WhatsApp: ನಿಷೇಧಕ್ಕೆ ಕಿಮ್ಮತ್ತಿಲ್ಲ, ಇಂಟರ್ನೆಟ್ ಇಲ್ಲದಿದ್ದರೂ ಚಿಂತಿಲ್ಲ; ವಾಟ್ಸ್ಆ್ಯಪ್ನಲ್ಲಿ ಮಾಡಬಹುದು ಮೆಸೇಜ್
ಪ್ರಪಂಚದ ಅನೇಕ ಕಡೆಗಳು ಇನ್ನೂ ಇಂಟರ್ನೆಟ್ ಅಡೆತಡೆಗಳನ್ನು ಹೊಂದಿದ್ದು, ಪೂರ್ಣಪ್ರಮಾಣದಲ್ಲಿ ಸಂಪರ್ಕ ಬೆಸೆದಿಲ್ಲ. ಪ್ರಾಕ್ಸಿ ಸರ್ವರ್ ಮೂಲಕ ನೀಡುವ ಸೇವೆಯು ಜನರ ಸಂವಹನದ ಹಕ್ಕಿಗೆ ಪೂರಕವಾಗಿರಲಿದೆ ಎಂದು ವಾಟ್ಸ್ಆ್ಯಪ್ ಸಿಇಒ ಹೇಳಿದ್ದಾರೆ.
ನೀವು ಇರುವ ಪ್ರದೇಶದಲ್ಲಿ ವಾಟ್ಸ್ಆ್ಯಪ್ (WhatsApp) ನಿಷೇಧಿಸಲ್ಪಟ್ಟಿದೆಯೇ? ಇಂಟರ್ನೆಟ್ (Internet) ಸಂಪರ್ಕ ಇಲ್ಲವೇ? ಚಿಂತೆ ಬೇಡ. ಇವುಗಳು ಇನ್ನು ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಕಳುಹಿಸಲು ಅಡ್ಡಿಯೇ ಆಗಲಾರವು. ಪ್ರಾಕ್ಸಿ ಸರ್ವರ್ಗಳ (Proxy Servers) ಮೂಲಕ ವಾಟ್ಸ್ಆ್ಯಪ್ ಮೆಸೇಜ್ ಸೌಲಭ್ಯ ಕಲ್ಪಿಸಿಕೊಡಲು ಮೆಟಾ (Meta) ಮುಂದಾಗಿದೆ. ಸ್ವಯಂಸೇವಕರು ಮತ್ತು ಸಂಘಟನೆಗಳು ಸ್ಥಾಪಿಸಿದ ಪ್ರಾಕ್ಸಿ ಸರ್ವರ್ಗಳ ಮೂಲಕ ವಾಟ್ಸ್ಆ್ಯಪ್ ಮೆಸೇಜ್ ಸೌಲಭ್ಯ ಲಭ್ಯವಾಗಲಿದೆ ಎಂದು ಮೆಟಾ ಹೇಳಿದೆ. ವಿಶ್ವದಾದ್ಯಂತ ಈ ಸೇವೆ ಲಭ್ಯವಿರಲಿದೆ ಎಂದು ಮೆಟಾ ಹೇಳಿದ್ದರೂ ಸದ್ಯ ಇರಾನ್ನಲ್ಲಿ ಮಾತ್ರ ದೊರೆಯುತ್ತಿದೆ. ಇರಾನ್ನಲ್ಲಿ 2022ರ ಸೆಪ್ಟೆಂಬರ್ ನಂತರ ಹಿಜಾಬ್ ವಿರುದ್ಧ ಅಭಿಯಾನ, ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ವಾಟ್ಸ್ಆ್ಯಪ್ ಮತ್ತು ಇನ್ಸ್ಟಾಗ್ರಾಂ ಅನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ಹೀಗಾಗಿ ಅಲ್ಲಿ ಮೊದಲು ಸೇವೆ ಅನಾವರಣಗೊಳಿಸಲಾಗಿದೆ.
ಹೊಸ ಫೀಚರ್ ಪರಿಚಯಿರುವ ಬಗ್ಗೆ ವಾಟ್ಸ್ಆ್ಯಪ್ ಸಿಇಒ ವಿಲ್ ಕ್ಯಾತ್‌ಕಾರ್ಟ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ‘ಹ್ಯಾಪಿ ನ್ಯೂ ಇಯರ್! ನಾವೆಲ್ಲ ಪ್ರೀತಿಪಾತ್ರರಿಗೆ ವಾಟ್ಸ್ಆ್ಯಪ್ ಮೂಲಕ ಶುಭ ಹಾರೈಸುತ್ತಿದ್ದರೆ ಇರಾನ್ನ ಲಕ್ಷಾಂತರ ಜನರಿಗೆ ಸಂವಹನದ ಸ್ವಾತಂತ್ರ್ಯವೇ ಇಲ್ಲವಾಗಿದೆ. ಹೀಗಾಗಿ ನಾವು ಪ್ರಾಕ್ಸಿ ಸರ್ವರ್ ಮೂಲಕ ಎಲ್ಲರಿಗೂ ವಾಟ್ಸ್ಆ್ಯಪ್ ಸೇವೆ ದೊರೆಯುವಂತೆ ಮಾಡುತ್ತಿದ್ದೇವೆ’ ಎಂದು ಟ್ವೀಟ್ನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: WhatsApp: ಈ ಆಂಡ್ರಾಯ್ಡ್-ಐಫೋನ್ಗಳಲ್ಲಿ ವಾಟ್ಸ್ಆ್ಯಪ್ ಬಂದ್
ಪ್ರಪಂಚದ ಅನೇಕ ಕಡೆಗಳು ಇನ್ನೂ ಇಂಟರ್ನೆಟ್ ಅಡೆತಡೆಗಳನ್ನು ಹೊಂದಿದ್ದು, ಪೂರ್ಣಪ್ರಮಾಣದಲ್ಲಿ ಸಂಪರ್ಕ ಬೆಸೆದಿಲ್ಲ. ಪ್ರಾಕ್ಸಿ ಸರ್ವರ್ ಮೂಲಕ ನೀಡುವ ಸೇವೆಯು ಜನರ ಸಂವಹನದ ಹಕ್ಕಿಗೆ ಪೂರಕವಾಗಿರಲಿದೆ ಎಂದು ಅವರು ಹೇಳಿದ್ದಾರೆ.
ಪ್ರಾಕ್ಸಿ ಸರ್ವರ್ಗೆ ಸಂಪರ್ಕ ಕಲ್ಪಿಸುವುದು ಹೇಗೆ?
ಪ್ರಾಕ್ಸಿ ಸರ್ವರ್ ಸೆಟ್ ಮಾಡಲು 80, 443 ಅಥವಾ 5222 ಪೋರ್ಟ್ಸ್, ಸರ್ವರ್ನ ಐಪಿ ಅಡ್ರೆಸ್ ಜತೆಗೆ ಡೊಮೇನ್ (ಅಥವಾ ಸಬ್ ಡೊಮೇನ್) ಅಗತ್ಯವಿದೆ. ಸದ್ಯ ಪ್ರಾಕ್ಸಿ ಸರ್ವರ್ ಮೂಲಕ ವಾಟ್ಸ್ಆ್ಯಪ್ ಸೌಲಭ್ಯ ಐಫೋನ್ನಲ್ಲಿ ಮತ್ತು ಆ್ಯಂಡ್ರಾಯ್ಡ್ನಲ್ಲಿ ಲಭ್ಯವಿದೆ. ಕೆನೆಕ್ಟ ಮಾಡುವುದು ಹೇಗೆಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.