ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಕಳೆದ ವರ್ಷ ಪರಿಚಯಿಸಿದ ಫೀಚರ್ಗಳಿಗೆ ಲೆಕ್ಕವಿಲ್ಲ. 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡ ವಾಟ್ಸ್ಆ್ಯಪ್ ಈ ವರ್ಷ ಕೂಡ ವಿಶೇಷ ಅಪ್ಡೆಟ್ಗಳನ್ನು ಪರಿಚಯಿಸುವಲ್ಲಿ ಕೆಸಲ ಮಾಡುತ್ತಿದೆ. ಇದಕ್ಕಾಗಿಯೆ ವಾಟ್ಸ್ಆ್ಯಪ್ ಅನ್ನು ಇಂದು ವಿಶ್ವದಲ್ಲಿ ಬಳಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಹೆಚ್ಚಾಗಿ ಮೊಬೈಲ್ ಬಳಕೆದಾರರಿಗೆ ನೂತನ ಆಯ್ಕೆಗಳನ್ನು ಪರಿಚಯಿಸುವ ವಾಟ್ಸ್ಆ್ಯಪ್ (WhatsApp) ಇದೀಗ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆಯನ್ನು ನೀಡುತ್ತಿದೆ. ಸದ್ಯದಲ್ಲೇ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ವಾಯ್ಸ್ ಮೆಸೇಜ್ (Voice Message) ಅನ್ನು ಹಂಚಿಕೊಳ್ಳಬಹುದು.
ವಾಯ್ಸ್ ನೋಟ್ ಅನ್ನು ಸ್ಟೇಟಸ್ನಲ್ಲಿ ಹಂಚಿಕೊಳ್ಳಬಹುದಾದ ಆಯ್ಕೆ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗಲಿದೆ. ಈಗಾಗಲೇ ಇದು ಆಂಡ್ರಾಯ್ಡ್ ಬೇಟಾ ವರ್ಷನ್ನಲ್ಲಿ ಲಭ್ಯವಾಗಿದೆ. ಈವರೆಗೆ ಸ್ಟೇಟಸ್ನಲ್ಲಿ ವಿಡಿಯೋ, ಫೋಟೋ, ಲಿಂಕ್ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ ವಾಯ್ಸ್ ನೋಟ್ ಎಂಬ ಹೊಸ ಫೀಚರ್ ಬಳಕೆದಾರರು ಸ್ಟೇಟಸ್ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್ಗಳನ್ನು ಶೇರ್ ಮಾಡಬಹುದಾಗಿದೆ. 30 ಸೆಕೆಂಡ್ಗಳ ಕಾಲ ಇದು ಇರಲಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿದೆ.
Twitter: ಪರಿವರ್ತನೆ ಹಾದಿಯಲ್ಲಿ ಟ್ವಿಟರ್; ಹೊಸ ಫೀಚರ್ಸ್ ಘೋಷಿಸಿದ ಎಲಾನ್ ಮಸ್ಕ್
ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಪ್ರಮುಖ ಐದು ಚಾಟ್‌ಗಳನ್ನು ಪಿನ್ ಮಾಡುವಂತಹ ಆಯ್ಕೆ ನೀಡಲು ಮುಂದಾಗಿದೆ. ಈ ಫೀಚರ್ ಮೂಲಕ ನೀವು ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಚಾಟ್ ಮಾಡುವ ಪ್ರಮುಖ ಐದು ಚಾಟ್‌ಗಳನ್ನು ಪಿನ್ ಮಾಡಬಹುದಾಗಿದೆ. ಈ ಚಾಟ್‌ಗಳು ನಿಮ್ಮ ವಾಟ್ಸ್ಆ್ಯಪ್ ಚಾಟ್‌ನ ಮೇಲ್ಭಾಗದಲ್ಲಿ ಗೋಚರಿಸುತ್ತದೆ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಬಳಕೆದಾರರಿಗೆ ಸಿಗಲಿದೆಯಂತೆ. ಸದ್ಯ ಈ ಹೊಸ ಫೀಚರ್ಸ್ ಬಗ್ಗೆ ವಾಬೇಟಾಇನ್ಫೋ ವೆಬ್‌ಸೈಟ್ ವರದಿ ಮಾಡಿದೆ. ಪ್ರಸ್ತುತ, ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಚಾಟ್ ವಿಂಡೋದ ಮೇಲೆ ಕೇವಲ ಮೂರು ಚಾಟ್‌ಗಳನ್ನು ಮಾತ್ರ ಪಿನ್ ಮಾಡಬಹುದು. ಆದರೆ ಹೊಸ ಆಯ್ಕೆಯಲ್ಲಿ ನೀವು ಐದು ಚಾಟ್‌ಗಳನ್ನು ಪಿನ್ ಮಾಡುವುದಕ್ಕೆ ಅವಕಾಶ ಸಿಗಲಿದೆ.
ಇದರ ಜೊತೆಗೆ ವಾಟ್ಸ್ಆ್ಯಪ್ ತನ್ನ ಡೆಸ್ಕ್ಟಾಪ್ ಬಳಕೆದಾರರಿಗೆ ಸ್ಟೇಟಸ್ ಬಗ್ಗೆ ರಿಪೋರ್ಟ್ ಮಾಡುವ ಆಯ್ಕೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಬಳಕೆದಾರರು ಮೆಸೇಜ್ ಮಾಡುವುದರಲ್ಲಿ ಈ ಫೀಚರ್ ನೀಡಿದೆ. ನಿಮ್ಮ ಕಾಂಟೆಕ್ಟ್ನಲ್ಲಿರುವ ವ್ಯಕ್ತಿಯು ಅಶ್ಲೀಲ ವಿಡಿಯೊವನ್ನು ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದರೆ ಅಥವಾ ಜನರ ಭಾವನೆಗಳಿಗೆ ಹಾನಿ ಮಾಡುವ ಅಥವಾ ಹಿಂಸೆಯನ್ನು ಪ್ರಚೋದಿಸುವ ಯಾವುದೇ ವಿಷಯಗಳಲ್ಲಿ ಸ್ಟೇಟಸ್ನಲ್ಲಿ ಶೇರ್ ಮಾಡಿದ್ದರೆ ಈ ಕುರಿತು ರಿಪೋರ್ಟ್ ಮಾಡಬಹುದು. ಹೊಸ ಡಿವೈಸ್‌ಗಳಿಗೆ ಲಾಗಿನ್ ಮಾಡುವಾಗ ಉತ್ತಮ ಭದ್ರತೆಯನ್ನು ನೀಡಲು ವಾಟ್ಸ್ಆ್ಯಪ್ ಮುಂದಾಗಿದ್ದು, ಹೊಸ ಪರಿಶೀಲನಾ ಕೋಡ್ ಅನ್ನು ನಮೂದಿಸುವ ಮೂಲಕವೇ ಹೊಸ ಡಿವೈಸ್‌ನಲ್ಲಿ ಲಾಗ್ ಇನ್ ಪ್ರಕ್ರಿಯೆಯಲ್ಲಿ ತೊಡಗಬಹುದು ಎಂದು ತಿಳಿಸಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 am, Thu, 19 January 23