WhatsApp: ಮೆಟಾದಿಂದ ಬಂತು ಶಾಕಿಂಗ್ ಸುದ್ದಿ: ಫೆ. 1 ರಿಂದ ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಬಂದ್

WhatsApp Features: ಫೆಬ್ರವರಿ 1 ರಿಂದ ಕೆಲ ಐಫೋನ್ (iPhone) ಮತ್ತು ಆಂಡ್ರಾಯ್ಡ್ (Android) ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ತನ್ನ ಕೆಲಸವನ್ನು ನಿಲ್ಲಿಸಲಿದೆ. ಇದಕ್ಕೆ ಕಾರಣ ವಾಟ್ಸ್​ಆ್ಯಪ್ ಹೊಸ ಹೊಸ ಫೀಚರ್ ರಿಲೀಸ್ ಮಾಡುತ್ತಿರುವುದು.

WhatsApp: ಮೆಟಾದಿಂದ ಬಂತು ಶಾಕಿಂಗ್ ಸುದ್ದಿ: ಫೆ. 1 ರಿಂದ ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಬಂದ್
WhatsApp
Follow us
|

Updated on:Jan 31, 2023 | 2:50 PM

ವಿಶ್ವದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಆ್ಯಪ್ ಎಂದರೆ ಅದು ವಾಟ್ಸ್​ಆ್ಯಪ್ (WhatsApp). ತಿಂಗಳಲ್ಲಿ 2 ಬಿಲಿಯನ್​ಗೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದರಲ್ಲಿ 500 ಮಿಲಿಯನ್ ಅಕೌಂಟ್ ಭಾರತೀಯರದ್ದೇ ಆಗಿದೆ. ವಾಟ್ಸ್​ಆ್ಯಪ್ ಬಳಕೆದಾರರಿಗೆ ಇಷ್ಟೊಂದು ಹತ್ತಿರವಾಗಲು ಪ್ರಮುಖ ಕಾರಣ ಇದರಲ್ಲಿರುವ ಫೀಚರ್ಸ್. ಜನರ ಅನುಕೂಲಕ್ಕೆ ತಕ್ಕಂತೆ ಒಂದರ ಹಿಂದೆ ಒಂದು ಆಕರ್ಷಕ ಫೀಚರ್​ಗಳನ್ನು ಬಿಡುಗಡೆ ಮಾಡುತ್ತಿರುವ ವಾಟ್ಸ್​ಆ್ಯಪ್​​ ಇದೀಗ ಶಾಕಿಂಗ್ ಸುದ್ದಿಯೊಂದು ನೀಡಿದೆ. ಫೆಬ್ರವರಿ 1 ರಿಂದ ಕೆಲ ಐಫೋನ್ (iPhone) ಮತ್ತು ಆಂಡ್ರಾಯ್ಡ್ (Android) ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ತನ್ನ ಕೆಲಸವನ್ನು ನಿಲ್ಲಿಸಲಿದೆ. ಇದಕ್ಕೆ ಕಾರಣ ವಾಟ್ಸ್​ಆ್ಯಪ್ ಹೊಸ ಹೊಸ ಫೀಚರ್ ರಿಲೀಸ್ ಮಾಡುತ್ತಿರುವುದು.

ಹೌದು, ವಾಟ್ಸ್​ಆ್ಯಪ್ ನೂತನ ಅಪ್ಡೇಟ್​ಗಳನ್ನು ಬಿಡುಗಡೆ ಮಾಡುತ್ತಿರುವುದು ಕೆಲ ಬಳಕೆದಾರರಿಗೆ ತೊಂದರೆ ಉಂಟು ಮಾಡುತ್ತಿದೆ. ಹೊಸ ಫೀಚರ್​ಗಳು ಹಳೆಯ ಸ್ಮಾರ್ಟ್​ಫೋನ್​ಗಳಲ್ಲಿ ಕೆಲಸ ಮಾಡುವುದಿಲ್ಲ. ಇದೇ ಕಾರಣದಿಂದಾಗಿ ಕೆಲ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಬಂದ್ ಆಗಲಿದೆ. ಫೆಬ್ರವರಿ 1 ರಿಂದ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸಲು ಆಂಡ್ರಾಯ್ಡ್​ನ 4.0.3 ಅಥವಾ ಅದಕ್ಕಿಂತ ಮುಂದಿನ ಆವೃತ್ತಿ ಬೇಕಾಗಿದೆ. ಹಾಗೆಯೆ ಐಫೋನ್​ನಲ್ಲಿ ಐಒಎಸ್ 12.0 ನಂತರದ ವರ್ಷನ್​ನಲ್ಲಿ ಮಾತ್ರ ಕೆಲಸ ಮಾಡುತ್ತದೆ.

ವಾಟ್ಸ್​ಆ್ಯಪ್ ಮುಂದಿನ ದಿನಗಳಲ್ಲಿ​ ಬಿಡುಗಡೆ ಮಾಡುವಂತಹ ಫೀಚರ್​ಗಳು ಬಹಳ ಗುಣಮಟ್ಟದ್ದಾಗಿರುತ್ತದೆ. ಆದರೆ ಈ ಫೀಚರ್ಸ್ ಮತ್ತು ಮೊಬೈಲ್​ನ ಕಾರ್ಯಚಟುವಟಿಕೆಗಳೊಂದಿಗೆ ಸಮಸ್ಯೆ ಉಂಟಾಗುವುದರಿಂದ ಇನ್ಮುಂದೆ ವಾಟ್ಸ್​ಆ್ಯಪ್​​ ಫೀಚರ್ಸ್ ಅನ್ನು ಬೆಂಬಲ ನೀಡದ ಸ್ಮಾರ್ಟ್​​ಫೋನ್​ಗಳಿಂದ ಹಂತ ಹಂತವಾಗಿ ಅಪ್ಲಿಕೇಶನ್ ಅನ್ನು ತೆಗೆದು ಹಾಕಲಾಗುವುದು ಎಂದು ಕಂಪನಿ ಹೇಳಿದೆ. ಇದಲ್ಲದೆ ವಾಟ್ಸ್​ಆ್ಯಪ್ ಐಓಎಸ್​​ 12 ಮತ್ತು ಇನ್ನೂ ಹೆಚ್ಚಿನ ಡಿವೈಸ್​ಗಳೊಂದಿಗೆ ಹೊಂದಿಕೊಳ್ಳುತ್ತದೆ. ಆದರೆ ಆ್ಯಪಲ್​ನ ಆಪರೇಟಿಂಗ್​ ಸಿಸ್ಟಮ್​ನ ಇತ್ತೀಚಿನ ವರ್ಷನ್​ಗೆ ಅಪ್ಡೇಟ್​ ಮಾಡಲು ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಸಲಹೆ ನೀಡುತ್ತಿದೆ.

ಇದನ್ನೂ ಓದಿ
Image
Poco X5 Pro: ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲು ತಯಾರಾದ 108MP ಕ್ಯಾಮೆರಾದ ಪೋಕೋ ಸ್ಮಾರ್ಟ್​ಫೋನ್
Image
Infinix Note 12i: ಕೇವಲ 9,999 ರೂ.: ಆಕರ್ಷಕ ಫೀಚರ್​ಗಳ ಇನ್ಫಿನಿಕ್ಸ್‌ ನೋಟ್‌ 12i ಫೋನ್ ಈಗ ಖರೀದಿಗೆ ಲಭ್ಯ
Image
Budget 2023: ಆ್ಯಪ್​ನಲ್ಲೂ ಸಿಗಲಿದೆ ಬಜೆಟ್ ಪ್ರತಿ; ಯೂನಿಯನ್ ಬಜೆಟ್ ಆ್ಯಪ್ ಹೀಗೆ ಬಳಸಬಹುದು
Image
Cyber Crime: ಮತ್ತೊಂದು ಸೈಬರ್ ಕ್ರೈಮ್ ಪ್ರಕರಣ ದಾಖಲು: ಓಟಿಪಿ ಹಾಕಿ 1 ಲಕ್ಷ ರೂ. ಕಳೆದುಕೊಂಡ ಮಹಿಳೆ

WhatsApp: ಗ್ರೂಪ್​ಗಳಲ್ಲಿ ಸದ್ದಿಲ್ಲದೆ ವಾಟ್ಸ್​ಆ್ಯಪ್ ಪರಿಚಯಿಸಿದೆ ವಿಶೇಷ ಫೀಚರ್: ತಕ್ಷಣವೇ ಅಪ್ಡೇಟ್ ಮಾಡಿ

ಸದ್ಯ ಹಳೆಯ ಡಿವೈಸ್‌ಗಳನ್ನು ಬಳಸುತ್ತಿರುವ ಬಳಕೆದಾರರಿಗೆ ವಾಟ್ಸ್​ಆ್ಯಪ್​​ ಈಗಾಗಲೇ ಹಲವು ಸಂದೇಶಗಳನ್ನು ಕಳುಹಿಸಿದೆ. ಎಚ್ಚರಿಕೆ ಸಂದೇಶಗಳನ್ನು ನೀಡುವ ಮೂಲಕ ಕೂಡಲೇ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಗ್ರೇಡ್‌ ಮಾಡಿಕೊಳ್ಳುವಂತೆ ಹೇಳಿದೆ. ಈ ರೀತಿಯ ಡಿವೈಸ್‌ಗಳಲ್ಲಿ ದುರುದ್ದೇಶಪೂರಿತ ಚಟುವಟಿಕೆಗಳಿಂದ ರಕ್ಷಿಸಲು ಅಗತ್ಯವಾದ ಸುರಕ್ಷತೆಗಾಗಿ ವಾಟ್ಸ್​ಆ್ಯಪ್​​ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.

ವಾಟ್ಸ್​ಆ್ಯಪ್ ಕಾರ್ಯನಿಲ್ಲಿಸುವ ಸ್ಮಾರ್ಟ್​ಫೋನ್​ಗಳ ಪಟ್ಟಿ ಇಲ್ಲಿದೆ:

iPhone 6S iPhone 6S Plus iPhone SE (1st Gen) Samsung Galaxy Core Samsung Galaxy Trend Lite Samsung Galaxy Ace 2 Samsung Galaxy S3 Mini Samsung Galaxy Trend Ii Samsung Galaxy X Cover 2 Vinco Darknight Archos 53 Platinum Zte V956 – Umi X2 Zte Grand S Flex Zte Grand Memo Huawei Ascend Mate Huawei Ascend G740 Huawei Ascend D2 Lg Optimus L3 Ii Dual Lg Optimus L5 Ii Lg Optimus F5 Lg Optimus L3 Ii Lg Optimus L7ii Lg Optimus L5 Dual Lg Optimus L7 Dual Lg Optimus F3 Lg Optimus F3q Lg Optimus L2 Ii Lg Optimus L4 Ii Lg Optimus F6 Lg Act Lg Lucid 2 Lg Optimus F7 Sony Xperia M Lenovo A820 Feya F1thl W8 Vico Sync Five

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Tue, 31 January 23

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ