Vivo S16 Series: ಒಂದಲ್ಲ ಎರಡಲ್ಲ ಮೂರು ಹೊಚ್ಚ ಹೊಸ ಆಕರ್ಷಕ ಸ್ಮಾರ್ಟ್ಫೋನ್ಸ್ ಬಿಡುಗಡೆ ಮಾಡಿದ ವಿವೋ
ವಿವೋ ಕಂಪನಿ ಇದೀಗ ವಿವೋ S16 ಸರಣಿ (Vivo S16 Series) ಅಡಿಯಲ್ಲಿ ಮೂರು ಅತ್ಯುತ್ತಮ ಮೊಬೈಲ್ ರಿಲೀಸ್ ಮಾಡಿದೆ. ಈ ಸರಣಿಯಲ್ಲಿ ವಿವೋ S16, ವಿವೋ S16 ಪ್ರೊ ಮತ್ತು ವಿವೋ S16e ಸ್ಮಾರ್ಟ್‌ಫೋನ್‌ಗಳು ಇದೆ.
ಪ್ರಸಿದ್ಧ ವಿವೋ (VIVO) ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಸ್ಮಾರ್ಟ್ಫೋನುಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಹೊಸ ವರ್ಷ ಆಗಮಿಸುತ್ತಿದ್ದಂತೆ ಹೊಸ ಆವೃತ್ತಿಯಲ್ಲಿ ಆಕರ್ಷಕ ಮೊಬೈಲ್ಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಇತ್ತೀಚೆಗಷ್ಟೆ ವಿವೋ ತನ್ನ Y ಸರಣಿಯಲ್ಲಿ ನಾಲ್ಕು ಫೋನ್ಗಳನ್ನು ಅನವರಣ ಮಾಡಿದ್ದ ಕಂಪನಿ ಇದೀಗ ವಿವೋ S16 ಸರಣಿ (Vivo S16 Series) ಅಡಿಯಲ್ಲಿ ಮೂರು ಅತ್ಯುತ್ತಮ ಮೊಬೈಲ್ ರಿಲೀಸ್ ಮಾಡಿದೆ. ಈ ಸರಣಿಯಲ್ಲಿ ವಿವೋ S16, ವಿವೋ S16 ಪ್ರೊ ಮತ್ತು ವಿವೋ S16e ಸ್ಮಾರ್ಟ್‌ಫೋನ್‌ಗಳು ಇದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಭರ್ಜರಿ ಫೀಚರ್ಗಳಿಂದ ಆವೃತ್ತವಾಗಿದ್ದು, ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜರ್ ಕೂಡ ಇದೆ. ಈ ಫೋನುಗಳ ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ.
ವಿವೋ S16 ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್‌ಹೆಚ್‌ಡಿ ಪ್ಲಸ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇನ್‌ಬಿಲ್ಟ್ ಸ್ಟೋರೇಜ್ ಪಡೆದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 64MP ಸೆನ್ಸಾರ್, ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಯೂನಿಟ್ ಅನ್ನು ಒಳಗೊಂಡಿದೆ. ಇದಲ್ಲದೆ 50MP ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ವಿವೋ S16 ಪ್ರೊ ಸ್ಮಾರ್ಟ್‌ಫೋನ್ ಕೂಡ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್ ವೇಗವನ್ನು ಪಡೆದಿದೆ. ಇದು ಆಂಡ್ರಾಯ್ಡ್ 13 ಆಧಾರಿತ OriginOS 3.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 512GB ಇನ್‌ಬಿಲ್ಟ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್ ಹೊಂದಿದೆ. ಇದಲ್ಲದೆ 50MP ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಿದೆ.
ವಿವೋ S16e ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಬೆಂಬಲಿಸುವ 6.62 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಇದು ಸ್ಯಾಮ್‌ಸಂಗ್ ಎಕ್ಸಿನೋಸ್ 1080 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50MP, ಎರಡನೇ ಕ್ಯಾಮೆರಾ 2MP ಮ್ಯಾಕ್ರೋ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ವಿವೋ S16 ಸರಣಿ ಭಾರತದ ಮಾರುಕಟ್ಟೆಗೆ ಇನ್ನಷ್ಟೆ ಕಾಲಿಡಬೇಕಿದೆ. ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ಅನವರಣಗೊಂಡಿರುವ ಈ ಸ್ಮಾರ್ಟ್ಫೋನ್ಗಳ ಬೆಲೆ ನೋಡೋಣ. ವಿವೋ S16 ಬೆಲೆ CNY 2,499, ಅಂದರೆ ಭರತದಲ್ಲಿ ಇದರ ಬೆಲೆ ಅಂದಾಜು 29,600ರೂ. ಎನ್ನಬಹುದು. ವಿವೋ S16 ಪ್ರೊ ಬೆಲೆ CNY 3,299 (ಅಂದಾಜು 39,100ರೂ) ಬೆಲೆಯಲ್ಲಿ ಪ್ರಾರಂಭವಾಗಲಿದೆ. ವಿವೋ S16e ಬೆಲೆ CNY 2,099 (ಸುಮಾರು 24,900ರೂ) ಬೆಲೆ ನಿಗದಿ ಮಾಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Sat, 24 December 22