WhatsApp Web: ದೀಪಾವಳಿಗೆ ವಾಟ್ಸ್​ಆ್ಯಪ್​ನಿಂದ ಹೊಸ ಫೀಚರ್: ವಾಟ್ಸ್​ಆ್ಯಪ್ ವೆಬ್ ಬಳಸುತ್ತಿರುವವರು ಫುಲ್ ಖುಷ್

Whatsapp Linked Devices: ವಾಟ್ಸ್​ಆ್ಯಪ್​ ಪರಿಚಯಿಸಿರುವ ಮಲ್ಟಿ ಡಿವೈಸ್‌ ಮೂಲಕ ಒಬ್ಬರು ಒಂದೇ ಸಮಯದಲ್ಲಿ ತಮ್ಮ ವಾಟ್ಸ್​ಆ್ಯಪ್ ಅಕೌಂಟ್‌ ಅನ್ನು ನಾಲ್ಕು ಡಿವೈಸ್‌ಗಳಿಗೆ ಲಿಂಕ್‌ ಮಾಡಲು ಅವಕಾಶ ನೀಡಲಿದೆ. ಇದರಲ್ಲಿ ಬ್ರೌಸರ್‌ ಮತ್ತು ಇತರ ಡಿವೈಸ್‌ಗಳು ಕೂಡ ಸಾಧನಗಳು ಸೇರಿವೆ.

WhatsApp Web: ದೀಪಾವಳಿಗೆ ವಾಟ್ಸ್​ಆ್ಯಪ್​ನಿಂದ ಹೊಸ ಫೀಚರ್: ವಾಟ್ಸ್​ಆ್ಯಪ್ ವೆಬ್ ಬಳಸುತ್ತಿರುವವರು ಫುಲ್ ಖುಷ್
Whatsapp Linked Devices
Follow us
TV9 Web
| Updated By: Vinay Bhat

Updated on:Nov 06, 2021 | 2:42 PM

ವಿಶ್ವದ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿರುವ ವಾಟ್ಸ್​ಆ್ಯಪ್ (WhatsApp)​ ದೀಪಾವಳಿ ಪ್ರಯುಕ್ತ ತನ್ನ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ನೀಡಿದೆ. ವಾಟ್ಸ್​ಆ್ಯಪ್ ಬಳಕೆದಾರರು ಅನೇಕ ತಿಂಗಳುಗಳಿಂದ ಕಾಯುತ್ತಿದ್ದ ಬಹು ನಿರೀಕ್ಷಿತ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದೀಗ ಮಲ್ಟಿ ಡಿವೈಸ್ ವೈಶಿಷ್ಟ್ಯವನ್ನು (Whatsapp Linked Devices) ಹೊರತಂದಿರುವ ವಾಟ್ಸ್​ಆ್ಯಪ್​, ಇನ್ನುಂದೆ ವಾಟ್ಸ್​ಆ್ಯಪ್ ವೆಬ್​ಗಾಗಿ (WhatsApp Web) ನೀವು ಸ್ಮಾರ್ಟ್​ಫೋನ್​ ಅನ್ನು ಆನ್​ಲೈನ್​ನಲ್ಲಿ  ಇರಿಸುವ ಅಗತ್ಯವಿಲ್ಲ. ತನ್ನ ಮಲ್ಟಿ ಡಿವೈಸ್‌ ಕನೆಕ್ಟ್‌ ಫೀಚರ್ಸ್‌ ಅನ್ನು ಇದೀಗ ಆಂಡ್ರಾಯ್ಡ್‌ ಮತ್ತು iOS ಎರಡೂ ಆವೃತ್ತಿಗಳಲ್ಲಿಯೂ ಕೂಡ ಅಪ್ಡೇಟ್‌ ಮಾಡಿದೆ. ಈ ಹಿಂದೆ ವಾಟ್ಸ್​ಆ್ಯಪ್ ವೆಬ್ ಬಳಸಬೇಕಾದರೆ ಪ್ರತಿ ಬಾರಿ ನಿಮ್ಮ ಫೋನ್‌ನೊಂದಿಗೆ ಲಾಗಿನ್ ಮಾಡಬೇಕಾಗಿತ್ತು. ಆದರೀಗ ಬೀಟಾ ಪ್ರೋಗ್ರಾಂನಿಂದ ಹೊರಬರುವ ಮಲ್ಟಿ-ಡಿವೈಸ್ ವೈಶಿಷ್ಟ್ಯದಿಂದ ಸ್ಮಾರ್ಟ್​ಫೋನ್​ (Smartphone) ಸಹಾಯವಿಲ್ಲದೆ ಲಾಗಿನ್​ ಆಗಬಹುದಾಗಿದೆ.

ವಾಟ್ಸ್​ಆ್ಯಪ್​ ಪರಿಚಯಿಸಿರುವ ಮಲ್ಟಿ ಡಿವೈಸ್‌ ಮೂಲಕ ಒಬ್ಬರು ಒಂದೇ ಸಮಯದಲ್ಲಿ ತಮ್ಮ ವಾಟ್ಸ್​ಆ್ಯಪ್ ಅಕೌಂಟ್‌ ಅನ್ನು ನಾಲ್ಕು ಡಿವೈಸ್‌ಗಳಿಗೆ ಲಿಂಕ್‌ ಮಾಡಲು ಅವಕಾಶ ನೀಡಲಿದೆ. ಇದರಲ್ಲಿ ಬ್ರೌಸರ್‌ ಮತ್ತು ಇತರ ಡಿವೈಸ್‌ಗಳು ಕೂಡ ಸಾಧನಗಳು ಸೇರಿವೆ. ಇನ್ನು ಈ ಫೀಚರ್ಸ್‌ ಕೂಡ ಎಂಡ್‌ ಎಂಡ್‌ ಎನ್‌ಕ್ರಿಪ್ಶನ್ ಅನ್ನು ಬೆಂಬಲಿಸಲಿದೆ. ಇದರಿಂದ ನೀವು ಯಾವುದೇ ಡಿವೈಸ್‌ಗೆ ಕನೆಕ್ಟ್‌ ಮಾಡಿ ಚಾಟ್‌ ಮಾಡಿದರೂ ಸಹ ನಿಮ್ಮ ಚಾಟ್‌ ಸುರಕ್ಷಿತವಾಗಿರಲಿದೆ ಎಂದು ವಾಟ್ಸ್​ಆ್ಯಪ್ ದೃಢಪಡಿಸಿದೆ.

ಈ ಹೊಸ ಫೀಚರ್ ಇನ್ನೂ ಬೀಟಾ ಹಂತದಲ್ಲಿದೆ. ವಾಟ್ಸ್​ಆ್ಯಪ್ ನಲ್ಲಿನ ಲಿಂಕ್ಡ್ ಡಿವೈಸಸ್ ಸೆಟ್ಟಿಂಗ್‌ನಿಂದ ಬೀಟಾ ಎಂದು ಲೇಬಲ್ ಮಾಡಲಾದ ವೈಶಿಷ್ಟ್ಯವನ್ನು ಬಳಕೆದಾರರು ಆಯ್ಕೆ ಮಾಡಬೇಕಾಗುತ್ತದೆ. ಈ ಬಾರಿ, ನಿಮ್ಮ ಸ್ಮಾರ್ಟ್‌ಫೋನ್ ಆನ್‌ಲೈನ್‌ನಲ್ಲಿದೆಯೇ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕಾಗಿಲ್ಲ. ಸ್ಮಾರ್ಟ್‌ಫೋನ್ ಆಫ್‌ಲೈನ್‌ಗೆ ಹೋದ ನಂತರ 14 ದಿನಗಳವರೆಗೆ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಖಾಲಿಯಾಗಿದ್ರೆ, ನಿಮ್ಮ ವಾಟ್ಸ್​ಆ್ಯಪ್ ವೆಬ್ ಕಾರ್ಯನಿರತವಾಗಿರುತ್ತದೆ.

ಸ್ಮಾರ್ಟ್‌ಫೋನ್ ಇಲ್ಲದೆ ಹೋದರೂ ವಾಟ್ಸ್​ಆ್ಯಪ್​ ಬಳಕೆ ಹೇಗೆ?

  • ಮೊದಲಿಗೆ ನಿಮ್ಮ ಫೋನ್‌ನಲ್ಲಿ ವಾಟ್ಸ್​ಆ್ಯಪ್​​ ತೆರೆಯಿರಿ, ನಂತರ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.
  • “Linked devices” ಮೇಲೆ ಟ್ಯಾಪ್ ಮಾಡಿ.
  • ನಂತರ “ಮಲ್ಟಿ-ಡಿವೈಸ್ ಬೀಟಾ” ಮೇಲೆ ಟ್ಯಾಪ್ ಮಾಡಿ. ಇದರಲ್ಲಿ ವಾಟ್ಸಾಪ್‌ ನಿಮಗೆ ಒಂದು ಪೇಜ್‌ ಅನ್ನು ಡಿಸ್‌ ಪ್ಲೇ ಮಾಡಲಿದೆ.
  • ಇದೀಗ “ಜಾಯಿನ್‌ ಬೀಟಾ” ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು “ಕಂಟಿನ್ಯೂ” ಬಟನ್ ಒತ್ತಿರಿ.
  • ಇದಾದ ನಂತರ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ವಾಟ್ಸ್​ಆ್ಯಪ್​​ ವೆಬ್‌ಗೆ ಲಿಂಕ್ ಮಾಡಿರಿ.

ಈಗ ನಿಮ್ಮ ವಾಟ್ಸ್​ಆ್ಯಪ್​​ ಅಕೌಂಟ್‌ ಅನ್ನು ಬೇರೆ ಡಿವೈಸ್‌ನಲ್ಲೂ ಉಪಯೋಗಿಸಬಹುದು. ಅಷ್ಟೇ ಅಲ್ಲ ಕನೆಕ್ಟ್‌ ಮಾಡಿದ ಮುಖ್ಯ ಫೋನ್‌ ಇಂಟರ್‌ನೆಟ್‌ ಇಲ್ಲದೆ ಹೋದರೂ ಕೂಡ ನಿಮ್ಮ ವಾಟ್ಸ್​ಆ್ಯಪ್​​ ಅನ್ನು ನೀವು ಬಳಸುತ್ತಿರಬಹುದು.

Vodafone Idea: ವೊಡಾಫೋನ್-ಐಡಿಯಾದಿಂದ ಡಬಲ್ ಡೇಟಾ ಆಫರ್: 2GB ಜೊತೆ ಪುನಃ 2GB ಫ್ರೀ

Telegram Update: ಟೆಲಿಗ್ರಾಂ ಬಳಕೆದಾರರಿಗೆ ಬಿಗ್ ಅಪ್ಡೇಟ್: ಪರಿಚಯಿಸಿದೆ ಬೊಂಬಾಟ್ ಫೀಚರ್ಸ್

(WhatsApp Web WhatsApp users will soon get new feature to link devices without Whatsapp online in smartphone)

Published On - 2:41 pm, Sat, 6 November 21