WhatsApp New Feature: ಮೆಟಾದಿಂದ ಬಿಗ್ ಸರ್​ಪ್ರೈಸ್: ಹೊಸ ಡಿಸೈನ್​ನಲ್ಲಿ ನಿಮ್ಮ ವಾಟ್ಸ್​ಆ್ಯಪ್ ಅಕೌಂಟ್

ಮೆಟಾ ತನ್ನ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್​ ಅನ್ನು ಹೊಸ ಸ್ಟೈಲ್​ನಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಅಂದರೆ ನೀವು ವಾಟ್ಸ್​ಆ್ಯಪ್ ತೆರೆದ ಬಳಿಕ ಸೆಟ್ಟಿಂಗ್ಸ್, ಚಾಟ್ ಲಿಸ್ಟ್​ ಹೊಸ ಮಾದರಿಯಲ್ಲಿ ಗೋಚರಿಸಲಿದೆ.

WhatsApp New Feature: ಮೆಟಾದಿಂದ ಬಿಗ್ ಸರ್​ಪ್ರೈಸ್: ಹೊಸ ಡಿಸೈನ್​ನಲ್ಲಿ ನಿಮ್ಮ ವಾಟ್ಸ್​ಆ್ಯಪ್ ಅಕೌಂಟ್
WhatsApp
Follow us
|

Updated on:Apr 10, 2023 | 3:29 PM

ವಿಶ್ವದಲ್ಲಿ 2000 ಮಿಲಿಯನ್​ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆಯನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಈಗಾಗಲೇ ಅನೇಕ ಫೀಚರ್​ಗಳನ್ನು ಪರಿಚಯಿಸಿ ಗ್ರಾಹಕರ ನೆಚ್ಚಿನ ಆ್ಯಪ್ ಎನಿಸಿಕೊಂಡಿದೆ. ಆಂಡ್ರಾಯ್ಡ್, ಐಒಎಸ್ (iOS), ವೆಬ್ ಬಳಕೆದಾರರಿಗೆ ನೂತನ ಆಯ್ಕೆಗಳನ್ನು ಪರಿಚಯಿಸುತ್ತಿರುವ ವಾಟ್ಸ್​ಆ್ಯಪ್​ನಲ್ಲಿ ಸಾಲು ಸಾಲು ಅಪ್ಡೇಟ್​ಗಳು ಬರಲು ಪರೀಕ್ಷಾ ಹಂತದಲ್ಲಿದೆ. ಈವರೆಗೆ ವಿಶೇಷ ಫೀಚರ್​ಗಳನ್ನು ಮಾತ್ರ ಪರಿಚಯಿಸುತ್ತಿದ್ದ ಈ ಮೆಸೇಜಿಂಗ್ ಆ್ಯಪ್ ಇದೀಗ ತನ್ನ ನೋಟವನ್ನು ಬದಲಾಯಿಸಲು ಮುಂದಾಗಿದೆ. ಸದ್ಯದಲ್ಲೇ ವಾಟ್ಸ್​ಆ್ಯಪ್ (WhatsApp) ಹೊಸ ರೂಪದಲ್ಲಿ ಬಳಕೆದಾರರಿಗೆ ಸಿಗಲಿದೆ.

ಮೆಟಾ ತನ್ನ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್​ ಅನ್ನು ಹೊಸ ಸ್ಟೈಲ್​ನಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಅಂದರೆ ನೀವು ವಾಟ್ಸ್​ಆ್ಯಪ್ ತೆರೆದ ಬಳಿಕ ಸೆಟ್ಟಿಂಗ್ಸ್, ಚಾಟ್ ಲಿಸ್ಟ್​ ಹೊಸ ಮಾದರಿಯಲ್ಲಿ ಗೋಚರಿಸಲಿದೆ. ಮೊದಲಿಗೆ ಈ ಆಯ್ಕೆ ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ. ನಂತರ ಆಂಡ್ರಾಯ್ಡ್​ನಲ್ಲಿ ಬರಲಿದೆ.

Flipkart Mobile Bonanza Sale: ಫ್ಲಿಪ್​ಕಾರ್ಟ್​ನಲ್ಲಿ ಮೊಬೈಲ್ಸ್ ಬೊನಾನ್ಜಾ ಸೇಲ್: ಈ ಸ್ಮಾರ್ಟ್​ಫೋನ್ಸ್​ಗೆ ಬಂಪರ್ ಡಿಸ್ಕೌಂಟ್

ಇದನ್ನೂ ಓದಿ
Image
OnePlus Nord CE 3 Lite 5G vs Realme 10 Pro 5G: ಯಾವ ಪೋನ್ ಬೆಸ್ಟ್?
Image
POCO C51: ಇಂದಿನಿಂದ ಪೋಕೋ C51 ಸ್ಮಾರ್ಟ್​ಫೋನ್ ಮಾರಾಟ ಆರಂಭ: ಕೇವಲ 7,999 ರೂ. ಗೆ ಖರೀದಿಸಿ
Image
Tech Tips: ಮಿಸ್ ಆಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಯ್ತಾ?: ಟೆನ್ಶನ್ ಬೇಡ, ಹೀಗೆ ಮಾಡಿ
Image
Vivo T2 5G: ಭಾರತದಲ್ಲಿ ರಿಲೀಸ್​ಗೆ ರೆಡಿಯಾದ ವಿವೋ ಕಂಪನಿಯ ಎರಡು 5G ಸ್ಮಾರ್ಟ್​ಫೋನ್ಸ್​: ಯಾವುದು?, ಬೆಲೆ ಎಷ್ಟು?

ಸ್ಟೇಟಸ್ ವಿಭಾಗದಲ್ಲಿ ಬದಲಾವಣೆ:

ವಾಟ್ಸ್​ಆ್ಯಪ್ ಕೆಲವೇ ದಿನಗಳಲ್ಲಿ ತನ್ನ ಸ್ಟೇಟಸ್ ವಿಭಾಗದಲ್ಲಿ ಬದಲಾವಣೆ ಮಾಡಲಿದೆ. ಅಂದರೆ ನೀವು ವಾಟ್ಸ್​ಆ್ಯಪ್​ನಲ್ಲಿ ಏನಾದರು ಸ್ಟೇಟಸ್ ಹಂಚಿಕೊಂಡರೆ ಅದು ನೇರವಾಗಿ ಫೇಸ್​ಬುಕ್​ ಸ್ಟೇಟಸ್​ನಲ್ಲೂ ಕಾಣಿಸಲಿದೆ. ಈ ಹಿಂದೆ ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ಹಂಚಿಕೊಂಡರೆ ಅದನ್ನು ಎಫ್​ಬಿಗೂ ಶೇರ್ ಮಾಡಬೇಕಿತ್ತು. ಆದರೀಗ ಹೊಸ ಫೀಚರ್ ಪ್ರಕಾರ ಅಟೋಮೆಟ್ ಆಗಿ ವಾಟ್ಸ್​ಆ್ಯಪ್​ನಲ್ಲಿ ಶೇರ್ ಮಾಡಿದ ಸ್ಟೇಟಸ್ ಫೇಸ್​ಬುಕ್​ ಸ್ಟೇಟಸ್​ಗೂ ಅಪ್​ಲೋಡ್ ಆಗಲಿದೆ. ಹಾಗಂತ ಇದು ಕಡ್ಡಾಯವಲ್ಲ. ವಾಟ್ಸ್​ಆ್ಯಪ್​ನಲ್ಲಿ ಹೊಸ ಆಯ್ಕೆಯೊಂದು ಕಾಣಿಸಲಿದ್ದು ಆನ್​-ಆಫ್ ಮಾಡುವ ಮೂಲಕ ಇದನ್ನು ಬಳಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸದ್ಯದಲ್ಲೇ ಈ ಆಯ್ಕೆ ಸಿಗಲಿದೆಯಂತೆ.

ಚಾಟ್ ಅನ್ನು ಲಾಕ್ ಮಾಡಬಹುದು:

ಇನ್ನು ಸದ್ಯದಲ್ಲೇ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ ಮಾಡಬಹುದು. ವಾಟ್ಸ್​ಆ್ಯಪ್ ಕುರಿತ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ Wabetainfo ಈ ಬಗ್ಗೆ ವರದಿ ಮಾಡಿದ್ದು, ವಾಟ್ಸ್​ಆ್ಯಪ್​ನಲ್ಲಿ ಚಾಟ್ ಅನ್ನು ಲಾಕ್ ಮಾಡಿದಾಗ ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಮಾತ್ರ ತೆರೆಯಲು ಸಾಧ್ಯವಾಗುತ್ತಂತೆ. ಹೀಗಿದ್ದಾಗ ಇದನ್ನು ಬೇರೆ ಯಾರೂ ಸಹ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ಆಯ್ಕೆ ಚಾಟ್​ನ ಕಾಂಟೆಕ್ಟ್ ಅಥವಾ ಗ್ರೂಪ್​ನ ಇನ್​ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್​ಗೆ ಹೋಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Mon, 10 April 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ