Vivo T2 5G: ಇದು ಅತಿ ಕಡಿಮೆ ಬೆಲೆಯ ಬೆಸ್ಟ್ 5G ಸ್ಮಾರ್ಟ್​ಫೋನ್‌: ಇಂದಿನಿಂದ ವಿವೋ T2 ಖರೀದಿಗೆ ಲಭ್ಯ

|

Updated on: Apr 18, 2023 | 1:47 PM

ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ವಿವೋ ಸಂಸ್ಥೆ ಹೊಸ ವಿವೋ ಟಿ2 5ಜಿ (Vivo T2 5G) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಇಂದಿನಿಣದ ಈ ಫೋನ್ ಖರೀದಿಗೆ ಸಿಗುತ್ತಿದೆ.

Vivo T2 5G: ಇದು ಅತಿ ಕಡಿಮೆ ಬೆಲೆಯ ಬೆಸ್ಟ್ 5G ಸ್ಮಾರ್ಟ್​ಫೋನ್‌: ಇಂದಿನಿಂದ ವಿವೋ T2 ಖರೀದಿಗೆ ಲಭ್ಯ
Vivo T2 5G
Follow us on

ಭಾರತದಲ್ಲಿ 5ಜಿ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದುಕೂಡ ಬಜೆಟ್ ಬೆಲೆಗೆ ಎಂಬುದು ವಿಶೇಷ. ಸೋಮವಾರವಷ್ಟೆ ಸ್ಯಾಮ್​ಸಂಗ್ ಕಂಪನಿ ಕೇವಲ 13,490 ರೂ. ಗೆ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್‌ ರಿಲೀಸ್ ಮಾಡಿದೆ. ಜಿಯೋ, ಏರ್ಟೆಲ್ 5ಜಿ (Airtel 5G) ಸೇವೆ ದೇಶದೆಲ್ಲೆಡೆ ವಿಸ್ತರಣೆ ಆಗುತ್ತಿರುವ ಕಾರಣ ಪ್ರಸಿದ್ಧ ಸ್ಮಾರ್ಟ್​ಫೋನ್ ಬ್ರ್ಯಾಂಡ್​ಗಳು ಒಂದರ ಹಿಂದೆ ಒಂದರಂತೆ 5ಜಿ ಬೆಂಬಲ ನೀಡುವ ಮೊಬೈಲ್ (Mobile) ಅನ್ನು ರಿಲೀಸ್ ಮಾಡುತ್ತಿದೆ. ಕಳೆದ ವಾರ ಕೂಡ ದೇಶಿಯ ಮಾರುಕಟ್ಟೆಯಲ್ಲಿ ವಿವೋ ಸಂಸ್ಥೆ ಹೊಸ ವಿವೋ ಟಿ2 5ಜಿ (Vivo T2 5G) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಇಂದಿನಿಣದ ಈ ಫೋನ್ ಖರೀದಿಗೆ ಸಿಗುತ್ತಿದೆ.

ಬೆಲೆ ಎಷ್ಟು?:

ವಿವೋ T2 5G ಸ್ಮಾರ್ಟ್​ಫೋನ್‌ ಭಾರತದಲ್ಲಿ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿತ್ತು. ಇದರ 4GB RAM + 128GB ವೇರಿಯಂಟ್‌ಗೆ ಕೇವಲ 12,999 ರೂ. ಇದೆ. ಅಂತೆಯೆ 6GB RAM + 128GB ಸ್ಟೋರೇಜ್ ಮಾದರಿಗೆ 13,999 ರೂ. ನಿಗದಿ ಮಾಡಲಾಗಿದೆ. 8GB RAM + 128GB ಸ್ಟೋರೇಜ್ ಆಯ್ಕೆಗೆ 15,999 ರೂ. ಇದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಸೇರಿದಂತೆ ವಿವೋ ಅಧಿಕೃತ ವೆಬ್​ಸೈಟ್​ನಲ್ಲಿ ಇಂದಿನಿಂದ ಖರೀದಿಗೆ ಸಿಗುತ್ತಿದೆ. ಆಫರ್ ಕೂಡ ಘೋಷಣೆ ಮಾಡಲಾಗಿದ್ದು ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ 1,500 ರೂ. ತ್ವರಿತ ರಿಯಾಯಿತಿ ಸಿಗಲಿದೆ.

ಇದನ್ನೂ ಓದಿ
Samsung Galaxy M14 5G: ಬರೋಬ್ಬರಿ 6000mAh ಬ್ಯಾಟರಿ: ಸ್ಯಾಮ್​ಸಂಗ್​ನಿಂದ ಹುಬ್ಬೇರಿಸುವಂತಹ ಫೋನ್ ಬಿಡುಗಡೆ: ಭರ್ಜರಿ ಮಾರಾಟ ಖಚಿತ
UPI 123Pay: ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಯುಪಿಐ ಪೇಮೆಂಟ್ ಮಾಡುವುದು ಹೇಗೆ? ಇಲ್ಲಿದೆ 123ಪೇ ಡೀಟೇಲ್ಸ್
Unlimited Data: ಜಿಯೋದಲ್ಲಿ 599 ರೂಗೆ ಅನ್​ಲಿಮಿಟೆಡ್ ಡಾಟಾ; ವೊಡಾಫೋನ್, ಏರ್​ಟೆಲ್, ಬಿಎಸ್ಸೆನ್ನೆಲ್​ನಲ್ಲಿ ಯಾವೆಲ್ಲಾ ಬೆಸ್ಟ್ ಪ್ಲಾನ್​ಗಳಿವೆ?
Xiaomi Robot Vacuum-Mop 2i: ಸ್ಮಾರ್ಟ್ ಆಗಿ ಮನೆ ಕ್ಲೀನ್ ಮಾಡಲು ಶಓಮಿ ರೊಬಾಟ್ ವಾಕ್ಯೂಮ್ ಮಾಪ್

Asus ROG Phone 7: ಕ್ರೇಜಿ ಗೇಮಿಂಗ್ ಫೀಚರ್ಸ್ ₹74,999 ಏಸಸ್ ರಾಗ್ ಫೋನ್ 7

ಫೀಚರ್ಸ್ ಏನಿದೆ?:

ವಿವೋ T2 5G ಸ್ಮಾರ್ಟ್​ಫೋನ್‌ ಅಧಿಕ ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 6.38 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಸೂರ್ಯನ ಕಿರಣ ಮೊಬೈಲ್ ಮೇಲೆ ಬಿದ್ದರೂ ಡಿಸ್ ಪ್ಲೇ ಬ್ರೈಟ್ ಆಗಿ ಕಾಣಲಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸಲಿದೆ. ಮೈಕ್ರೊ ಎಸ್​ಡಿ ಕಾರ್ಡ್ ಮೂಲಕ ಸಂಗ್ರಹಣೆ ವಿಸ್ತರಣೆ ಮಾಡಬಹುದು. ಇನ್​ ಡಿಸ್ ಪ್ಲೇ ಫಿಂಗರ್​ಪ್ರಿಂಟ್ ಆಯ್ಕೆ ನೀಡಲಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಒಳಗೊಂಡಿದೆ. ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್‌ ಸಾಮರ್ಥ್ಯದಿಂದ ಕೂಡಿದೆ. 12 ಮೆಗಾ ಪಿಕ್ಸಲ್​ನ ಡೆಪ್ತ್ ಸೆನ್ಸಾರ್ ನೀಡಲಾಗಿದೆ. ಹಾಗೆಯೇ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾ ಪಿಕ್ಸಲ್‌ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ.

4,700mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದ್ದು, ಇದು 44W ವೋಲ್ಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತೆದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದುಕೊಂಡಿದೆ. ಉಳಿದಂತೆ 4G LTE, Wi-Fi, ಬ್ಲೂಟೂತ್, GPS/ A-GPS, USB ಟೈಪ್-C, 3.55mm ಆಡಿಯೋ ಜ್ಯಾಕ್ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:46 pm, Tue, 18 April 23