆಸೇಜ್ ಹಾಗೂ ಆಡಿಯೋ ಮೆಸೇಜ್ ಕೂಡ ಮಾಡಬಹುದು. ಹೀಗೆ ಮಾಡುವಾಗ ವಿಡಿಯೋ ಕಾಲ್‌ನಿಂದ ಹೊರಬರಬೇಕು ಎಂದಿಲ್ಲ.

ಆದರೆ, ವಿಡಿಯೋ ಕಾಲ್‌ನಲ್ಲಿ ಸದ್ಯ ಭಾಗವಹಿಸಲು‌ ಮೊದಲ 30 ಜನರಿಗೆ ಮಾತ್ರ ಅವಕಾಶವಿದೆ. ಆದರೆ, ಟೆಲಿಗ್ರಾಂ‌ ಆಡಿಯೋ ಕಾಲ್‌ನಲ್ಲಿ ಎಷ್ಟು ಜನರೂ ಭಾಗಿಯಾಗಬಹುದು. ಹೆಚ್ಚುವರಿಯಾಗಿ ಟೆಲಿಗ್ರಾಮ್ ವಾಯ್ಸ್ ಚಾಟ್ ಆಯ್ಕೆಗಳು, ಅನಿಮೇಟೆಡ್ ಬ್ಯಾಕ್​ಗ್ರೌಂಡ್, ಸ್ಟಿಕ್ಕರ್​ಗಳು, ಅನಿಮೇಶನ್ ಎಫೆಕ್ಟ್​ಗಳನ್ನು ಪರಿಚಯಿಸಿದೆ.

ಇದನ್ನೂ ಓದಿ: Poco 5G Mobile Phone: ಪೋಕೋ M3 ಪ್ರೋ 5G ಜೂನ್ 8ಕ್ಕೆ ಫ್ಲಿಪ್​ಕಾರ್ಟ್​ನಲ್ಲಿ ಲಭ್ಯ; ಬಣ್ಣ, ಬೆಲೆ ಇತರ ಮಾಹಿತಿ

JioPhone Next: ಗೂಗಲ್ ಮತ್ತು ರಿಲಯನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಹೊಸ ಸ್ಮಾರ್ಟ್​ಫೋನ್ ಬಗ್ಗೆ ತಿಳಿದುಕೊಳ್ಳಿ

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ