BCCI
BCCI: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಭಾರತೀಯ ಕ್ರಿಕೆಟ್ನ ಆಡಳಿತ ಕೇಂದ್ರ. 1928 ರಲ್ಲಿ ರಚಿಸಲಾದ ಈ ಸಂಸ್ಥೆಯು ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯ ಮೊದಲ ಅಧ್ಯಕ್ಷ ಆರ್ಇ ಗ್ರಾಂಟ್ ಗೋವನ್. ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರೋಜರ್ ಬಿನ್ನಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪೂರ್ಣ ಮತ್ತು ಸಹವರ್ತಿ ಸದಸ್ಯ ಸಂಸ್ಥೆಗಳನ್ನು ಒಳಗೊಂಡಿದ್ದು, ಇದಲರಲ್ಲಿ ಬಹುಪಾಲು ಸದಸ್ಯರು ರಾಜ್ಯ ಕ್ರಿಕೆಟ್ ಸಂಸ್ಥೆಗಳಾಗಿವೆ. ಅದರಂತೆ ಇದೀಗ ಬಿಸಿಸಿಐ ಅಧೀನದಲ್ಲಿ 41 ಕ್ರಿಕೆಟ್ ಸಂಸ್ಥೆಗಳಿವೆ. ಇನ್ನು ರಾಷ್ಟ್ರೀಯ ಸರಣಿಗಳೊಂದಿಗೆ ಬಿಸಿಸಿಐ ಆಯೋಜಿಸುವ ಪ್ರಮುಖ ದೇಶೀಯ ಟೂರ್ನಿಗಳೆಂದರೆ ರಣಜಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಐಪಿಎಲ್
ನೆರೆಯ ದೇಶದ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ ಭಾರತ; ಸ್ವಾತಂತ್ರ್ಯ ದಿನದಂದು ಮೊದಲ ಪಂದ್ಯ
India vs Sri Lanka Test Series 2026: 2026ರಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ 15ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ನಿರ್ಣಾಯಕವಾಗಿದೆ. ಇದರೊಂದಿಗೆ ಟಿ20 ಸರಣಿಯೂ ನಿರೀಕ್ಷಿಸಲಾಗಿದೆ. ಒಂಬತ್ತು ವರ್ಷಗಳ ನಂತರ ಭಾರತ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದು, ಶುಭ್ಮನ್ ಗಿಲ್ ನಾಯಕತ್ವದಲ್ಲಿ ಯುವ ಪಡೆ ಪ್ರದರ್ಶನ ನೀಡಲಿದೆ. ಗಾಲೆ ಮತ್ತು ಕೊಲಂಬೊ ಮೈದಾನಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
- pruthvi Shankar
- Updated on: Jun 10, 2026
- 9:44 pm
ರಿಚಾ ಹೋರಾಟ ವ್ಯರ್ಥ; 3 ಎಸೆತಗಳಲ್ಲಿ 6 ರನ್ ಬಾರಿಸದೆ ಸೋತ ಟೀಂ ಇಂಡಿಯಾ
Women's T20 World Cup 2026 Warm-up: 2026ರ ಮಹಿಳಾ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧ 5 ರನ್‌ಗಳ ರೋಚಕ ಸೋಲನುಭವಿಸಿದೆ. ಇಂಗ್ಲೆಂಡ್ ನೀಡಿದ 172 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ರಿಚಾ ಘೋಷ್ ಅವರ 68 ರನ್‌ಗಳ ಹೋರಾಟದ ಹೊರತಾಗಿಯೂ ಗೆಲುವಿನ ದಡ ಮುಟ್ಟಲು ವಿಫಲವಾಯಿತು. ಕೊನೆಯ ಓವರ್‌ನಲ್ಲಿ ರಿಚಾ ವಿಕೆಟ್ ಪತನದೊಂದಿಗೆ ತಂಡ 5 ರನ್‌ಗಳಿಂದ ಸೋಲೊಪ್ಪಿಕೊಂಡಿತು
- pruthvi Shankar
- Updated on: Jun 11, 2026
- 7:22 am
ಚೊಚ್ಚಲ ಟೆಸ್ಟ್‌ನಲ್ಲಿ ಮಿಂಚಿ ವಿದೇಶಿ ತಂಡವನ್ನು ಸೇರಿಕೊಂಡ ಮಾನವ್ ಸುತಾರ್
Manav Suthar: ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಅಫ್ಘಾನಿಸ್ತಾನ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಈಗ ಇಂಗ್ಲೆಂಡ್‌ನ ವಾರ್ವಿಕ್‌ಷೈರ್ ಕೌಂಟಿ ಕ್ಲಬ್ ಸೇರಲಿದ್ದಾರೆ. 23 ವರ್ಷದ ಈ ಎಡಗೈ ಸ್ಪಿನ್ನರ್ ಕೌಂಟಿ ಚಾಂಪಿಯನ್‌ಶಿಪ್‌ನ ಎರಡು ಪ್ರಮುಖ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಇಂಗ್ಲೆಂಡ್ ಪಿಚ್‌ಗಳಲ್ಲಿ ತಮ್ಮ ಮಾಂತ್ರಿಕ ಬೌಲಿಂಗ್ ಪ್ರದರ್ಶಿಸಲು ಸುತಾರ್ ಉತ್ಸುಕರಾಗಿದ್ದಾರೆ.
- pruthvi Shankar
- Updated on: Jun 10, 2026
- 5:52 pm
IND vs AFG: ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್..!
Hardik Pandya Ruled Out Due to Injury: ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಜೂನ್ 13ರಿಂದ ಆರಂಭವಾಗಲಿರುವ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಗಾಯದ ಕಾರಣ ಹೊರಗುಳಿದಿದ್ದಾರೆ. ಕಾಲು ಉಳುಕಿರುವ ಪಾಂಡ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ರಿಹ್ಯಾಬ್ ಪಡೆಯಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯ ನಂತರ ಇದು ಭಾರತಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಮೂರು ಪಂದ್ಯಗಳ ಸರಣಿ ಧರ್ಮಶಾಲಾ, ಲಕ್ನೋ ಮತ್ತು ಚೆನ್ನೈನಲ್ಲಿ ನಡೆಯಲಿದೆ.
- pruthvi Shankar
- Updated on: Jun 10, 2026
- 3:11 pm
IND vs AFG: ಭಾರತ- ಅಫ್ಘನ್ ಏಕದಿನ ಸರಣಿ ಯಾವಾಗ ಆರಂಭ? ಎಷ್ಟು ಪಂದ್ಯಗಳು ನಡೆಯಲಿವೆ?
India vs Afghanistan ODI Series: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿ ಜೂನ್ 13 ರಿಂದ ಆರಂಭವಾಗಲಿದೆ. ವಿಶ್ವಕಪ್ ದೃಷ್ಟಿಯಿಂದ ಮಹತ್ವದ ಈ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿ ಎದ್ದು ಕಾಣಲಿದೆ. ಯುವ ಆಟಗಾರರ ನೇತೃತ್ವದಲ್ಲಿ ಟೀಂ ಇಂಡಿಯಾ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು. ಮೂರು ಪಂದ್ಯಗಳ ವೇಳಾಪಟ್ಟಿ, ತಂಡಗಳ ವಿವರ, ಮತ್ತು ಉಭಯ ತಂಡಗಳ ಹಿಂದಿನ ಮುಖಾಮುಖಿ ದಾಖಲೆಗಳನ್ನು ಇಲ್ಲಿ ನೀಡಲಾಗಿದೆ.
- pruthvi Shankar
- Updated on: Jun 8, 2026
- 6:56 pm
IND vs AFG: ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಗೆದ್ದು ದಿಗ್ಗಜರ ಪಟ್ಟಿಗೆ ಸೇರಿದ ಮಾನವ್
Manav Suthar Shines: ಮಾನವ್ ಸುತಾರ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದು ರೋಹಿತ್ ಶರ್ಮಾ ಸೇರಿದಂತೆ ಭಾರತದ ಇತಿಹಾಸದ ಶ್ರೇಷ್ಠ ಆಟಗಾರರ ಎಲೈಟ್ ಕ್ಲಬ್‌ಗೆ ಸೇರಿದ್ದಾರೆ. ಚೊಚ್ಚಲ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ 9ನೇ ಭಾರತೀಯ ಹಾಗೂ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ 10ನೇ ಬೌಲರ್ ಎಂಬ ಹೆಗ್ಗಳಿಕೆಗೆ ಸುತಾರ್ ಪಾತ್ರರಾಗಿದ್ದಾರೆ. ಇದು ಅವರ ಕನಸಾಗಿತ್ತು, ತಾಳ್ಮೆ ಮತ್ತು ಸ್ಥಿರ ಬೌಲಿಂಗ್ ಪ್ರಮುಖ ಎಂದು ಅವರು ಹೇಳಿದ್ದಾರೆ.
- pruthvi Shankar
- Updated on: Jun 8, 2026
- 5:59 pm
WTC Points Table: ದಾಖಲೆ ಜಯ ಸಾಧಿಸಿದರೂ 6ನೇ ಸ್ಥಾನದಲ್ಲೇ ಉಳಿದ ಟೀಂ ಇಂಡಿಯಾ
WTC Points Table: ಭಾರತ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಸರಣಿ ಗೆದ್ದರೂ, ಈ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರಲಿಲ್ಲ. ಹಾಗಾಗಿ ಭಾರತಕ್ಕೆ WTC ಪಾಯಿಂಟ್ಸ್ ಸಿಕ್ಕಿಲ್ಲ, 6ನೇ ಸ್ಥಾನದಲ್ಲಿ ಉಳಿದಿದೆ. ಇತ್ತೀಚಿನ ನ್ಯೂಜಿಲೆಂಡ್ ಸೋಲಿನಿಂದ WTC ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಭಾರತದ ಮುಂದಿನ ಸರಣಿಗಳು ಫೈನಲ್ ತಲುಪಲು ನಿರ್ಣಾಯಕವಾಗಿವೆ.
- pruthvi Shankar
- Updated on: Jun 8, 2026
- 5:30 pm
IND vs AFG: ಟೆಸ್ಟ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ
India Dominates Afghanistan in Chandigarh Test: ನ್ಯೂ ಚಂಡೀಗಢದಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಹೀನಾಯವಾಗಿ ಸೋಲಿಸಿದೆ. ಇದು ಭಾರತಕ್ಕೆ ಟೆಸ್ಟ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವಾಗಿದ್ದು, ತನ್ನದೇ ಆದ ಎಂಟು ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 152, ಎರಡನೇ ಇನ್ನಿಂಗ್ಸ್‌ನಲ್ಲಿ 112 ರನ್‌ಗಳಿಗೆ ಆಲೌಟ್ ಆಯಿತು.
- pruthvi Shankar
- Updated on: Jun 8, 2026
- 4:14 pm
IND vs AFG: ಅಫ್ಘನ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 300 ರನ್‌ಗಳ ಜಯ
India Dominates Afghanistan: ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿ ನಡೆದ ಭಾರತ vs ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೂರು ದಿನಗಳಿಗೂ ಮೊದಲೇ ಭರ್ಜರಿ ಇನ್ನಿಂಗ್ಸ್ ಜಯ ಗಳಿಸಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿ 564 ರನ್ ಗಳಿಸಿತು. ಅಫ್ಘಾನಿಸ್ತಾನ ತಂಡವು ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತದ ಮುನ್ನಡೆಯನ್ನು ತಲುಪುವಲ್ಲಿ ವಿಫಲವಾಗಿ, ಹೀನಾಯ ಇನ್ನಿಂಗ್ಸ್ ಸೋಲಿಗೆ ಶರಣಾಯಿತು. ಗಿಲ್ ನಾಯಕತ್ವದ ಭಾರತೀಯ ಪಡೆ ನಿರೀಕ್ಷಿಸಿದಂತೆ ಏಕಪಕ್ಷೀಯ ಗೆಲುವು ಸಾಧಿಸಿದೆ.
- pruthvi Shankar
- Updated on: Jun 8, 2026
- 3:45 pm
ವ್ಯಕ್ತಿತ್ವವನ್ನು ಬದಲಾಯಿಸುವ ಅಗತ್ಯವಿಲ್ಲ; ನಾಯಕತ್ವ ಸಿಕ್ಕ ಬಳಿಕ ಶ್ರೇಯಸ್ ಮೊದಲ ಮಾತು
Shreyas Iyer T20 Captain: ಭಾರತದ ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್ ಹೊಸ ನಾಯಕರಾಗಿ ನೇಮಕಗೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಬದಲಿಗೆ ಚುಕ್ಕಾಣಿ ಹಿಡಿದಿರುವ ಶ್ರೇಯಸ್, ತಮ್ಮ ಮುಂದಿನ ಗುರಿ ಗೆಲ್ಲುವುದು ಮತ್ತು ಸವಾಲುಗಳನ್ನು ಎದುರಿಸುವುದು ಎಂದು ಹೇಳಿದ್ದಾರೆ. ಮುಂಬೈ ಲೀಗ್ನಲ್ಲಿ ಭಾಗವಹಿಸುತ್ತಿರುವ ಅಯ್ಯರ್, ಐರ್ಲೆಂಡ್, ಇಂಗ್ಲೆಂಡ್ ಹಾಗೂ ಏಷ್ಯನ್ ಗೇಮ್ಸ್ ಸರಣಿಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
- pruthvi Shankar
- Updated on: Jun 7, 2026
- 10:20 pm
IND vs AFG: 3 ವರ್ಷಗಳ ನಂತರ ಭಾರತದ ನೆಲದಲ್ಲಿ ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ
Prasidh Krishna's Maiden Test Wickets: ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಭಾರತದ ನೆಲದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ವಿಕೆಟ್‌ಗಳನ್ನು ಪಡೆದರು. ನ್ಯೂ ಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ ಪ್ರಸಿದ್ಧ್ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಅನುಭವಿ ಸಿರಾಜ್ ಜೊತೆ ಬೌಲಿಂಗ್ ಮಾಡಿದ ಪ್ರಸಿದ್ಧ್, 7 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದು ತಂಡಕ್ಕೆ ಮಹತ್ವದ ಕೊಡುಗೆ ನೀಡಿದರು.
- pruthvi Shankar
- Updated on: Jun 7, 2026
- 9:43 pm
IND vs AFG: W,W,W.. 25 ವರ್ಷಗಳ ವಿಕೆಟ್ ಬರ ನೀಗಿಸಿದ ಮಾನವ್ ಸುತಾರ್
Manav Suthar Shines on Debut: ನ್ಯೂ ಚಂಡೀಗಢದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಮಾನವ್ ಸುತಾರ್ ಅದ್ಭುತವಾಗಿ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ ಅವರು, ತನ್ನ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದು 25 ವರ್ಷಗಳ ದಾಖಲೆಯನ್ನು ಮುರಿದರು. ಬ್ಯಾಟಿಂಗ್‌ನಲ್ಲಿಯೂ 28 ರನ್ ಗಳಿಸಿ ತಂಡಕ್ಕೆ ನೆರವಾದ ಸುತಾರ್, ಭಾರತ ತಂಡ ಅಫ್ಘಾನಿಸ್ತಾನದ ಮೇಲೆ ಪ್ರಬಲ ಮೇಲುಗೈ ಸಾಧಿಸಲು ಪ್ರಮುಖ ಪಾತ್ರ ವಹಿಸಿದರು.
- pruthvi Shankar
- Updated on: Jun 7, 2026
- 8:18 pm