ಚೀನಾ ಮೂಲದ ಪ್ರಸಿದ್ಧ ವಿವೋ ಕಂಪನಿ ಹೊಸ ಸ್ಮಾರ್ಟ್ಫೋನ್ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಇದೀಗ ವಿವೋ X100 ಪ್ರೊ (Vivo X100 Pro) ಮತ್ತು ವಿವೋ X100 ಸ್ಮಾರ್ಟ್‌ಫೋನ್‌ಗಳು ಹೊಚ್ಚಹೊಸ ಮೀಡಿಯಾಟೆಕ್ ಡೈಮೆನ್ಸಿಟಿ 9300 SoC ಯೊಂದಿಗೆ ಚೀನಾದಲ್ಲಿ ಬಿಡುಗಡೆಯಾಗಿದೆ. ಈ X ಸರಣಿಯ ಹ್ಯಾಂಡ್‌ಸೆಟ್‌ಗಳು ಆಂಡ್ರಾಯ್ಡ್ 14 -ಆಧಾರಿತ OriginOS 4 ನಲ್ಲಿ ರನ್ ಆಗುತ್ತವೆ. ಜೊತೆಗೆ ಆಕರ್ಷಕ ಡಿಸ್ ಪ್ಲೇ, ಕ್ಯಾಮೆರಾ, ಬಲಿಷ್ಠ ಬ್ಯಾಟರಿ ಆಯ್ಕೆಯನ್ನು ಕೂಡ ಒಳಗೊಂಡಿದೆ. ಈ ಎರಡೂ ಫೋನುಗಳ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿವೋ X100 ಪ್ರೊ ನಾಲ್ಕು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 12GB + 256GB RAM ಸ್ಟೋರೇಜ್ ರೂಪಾಂತರಕ್ಕೆ CNY 4,999 (ಸುಮಾರು ರೂ. 56,500) ಇದೆ. 16GB + 256GB ರೂಪಾಂತರಕ್ಕೆ CNY 5,299 (ಸರಿಸುಮಾರು ರೂ. 60,000), 16GB + 512GB ಕಾನ್ಫಿಗರೇಶನ್‌ಗೆ CNY 5,499 (ಸರಿಸುಮಾರು ರೂ. 62,000) ಮತ್ತು 16GB + 1TB ಆಯ್ಕೆಗೆ CNY 5,990 ನಿಗದಿ ಮಾಡಲಾಗಿದೆ.
ಸ್ಮಾರ್ಟ್ಫೋನ್ಗಳಿಗೆ ಜೀವಿತಾವಧಿ ಇದೆಯೇ?: ಒಂದು ಫೋನನ್ನು ಎಷ್ಟು ಸಮಯ ಬಳಸಬಹುದು?
ವಿವೋ X100 ಸ್ಮಾರ್ಟ್ಫೋನ್ನ 12GB + 256GB ಶೇಖರಣಾ ರೂಪಾಂತರಕ್ಕೆ ಸಿಎನ್‌ವೈ 3,999 (ಸರಿಸುಮಾರು 50,000 ರೂ.). 16GB + 256GB ಸ್ಟೋರೇಜ್ ಆಯ್ಕೆಗೆ CNY 4,299 (ಸುಮಾರು ರೂ. 48,000), 16GB + 512GB ಮಾದರಿಗೆ CNY 4,599 (ಸುಮಾರು ರೂ. 52,000) ಇದೆ.
ಡ್ಯುಯಲ್ ಸಿಮ್ (ನ್ಯಾನೋ) ವಿವೋ X100 ಪ್ರೊ ಆಂಡ್ರಾಯ್ಡ್ 14-ಆಧಾರಿತ OriginOS 4 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.78-ಇಂಚಿನ (1,260 x 2,800 ಪಿಕ್ಸೆಲ್‌ಗಳು) AMOLED 8T LTPO ಡಿಸ್‌ಪ್ಲೇ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ಯಿಂದ ಕಾರ್ಯನಿರ್ವಹಿಸುತ್ತದೆ.
ಈ ಫೋನಿನಲ್ಲಿ Zeiss ಬ್ರ್ಯಾಂಡೆಡ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ 50-ಮೆಗಾಪಿಕ್ಸೆಲ್ Sony IMX989 ನಿಂದ ಕೂಡಿದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ ಇದೆ. 50-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ Zeiss APO ಸೂಪರ್-ಟೆಲಿಫೋಟೋ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಟೆಲಿಫೋಟೋ ಕ್ಯಾಮರಾ 4.3x ಆಪ್ಟಿಕಲ್ ಜೂಮ್ ಅನ್ನು ಬೆಂಬಲಿಸುತ್ತದೆ. ಮುಂಭಾಗದಲ್ಲಿ, ಹ್ಯಾಂಡ್‌ಸೆಟ್ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,400mAh ಬ್ಯಾಟರಿಯನ್ನು ನೀಡಲಾಗಿದೆ. ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವು ಕೇವಲ 12.5 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದಷ್ಟು ಬ್ಯಾಟರಿಯನ್ನು ತುಂಬುತ್ತದೆ ಎಂದು ಕಂಪನಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 7, ಬ್ಲೂಟೂತ್, NFC, USB ಟೈಪ್-C ಪೋರ್ಟ್ ಸೇರಿವೆ. ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವಿದೆ.
ವಿವೋ X100 ಪ್ರೊ ಮಾದರಿಯಂತೆಯೇ ಇದು ಅದೇ ಡಿಸ್ಪ್ಲೇ ಫೀಚರ್ಸ್ ಹೊಂದಿದೆ. 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ಯಲ್ಲಿ ಕಾರ್ಯನಿರ್ವಹಿಸುತ್ತದೆ. Zeiss-ಬ್ರಾಂಡ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. OIS ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ Sony IMX920 VCS ಬಯೋನಿಕ್ ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 100x ಸ್ಪಷ್ಟ ಜೂಮ್‌ನೊಂದಿಗೆ 64-ಮೆಗಾಪಿಕ್ಸೆಲ್ Zeiss ಸೂಪರ್-ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ, 32-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇದೆ.
ವಿವೋ X100 ಫೋನ್ 5,000mAh ಬ್ಯಾಟರಿ, 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇದು ಕೇವಲ 11 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಬ್ಯಾಟರಿಯನ್ನು ತುಂಬುತ್ತದೆ. ಒಂದೇ ಚಾರ್ಜ್‌ನಲ್ಲಿ ಬ್ಯಾಟರಿಯು 14.8 ದಿನಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು ಒದಗಿಸುತ್ತದೆ. ಈ ಹ್ಯಾಂಡ್‌ಸೆಟ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ. ದೃಢೀಕರಣಕ್ಕಾಗಿ ಫೇಸ್ ಆನ್ಲಾಕ್ ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ