WhatsApp: ವಾಟ್ಸ್​ಆ್ಯಪ್​ನಲ್ಲಿರುವ ಅಗತ್ಯ ಮೆಸೇಜ್​ಗಳನ್ನು ಸೇವ್ ಮಾಡಿಕೊಳ್ಳಬಹುದು: ಹೇಗೆ ಗೊತ್ತೇ?

WhatsApp Tips and Tricks: ವಾಟ್ಸ್​ಆ್ಯಪ್​​​ ಪ್ಲಾಟ್‌ಫಾರ್ಮ್ ಸ್ಟಾರ್ ಮೆಸೆಜ್ (Starred messages) ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ವಾಟ್ಸ್​ಆ್ಯಪ್​​​ನಲ್ಲಿ ಬರುವ ಮೆಸೆಜ್‌ಗಳಲ್ಲಿ ಅತೀ ಮುಖ್ಯ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ.

WhatsApp: ವಾಟ್ಸ್​ಆ್ಯಪ್​ನಲ್ಲಿರುವ ಅಗತ್ಯ ಮೆಸೇಜ್​ಗಳನ್ನು ಸೇವ್ ಮಾಡಿಕೊಳ್ಳಬಹುದು: ಹೇಗೆ ಗೊತ್ತೇ?
WhatsApp Tips and Tricks
Follow us
TV9 Web
| Updated By: Vinay Bhat

Updated on: Nov 23, 2021 | 3:33 PM

ಇಂದಿನ ದಿನಗಳಲ್ಲಿ ವಾಟ್ಸ್​ಆ್ಯಪ್ (WhatsApp) ಮೆಸೆಂಜರ್ ಬಳಕೆ ಮಾಡುವವರ ಸಂಖ್ಯೆ ಗಗನಕ್ಕೇರಿದೆ. ಇದು ಮನುಷ್ಯನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಹಿರಿಯರಿಂದ ಹಿಡಿದು ಕಿರಿಯರವರೆಗೂ ಸಹ ವಾಟ್ಸ್​ಆ್ಯಪ್​ ಬಳಕೆ ಮಾಡುತ್ತಿದ್ದಾರೆ. ಬಳಕೆದಾರರಿಗೆ ತಕ್ಕಂತೆ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ ಕೂಡ ಪರಿಚಯಿಸಿದೆ. ವಿಡಿಯೋ ಕರೆ, ವಾಯಿಸ್‌ ಮೆಸೆಜ್‌ ಸೇರಿದಂತೆ ಹಲವು ಸೇವೆಗಳಲ್ಲಿ ಅಪ್‌ಡೇಟ್‌ (WhatsApp Update) ಆಗಿದೆ. ಹಾಗೆಯೇ ನಮಗೆ ತೀರಾ ಅಗತ್ಯ ಆಗಿರುವಂತಹ ಇಂಪಾರ್ಟೆಂಟ್ ಮೆಸೆಜ್‌ಗಳನ್ನು ಸೇವ್ ಮಾಡಿ ಕೊಳ್ಳಲು ಅವಕಾಶ ಮಾಡಿ ಕೊಟ್ಟಿದೆ. ಬಳಕೆದಾರರಿಗೆ ವಾಟ್ಸ್​ಆ್ಯಪ್​​​ನಲ್ಲಿ ಬರುವ ಅನೇಕ ಮೆಸೆಜ್‌ಗಳಲ್ಲಿ (WhatsApp Message) ಕೆಲವೊಂದು ಅತೀ ಮುಖ್ಯವಾದ ಮೆಸೆಜ್ ಆಗಿರುತ್ತವೆ. ಕೆಲವೊಮ್ಮೆ ಅವು ಮತ್ತೆ ಬೇಕಾಗಬಹುದಾದ ಸಂದರ್ಭಗಳು ಇರುತ್ತವೆ. ಅಂತಹ ವೇಳೆ ಥಟ್‌ ಅಂತಾ ಮೆಸೆಜ್ ತೆರೆಯಬಹುದು.

ಹೌದು, ವಾಟ್ಸ್​ಆ್ಯಪ್​​​ ಪ್ಲಾಟ್‌ಫಾರ್ಮ್ ಸ್ಟಾರ್ ಮೆಸೆಜ್ (Starred messages) ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ವಾಟ್ಸ್​ಆ್ಯಪ್​​​ನಲ್ಲಿ ಬರುವ ಮೆಸೆಜ್‌ಗಳಲ್ಲಿ ಅತೀ ಮುಖ್ಯ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ. ಅಲ್ಲದೇ ಯಾವಾಗಲಾದರೂ ಆ ಮೆಸೆಜ್ ಅಗತ್ಯ ಎಂದಾಗ ಮತ್ತೆ ಅವುಗಳನ್ನು ತೆರೆಯಲು ಈ ಆಯ್ಕೆಯು ಉಪಯುಕ್ತ ಆಗಿದೆ. ಹಾಗಾದ್ರೆ ವಾಟ್ಸ್​ಆ್ಯಪ್​​​ನಲ್ಲಿ ಅತೀ ಮುಖ್ಯವಾದ ಮೆಸೆಜ್‌ಗೆ ಸ್ಟಾರ್‌ ಮಾರ್ಕ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.

  • ವಾಟ್ಸ್​ಆ್ಯಪ್​​​ನಲ್ಲಿ, ನೀವು ಸಂದೇಶಗಳನ್ನು ಅಥವಾ ಸಂದೇಶಗಳನ್ನು ಹೊಂದಿರುವ ಸಂಭಾಷಣೆಯನ್ನು ತೆರೆಯಿರಿ.
  • ಅದರ ಮೇಲೆ ದೀರ್ಘವಾಗಿ ಒತ್ತುವ ಮೂಲಕ ನಿಮಗೆ ಬೇಕಾದ ಸಂದೇಶವನ್ನು ಆಯ್ಕೆ ಮಾಡಿ. ನೀವು ಈ ರೀತಿ ಅನೇಕ ಸಂದೇಶಗಳನ್ನು ಆಯ್ಕೆ ಮಾಡಬಹುದು.
  • ಒಮ್ಮೆ ನೀವು ಸಂದೇಶ ಅಥವಾ ಸಂದೇಶಗಳನ್ನು ಆಯ್ಕೆ ಮಾಡಿದರೆ, ಚಾಟ್ ವಿಂಡೋದ ಮೇಲಿನ ಟ್ಯಾಬ್‌ನಲ್ಲಿ ನೀವು ಸ್ಟಾರ್ ಐಕಾನ್ ಅನ್ನು ಗುರುತಿಸುತ್ತೀರಿ.
  • ಈ ಸಂದೇಶವನ್ನು ಬುಕ್‌ಮಾರ್ಕ್ ಮಾಡಲು ಸ್ಟಾರ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ಅಂತೆಯೆ ವಾಟ್ಸ್​ಆ್ಯಪ್​​​ನಲ್ಲಿ ಸ್ಟಾರ್‌ ಮಾರ್ಕ್‌ ಮಾಡಿದ ಮೆಸೆಜ್‌ ಮತ್ತೆ ಓದಲು ಈ ಕ್ರಮ ಫಾಲೋ ಮಾಡಿ

  •  ವಾಟ್ಸ್​ಆ್ಯಪ್​​​ ತೆರೆಯಿರಿ ಮತ್ತು ಪರದೆಯ ಮೇಲಿನ ಬಲ ಭಾಗ ದಲ್ಲಿರುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡಿ.
  • ಡ್ರಾಪ್-ಡೌನ್ ಮೆನುವಿನಲ್ಲಿ ನೀವು “ಸ್ಟಾರ್ ಮಾರ್ಕ್ ಮಾಡಿದ ಮೆಸೆಜ್‌ಗಳು” ಆಯ್ಕೆಯನ್ನು ನೋಡುತ್ತೀರಿ.
  • ಇದನ್ನು ಟ್ಯಾಪ್ ಮಾಡುವುದರಿಂದ ಸಂಪರ್ಕಗಳು ಮತ್ತು ಸಂಭಾಷಣೆಗಳಲ್ಲಿ ನಿಮ್ಮ ಸ್ಟಾರ್ ಹಾಕಿದ ಎಲ್ಲಾ ಸಂದೇಶಗಳನ್ನು ತೋರಿಸುತ್ತದೆ.
  • ಸಂಭಾಷಣೆಯನ್ನು ತೆರೆಯುವ ಮೂಲಕ, ಸಂಪರ್ಕದ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡುವ ಮೂಲಕ ಮತ್ತು ನಂತರ ಅವರ ಪ್ರೊಫೈಲ್ ಅಡಿಯಲ್ಲಿರುವ “ಸ್ಟಾರ್ ಹಾಕಿದ ಮೆಸೆಜ್” ಆಯ್ಕೆಗೆ ಸ್ಕ್ರೋಲ್ ಮಾಡುವ ಮೂಲಕ ನಿರ್ದಿಷ್ಟ ಚಾಟ್‌ನಿಂದ ನೀವು ನಕ್ಷತ್ರ ಹಾಕಿದ ಸಂದೇಶಗಳನ್ನು ಸಹ ನೋಡಬಹುದಾಗಿದೆ.

Tecno Spark 8 Pro: ಟೆಕ್ನೋ ಕಂಪನಿಯಿಂದ ಬಜೆಟ್ ಬೆಲೆಗೆ ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ

GoDaddy: ವಿಶ್ವದ ಅತಿದೊಡ್ಡ ವೆಬ್​ಸೈಟ್​ ಡೊಮೈನ್ ಹೋಸ್ಟ್​ ಗೋ ಡ್ಯಾಡಿ ಹ್ಯಾಕ್: ಅಪಾಯದಲ್ಲಿ 12 ಲಕ್ಷ ಬಳಕೆದಾರರ ಡೇಟಾ

(WhatsApp Tips and Tricks Here is the Tricks to save important messages on WhatsApp)

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ