AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Ban: ಎಚ್ಚರ: ವಾಟ್ಸ್​ಆ್ಯಪ್​ನಲ್ಲಿ ಅತಿ ಹೆಚ್ಚು ಗುಡ್​ ಮಾರ್ನಿಂಗ್ ಮೆಸೇಜ್ ಮಾಡುತ್ತಿದ್ದೀರಾ?: ಅಕೌಂಟ್ ಬ್ಯಾನ್ ಆಗುತ್ತದೆ

ನೀವು ವಾಟ್ಸ್​ಆ್ಯಪ್​ನಲ್ಲಿ ನಿಮ್ಮ ಅನೇಕ ಸ್ನೇಹಿತರಿಗೆ ಹೆಚ್ಚು ಹೆಚ್ಚು ಕೇವಲ ಗುಡ್ ಮಾರ್ನಿಂಗ್ ಮೆಸೇಜ್ ಕುಳುಹಿಸಿದರೂ ನಿಮ್ಮ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಆಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿ ತಿಂಗಳು ಮಿಲಿಯನ್ ವಾಟ್ಸ್​ಆ್ಯಪ್ ಅಕೌಂಟ್ ನಿಷೇಧವಾಗುತ್ತದೆ.

WhatsApp Ban: ಎಚ್ಚರ: ವಾಟ್ಸ್​ಆ್ಯಪ್​ನಲ್ಲಿ ಅತಿ ಹೆಚ್ಚು ಗುಡ್​ ಮಾರ್ನಿಂಗ್ ಮೆಸೇಜ್ ಮಾಡುತ್ತಿದ್ದೀರಾ?: ಅಕೌಂಟ್ ಬ್ಯಾನ್ ಆಗುತ್ತದೆ
WhatsApp Ban
TV9 Web
| Updated By: Vinay Bhat|

Updated on:Oct 18, 2022 | 12:00 PM

Share

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷಶನ್ ವಾಟ್ಸ್​ಆ್ಯಪ್ (WhatsApp) ಅನ್ನು ಇಂದು ಬಳಸುತ್ತಿರುವವರ ಸಂಖ್ಯೆ ಕೋಟಿ ಗಟ್ಟಲೆಯಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್​ಗಳನ್ನು ಬಿಡುತ್ತಿರುವ ವಾಟ್ಸ್​ಆ್ಯಪ್ ಪ್ರೈವಸಿಗೆ ಸಂಬಂಧಿಸಿದಂತೆ ಪ್ರತಿಬಾರಿ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತದೆ. 2021 ರಲ್ಲಿ ನೂತನ ಐಟಿ ನಿಯಮ (IT Rule 2021) ಬಂದ ಮೇಲಂತು ಬಳಕೆದಾರರ ಸುರಕ್ಷತೆ ಬಗ್ಗೆ ಗಮನ ಹರಿಸುತ್ತಿರುವ ವಾಟ್ಸ್​ಆ್ಯಪ್​ನಲ್ಲಿ ಒಂದು ಚಿಕ್ಕ ತಪ್ಪಾದರು ನಿಮ್ಮ ಅಕೌಂಟ್ ನಿಷೇಧಕ್ಕೆ (WhatsApp Ban) ಒಳಗಾಗಬಹುದು. ಎಷ್ಟರ ಮಟ್ಟಿಗೆ ಎಂದರೆ ನೀವು ವಾಟ್ಸ್​ಆ್ಯಪ್​ನಲ್ಲಿ ನಿಮ್ಮ ಅನೇಕ ಸ್ನೇಹಿತರಿಗೆ ಹೆಚ್ಚು ಹೆಚ್ಚು ಕೇವಲ ಗುಡ್ ಮಾರ್ನಿಂಗ್ ಮೆಸೇಜ್ ಕುಳುಹಿಸಿದರೂ ನಿಮ್ಮ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಆಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿ ತಿಂಗಳು ಮಿಲಿಯನ್ ವಾಟ್ಸ್​ಆ್ಯಪ್ ಅಕೌಂಟ್ ನಿಷೇಧವಾಗುತ್ತದೆ.

ನೀವು ಯಾವುದೇ ತಪ್ಪು ಮಾಡದಿದ್ದರೂ ಅನೇಕ ಕಾರಣಗಳಿಗೆ ನಿಮ್ಮ ವಾಟ್ಸ್​ಆ್ಯಪ್ ಖಾತೆ ನಿಷೇಧವಾಗಬಹುದು. ಅಕೌಂಟ್ ಅನ್ನು ಸ್ಪ್ಯಾಮ್ ಮಾಡುತ್ತಿರಬಹುದು ಅಥವಾ ಫಾರ್ವರ್ಡ್ ಆಗಿ ಬಂದ ಸುಳ್ಳು ಸುದ್ದಿಗಳನ್ನು ಅರಿಯದೆ ಅದನ್ನು ಇತರರಿಗೆ ಫಾರ್ವರ್ಡ್ ಮಾಡಿರಬಹುದು ಅಥವಾ ಬ್ರಾಡ್​ಕಾಸ್ಟ್ ಲಿಸ್ಟ್ ಅನ್ನು ಅತಿಯಾಗಿ ಉಪಯೋಗಿಸುವುದರಿಂದಲೂ ನಿಮ್ಮ ಖಾತೆ ನಿಷೇಧಕ್ಕೆ ಒಳಗಾಗುತ್ತದೆ. ಗುಡ್​ ಮಾರ್ನಿಂಗ್ ಮೆಸೇಜ್ ಅನ್ನು ಬ್ರಾಡ್​ಕಾಸ್ಟ್ ಮೂಲಕ ಹೆಚ್ಚು ಹೆಚ್ಚು ಜನರಿಗೆ ಕಳುಹಿಸಿದರೆ ಅದು ಸ್ಪ್ಯಾಮ್ ಮೆಸೇಜ್ ಆಗಬಹುದು. ಇದರಿಂದ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್ ಆಗುವ ಸಾಧ್ಯತೆ ಇರುತ್ತದೆ.

ಕಳೆದ ಅಗಸ್ಟ್ ತಿಂಗಳಲ್ಲಿ ಭಾರತದಲ್ಲಿ 2.3 ಮಿಲಿಯನ್ ಭಾರತೀಯರ ವಾಟ್ಸ್​ಆ್ಯಪ್ ಖಾತೆ ನಿಷೇಧಿಸಲಾಗಿತ್ತು. ಇದಕ್ಕೆ ಮುಖ್ಯ ಕಾರಣ ತಪ್ಪು ಮಾಹಿತಿಗಳನ್ನು ಶೇರ್ ಮಾಡಿರುವುದು, ಸ್ಕ್ಯಾಮ್ ಮೆಸೇಜ್​ಗಳನ್ನು ಫಾರ್ವರ್ಡ್ ಮಾಡಿದ್ದು ಮುಖ್ಯವಾದವು. ಯಾವುದೇ ಅಹಿತಕರ ಚಟುವಟಿಕೆ ಕಂಡುಬಂದಲ್ಲಿ ನಿಮ್ಮ ಖಾತೆ ಬ್ಯಾನ್ ಆಗುತ್ತದೆ.

ಇದನ್ನೂ ಓದಿ
Image
Redmi A1+: ಬಜೆಟ್ ಪ್ರಿಯರು ಫಿದಾ ಆಗಿರುವ 6,999 ರೂಪಾಯಿ ರೆಡ್ಮಿ A1+ ಈಗ ಖರೀದಿಗೆ ಲಭ್ಯ
Image
Moto E22s: ಕೇವಲ 8,999 ರೂ. ಗೆ ಮೋಟೋ ಕಂಪನಿಯಿಂದ ಬಂಪರ್ ಫೋನ್ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರೆಂಟಿ
Image
PM Kisan Samman Nidhi: ಪಿಎಂ ಕಿಸಾನ್​ ಯೋಜನೆಯ 12ನೇ ಕಂತು ಬಿಡುಗಡೆ: ಹಣ ಬಂದಿದೆಯೇ ಎಂದು ನೋಡುವುದು ಹೇಗೆ?
Image
WhatsApp Features: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಒಂದಲ್ಲ ಎರಡಲ್ಲ ಬರೋಬ್ಬರಿ 5 ಹೊಸ ಫೀಚರ್ಸ್: ಶಾಕ್ ಆದ ಬಳಕೆದಾರರು

ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ವಿಷೇಧ ವಿಧಿಸುತ್ತದೆ. ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, “ವಾಟ್ಸ್​ಆ್ಯಪ್ ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚಚಿನ ಗಮನ ಹರಿಸುತ್ತಿದೆ. ವರ್ಷಗಳಲ್ಲಿ, ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು, ತಜ್ಞರು ಮತ್ತು ಇನ್ನಿತರ ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಿದ್ದೇವೆ” ಎಂದಿದ್ದಾರೆ.

ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್‌ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು. ಹೀಗಾಗಿ ಎಚ್ಚರದಿಂದಿರಿ.

ನಿಮ್ಮ ಖಾತೆಯನ್ನು ತಪ್ಪಾಗಿ ನಿಷೇಧಿಸಿದರೆ ಏನು ಮಾಡಬೇಕು?:

  • ನಿಮ್ಮ ಖಾತೆಯನ್ನು ವಾಟ್ಸ್​ಆ್ಯಪ್​ ನಿರ್ಬಂಧಿಸಿದ್ದರೆ ಇದರನ್ನು ಸರಿಪಡಿಸಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಿ.
  • ವಾಟ್ಸ್​ಆ್ಯಪ್​ ಅನ್ನು ಇಮೇಲ್ ಮಾಡಿ ಅಥವಾ ಆ್ಯಪ್​ನಲ್ಲಿ ರಿವ್ಯೂ ಆಯ್ಕೆಯನ್ನು ಟ್ಯಾಪ್ ಮಾಡಿ.
  • ಈಗ ವಾಟ್ಸ್​ಆ್ಯಪ್​ ನಿಮ್ಮ ಬಗ್ಗೆ ಬಂದಿರುವ ದೂರುಗಳನ್ನು ಪರಿಶೀಲಿಸಿ ಬಳಿಕ ನಿಮ್ಮನ್ನು ಸಂಪರ್ಕಿಸುತ್ತದೆ.
  • ವಾಟ್ಸ್​ಆ್ಯಪ್​ನಲ್ಲಿ ರಿವ್ಯೂ ರಿಕ್ವೆಸ್ಟ್​ ನೀಡಿದಾಗ ನಿಮಗೆ SMS ಮೂಲಕ ಕಳುಹಿಸಲಾದ 6-ಅಂಕಿಯ ನೋಂದಣಿ ಕೋಡ್ ಅನ್ನು ನಮೂದಿಸಿ.
  • ಕೋಡ್ ನಮೂದಿಸಿದ ನಂತರ ನಿಮಗೆ ರಿವ್ಯೂ ಬರೆಯಲು ಅನುಮತಿ ಸಿಗುತ್ತದೆ ಜೊತೆಗೆ ನಿಮ್ಮ ಬಗ್ಗೆ ಬಂದ ದೂರಿನ ಬಗ್ಗೆ ಮಾತನಾಡಬಹುದು.

Published On - 12:00 pm, Tue, 18 October 22

ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗಜಲಕ್ಷ್ಮಿ, ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ
ಗಜಲಕ್ಷ್ಮಿ, ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ
ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿ
ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿ
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ