AI: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮನುಷ್ಯನಿಗೆ ಮಾರಕವಾ, ಪ್ರಯೋಜನಕಾರಿಯಾ?; ಐಐ ಪರಿಣಿತರು ಹೇಳಿದ್ದಿದು

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 26, 2024 | 1:55 PM

What India Thinks Today TV9 2024: TV9 ನೆಟ್‌ವರ್ಕ್‌ನ 'ವಾಟ್ ಇಂಡಿಯಾ ಟುಡೇ ಥಿಂಕ್ಸ್' ನ ಜಾಗತಿಕ ಶೃಂಗಸಭೆಯ ಎರಡನೇ ವರ್ಷದ ಆವೃತ್ತಿಯಲ್ಲಿ, ಕೃತಕ ಬುದ್ಧಿಮತ್ತೆ (AI) ತಜ್ಞರು AI ಯ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಮಾತನಾಡಿದರು. ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ AI ಅನ್ನು ಬಳಸಲಾಗುತ್ತಿದೆ. ಈ ಬಗ್ಗೆ ತಜ್ಞರ ಅಭಿಪ್ರಾಯವೇನು ಎಂಬುದನ್ನು ಇಲ್ಲಿ ತಿಳಿಯಿರಿ.

AI: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮನುಷ್ಯನಿಗೆ ಮಾರಕವಾ, ಪ್ರಯೋಜನಕಾರಿಯಾ?; ಐಐ ಪರಿಣಿತರು ಹೇಳಿದ್ದಿದು
'ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಜಾಗತಿಕ ಶೃಂಗಸಭೆ
Follow us on

What India Thinks Today Global Summit 2024: TV9 ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಜಾಗತಿಕ ಶೃಂಗಸಭೆಯ ಎರಡನೇ ದಿನದಂದು ಕೃತಕ ಬುದ್ಧಿಮತ್ತೆ (AI) ಕುರಿತು ಚರ್ಚಿಸಲಾಯಿತು. Reliance Jio ನ ಮುಖ್ಯ ಡೇಟಾ ವಿಜ್ಞಾನಿ ಡಾ. ಶೈಲೇಶ್ ಕುಮಾರ್, Samsung AI ವಿಷನ್ ನಿರ್ದೇಶಕ ಅಲೋಕ್ ಶುಕ್ಲಾ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅನುರಾಗ್ ಮರಲ್, ಚಲನಚಿತ್ರ ನಿರ್ಮಾಪಕ ಮತ್ತು MARZ CEO ಜೊನಾಥನ್ ಬ್ರೋನ್‌ಫ್‌ಮನ್ ಮತ್ತು ಮೈಕ್ರೋಸಾಫ್ಟ್‌ನ ಸಮಿಕ್ ರಾಯ್ ಜಾಗತಿಕ ಶೃಂಗಸಭೆಯಲ್ಲಿ AI ತಜ್ಞರಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. AI ತಂತ್ರಜ್ಞಾನವು ಜಗತ್ತನ್ನು ಹೇಗೆ ಬದಲಾಯಿಸುತ್ತಿದೆ ಮತ್ತು ಅದರ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ನಾವು ಅದನ್ನು ಮಾನವ ಕುಲದ ಒಳಿತಿಗೆ ಹೇಗೆ ಬಳಸಬಹುದು ಎಂಬುದನ್ನು ಈ ದಿಗ್ಗಜರು ವಿವರಿಸಿದರು.

ಇಂಟರ್ನೆಟ್, ಎಲೆಕ್ಟ್ರಾನಿಕ್ಸ್, ಮನರಂಜನೆ, ವೈದ್ಯಕೀಯ, ಜೀವವಿಜ್ಞಾನ, ಕೃಷಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ AI ತಂತ್ರಜ್ಞಾನವು ದೊಡ್ಡ ಪಾತ್ರ ವಹಿಸುತ್ತಿದೆ. ಆದರೆ AI ನಿಂದ ಜನರ ಉದ್ಯೋಗಗಳಿಗೆ ದೊಡ್ಡ ಕುತ್ತು ಉಂಟಾಗಬಹುದು ಎಂಬ ಭಾವನೆ ಇದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನ ಒಳಿತು ಮತ್ತು ಕೆಡಕುಗಳ ಬಗ್ಗೆ ಆ ಕ್ಷೇತ್ರದ ಪರಿಣಿತರ ಅಭಿಪ್ರಾಯಗಳ ಸಂಗ್ರಹ ಇಲ್ಲಿದೆ.

ಸಮಿಕ್ ರಾಯ್: ಮೈಕ್ರೋಸಾಫ್ಟ್ ಇಂಡಿಯಾ, ಎಕ್ಸಿಕ್ಯೂಟಿವ್ ಡೈರೆಕ್ಟರ್ (CMSB)

ಜನರು ಪರಿಣತಿಯನ್ನು AI ನೆರವಿನಿಂದ ಸುಧಾರಿಸಬಹುದು ಎಂಬುದು ಸುಮಿಕ್ ರಾಯ್ ಅವರ ಅನಿಸಿಕೆ. ಜಗತ್ತಿನಲ್ಲಿ ಹಲವಾರು ಅಪ್ಲಿಕೇಶನ್‌ಗಳಿವೆ, ಆದರೆ ಉದ್ಯೋಗಗಳನ್ನು ರಚಿಸುವ ಮತ್ತು ಒದಗಿಸುವ ವಿಷಯಕ್ಕೆ ಬಂದಾಗ ಇವು ಹಿಂದುಳಿಯುತ್ತವೆ. ವಿದ್ಯುತ್, ಸ್ಟೀಮ್ ಎಂಜಿನ್‌ ಮತ್ತು ಕಂಪ್ಯೂಟರ್‌ ಇವೆಲ್ಲವೂ ಜಗತ್ತನ್ನು ಬದಲಾಯಿಸಿವೆ. ಆ ವಿಷಯಗಳು ಜಗತ್ತಿಗೆ ಹೊಸದಾಗಿದ್ದರೂ ಜನರಿಗೆ ಉದ್ಯೋಗ ಒದಗಿಸಿದವು ಎಂದು ಮೈಕ್ರೋಸಾಫ್ಟ್ ಇಂಡಿಯಾದ ಸಿಎಂಎಸ್​ಬಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ಉದ್ಯೋಗಕ್ಕೆ ಅಪಾಯಕಾರಿಯಲ್ಲ: ಸಮಿಕ್ ರಾಯ್

ಭಾರತದಲ್ಲಿ ಕಂಪ್ಯೂಟರ್‌ಗಳ ಆಗಮನದೊಂದಿಗೆ, ಐಟಿ ಕಂಪನಿಗಳು ದೇಶಕ್ಕೆ ಬಂದವು. ಆನ್‌ಲೈನ್ ಟ್ರೇಡಿಂಗ್ ಪ್ರಾರಂಭವಾಯಿತು. ಉದ್ಯೋಗಗಳು ಹೆಚ್ಚಾದವು. ಈ ಸಮಯದಲ್ಲಿ ನಾವು AI ನೆರವಿನಿಂದ ಕೌಶಲ್ಯ ಹೆಚ್ಚಿಸಿಕೊಳ್ಳಬಹುದು. AI ನಿಂದಾಗಿ ಉದ್ಯೋಗಗಳು ನಷ್ಟವಾಗುವುದಿಲ್ಲ. ಜನರು AI ಅನ್ನು ಅಳವಡಿಸಿಕೊಳ್ಳಬೇಕು ಎಂದು ಸುಮಿಕ್ ರಾಯ್ ತಿಳಿಹೇಳೀದರು.

ಡಾ. ಶೈಲೇಶ್ ಕುಮಾರ್, ಮುಖ್ಯ ಡೇಟಾ ವಿಜ್ಞಾನಿ, ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋದ ಮುಖ್ಯ ಡೇಟಾ ಸೈಂಟಿಸ್ಟ್ ಡಾ.ಶೈಲೇಶ್ ಕುಮಾರ್ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಲ್ಲಿ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇದರಲ್ಲಿ ಚಾಟ್ ಜಿಪಿಟಿ ಮಹತ್ವದ್ದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ 20 ವರ್ಷಗಳು ಬಹಳ ಮುಖ್ಯ. ಕೃಷಿ, ಆರೋಗ್ಯ ಕ್ಷೇತ್ರ ಮತ್ತು ಇತರ ಕ್ಷೇತ್ರಗಳ ಅಭಿವೃದ್ಧಿಗೆ AI ತಂತ್ರಜ್ಞಾನವು ಉಪಯುಕ್ತವಾಗಿರುತ್ತದೆ ಎಂದರು.

ನೀವು ಮನೆಯಲ್ಲಿ ಅದರ ರೋಗಲಕ್ಷಣಗಳ ಆಧಾರದ ಮೇಲೆ ರೋಗವನ್ನು ಎಐ ನೆರವಿನಿಂದ ಗುರುತಿಸಬಹುದು. ಇದಲ್ಲದೆ, ಈಗ AI ಟ್ಯೂಟರ್, AI ಡಾಕ್ಟರ್, AI ತಂತ್ರಜ್ಞರು ಮನೆಯಲ್ಲೇ ಸುಲಭವಾಗಿ ಲಭ್ಯವಿರುತ್ತಾರೆ ಎಂದು ಡಾ. ಶೈಲೇಶ್ ಕುಮಾರ್ ಹೇಳಿದರು.

ಜೊನಾಥನ್ ಬ್ರಾನ್ಫ್​ಮ್ಯಾನ್, ಚಲನಚಿತ್ರ ನಿರ್ಮಾಪಕರು ಮತ್ತು CEO, MARZ

ಹಾಲಿವುಡ್ ಚಲನಚಿತ್ರ ನಿರ್ಮಾಪಕ ಮತ್ತು Monsters, Aliens, Robots, Zombies (MARZ) VFX ನ CEO, Jonathan Bronfman ಅವರು AIನಿಂದಾಗಿ ಇವತ್ತು ಕಥೆಗಳ ಸೀಮೆ ದಾಟಿ ಹೋಗಿದೆ ಎಂದು ಹೇಳಿದರು.

ಹಾಲಿವುಡ್ ಚಿತ್ರ ರೇಸ್‌ನಲ್ಲಿ AI ಅನ್ನು ವ್ಯಾಪಕವಾಗಿ ಬಳಸಲಾಗಿದೆ. ಜೋರಾ ಚಿತ್ರದಲ್ಲಿ ಬಾಹ್ಯಾಕಾಶ ರಚಿಸಲು AI ಅನ್ನು ಬಳಸಲಾಯಿತು. ಇದಲ್ಲದೇ, AI ನಿಂದಾಗಿ ಲಿಪ್ ಸಿಂಕಿಂಗ್ ತಂತ್ರಜ್ಞಾನವು ಸಾಕಷ್ಟು ಸುಧಾರಿಸಿದೆ. ಚಲನಚಿತ್ರ ಮತ್ತು ಟಿವಿ ಉದ್ಯಮದಲ್ಲಿ AI ಹೊಸ ಮಾರ್ಗಗಳನ್ನು ತೆರೆದಿದೆ. ಅಮೆರಿಕಾದ ಮನರಂಜನಾ ಉದ್ಯಮದಲ್ಲಿ AI ಕಂಟೆಂಟ್ ಅನ್ನು ಅಧಿಕೃತಗೊಳಿಸುವ ಕೆಲಸ ನಡೆಯುತ್ತಿದೆ. AI ಯ ತಪ್ಪಾದ ಬಳಕೆಗಳಲ್ಲಿ ಡೀಪ್‌ಫೇಕ್ ಕೂಡ ಬರುತ್ತದೆ. ಆದರೆ ಇದೆಲ್ಲದರ ಹೊರತಾಗಿಯೂ, AI ನಿಂದ ಹಲವು ಉತ್ತಮ ಉಪಯೋಗಗಳಿವೆ ಎಂದು ಜೋನಾಥನ್ ಬ್ರಾನ್ಫ್​ಮನ್ ಹೇಳಿದರು.

ಇದನ್ನೂ ಓದಿ: ಇದು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಕಾಲ: ಭಾರತ್​ಪೇ ಛೇರ್ಮನ್ ರಜನೀಶ್ ಕುಮಾರ್

ಪ್ರೊ. ಅನುರಾಗ್ ಮೈರಾಲ್, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ

ಪ್ರೊಫೆಸರ್ ಅನುರಾಗ್ ಮೈರಾಲ್ ಅವರು ಈ ಸಂವಾದದಲ್ಲಿ ಮಾತನಾಡಿ, ಎಐನಿಂದಾಗಿ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದರು.

‘ಜಗತ್ತಿನಲ್ಲಿ 50 ಲಕ್ಷ ಜನರಿಗೆ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ, ಆದರೆ ಭಾರತದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಜನರಿಗೆ ಸ್ಥಳೀಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ AI ಉಪಯುಕ್ತವಾಗಿದೆ. ಕೊರೋನಾದ ಎರಡನೇ ಅಲೆ ಭಾರತದಲ್ಲಿ ಅನೇಕ ಜನರನ್ನು ಬಾಧಿಸಿದೆ. ಪ್ರಾಥಮಿಕ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಬಹಳಷ್ಟು ಸಹಾಯ ಮಾಡಿದರು. ಇದರಲ್ಲಿ AI ದೊಡ್ಡ ಪಾತ್ರವನ್ನು ವಹಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದಾಗಿಯೇ ಈ ನೆರವು ಒದಗಿಸಲು ಸಾಧ್ಯವಾಯಿತು.

‘ಇಂದಿನ ಕಾಲದಲ್ಲಿ, ಅನೇಕ ವೈರಸ್‌ಗಳು ಮಕ್ಕಳು, ಮಹಿಳೆಯರು ಮತ್ತು ವೃದ್ಧರನ್ನು ಬಾಧಿಸುತ್ತಿವೆ. ಅವರ ಡೇಟಾ ಸಂಗ್ರಹಣೆಗೆ ಎಐ ಅನ್ನು ಬಳಸಲಾಗುತ್ತಿದೆ. AI ಮತ್ತು ಅಂತಹುದೇ ತಂತ್ರಜ್ಞಾನಗಳೊಂದಿಗೆ ನಾವು ನಮ್ಮ ವಯಸ್ಸನ್ನು ಹೆಚ್ಚಿಸಬಹುದು’ ಎಂದು ಕೃತಕ ಬುದ್ಧಿಮತ್ತೆ ಟೆಕ್ನಾಲಜಿಯ ಉಪಯೋಗಗಳ ಬಗ್ಗೆ ಪ್ರೊಫೆಸರ್ ವಿವರಣೆ ನೀಡಿದರು.

ಅಲೋಕ್ ಶುಕ್ಲಾ, ನಿರ್ದೇಶಕರು, AI ವಿಷನ್, ಸ್ಯಾಮ್ಸಂಗ್

ಸ್ಯಾಮ್‌ಸಂಗ್‌ ರಿಸರ್ಚ್‌ನ ಎಐ ವಿಷನ್‌ನ ನಿರ್ದೇಶಕ ಅಲೋಕ್ ಶುಕ್ಲಾ ಮಾತನಾಡಿ, ಎಐ ಅತಿ ದೊಡ್ಡ ದತ್ತಾಂಶವನ್ನು ಬಹುಬೇಗ ವಿಶ್ಲೇಷಿಸಬಲ್ಲದು. ಬಹಳಷ್ಟು ಡೇಟಾವು ನಮ್ಮ ನಡವಳಿಕೆ ಮತ್ತು ನಮ್ಮ ಫಿಟ್‌ನೆಸ್ ಬಗ್ಗೆ ಹೇಳುತ್ತದೆ, ಅದನ್ನು ವಿಶ್ಲೇಷಿಸುವ ಮೂಲಕ AI ನಮ್ಮ ಬಗ್ಗೆ ಸಾಕಷ್ಟು ಹೇಳಬಹುದು. ಕೈಗಾರಿಕೆಗಳಲ್ಲಿ ದೊಡ್ಡ ಡೇಟಾಬೇಸ್‌ಗಳನ್ನು ನಿರ್ವಹಿಸುವಲ್ಲಿ AI ದೊಡ್ಡ ಕೊಡುಗೆಯನ್ನು ನೀಡಬಹುದು. ನೆಟ್‌ವರ್ಕಿಂಗ್‌ನಲ್ಲಿಯೂ ಸಹ, AI ಮೂಲಕ ಡೇಟಾವನ್ನು ನಿಯಂತ್ರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವೇರಬಲ್ಸ್ (ಧರಿಸಬಹುದಾದ ಉಪಕರಣ), ಸ್ಮಾರ್ಟ್‌ಫೋನ್‌ಗಳಂತಹ ಸಾಧನಗಳಲ್ಲಿ ದೈಹಿಕ ಚಟುವಟಿಕೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಆರೋಗ್ಯವನ್ನು ಸುಧಾರಿಸುವಲ್ಲಿ AI ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಇದು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. AI ಫಿಟ್‌ನೆಸ್‌ ಮಾತ್ರವಲ್ಲ, ಸಮಾಜವನ್ನೂ ಸುಧಾರಿಸುತ್ತದೆ ಎಂದು ಅಲೋಕ್ ಶುಕ್ಲಾ ತಿಳಿಸಿದರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Mon, 26 February 24