Video Viral : ಗೇಟ್ ಹಾರಲು ಯತ್ನಿಸುತ್ತಿರುವ ದೈತ್ಯ ಮೊಸಳೆಯ ವಿಡಿಯೋ ವೈರಲ್​​

|

Updated on: May 30, 2024 | 3:44 PM

10 ಅಡಿ ಉದ್ದದ ದೈತ್ಯ ಮೊಸಳೆಯು ಗೇಟ್ ಹತ್ತಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯ ಜನರು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

Video Viral : ಗೇಟ್ ಹಾರಲು ಯತ್ನಿಸುತ್ತಿರುವ ದೈತ್ಯ ಮೊಸಳೆಯ ವಿಡಿಯೋ ವೈರಲ್​​
Follow us on

ಉತ್ತರ ಪ್ರದೇಶ: ಬುಲಾನ್ಸ್‌ಧರ್‌ನ ನರೋರಾನ ಗಂಗಾ ಘಾಟ್‌ನ ಕಾಲುವೆಯ ಬಳಿ ಬುಧವಾರ ಬೆಳಗ್ಗೆ 10 ಅಡಿ ಉದ್ದದ ಮೊಸಳೆ ಕಾಣಿಸಿಕೊಂಡಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಬೃಹತ್ ಮೊಸಳೆ ಅಚಾನಕ್ಕಾಗಿ ನೀರಿನಿಂದ ಹೊರ ಬಂದಿದ್ದು, ಮತ್ತೆ ನದಿಗೆ ಹಾರಲು ಯತ್ನಿಸುತ್ತಿರುವುದು, ಅಲ್ಲಿನ ಗೇಟಿನ ಮೇಲೆ ಹತ್ತಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.

10 ಅಡಿ ಉದ್ದದ ದೈತ್ಯ ಮೊಸಳೆಯು ಗೇಟ್ ಹತ್ತಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯ ಜನರು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ಹಿಂದಿ ನ್ಯೂಸ್ ಪೋರ್ಟಲ್, ಲೈವ್ ಹಿಂದೂಸ್ತಾನ್‌ನಲ್ಲಿನ ವರದಿಯ ಪ್ರಕಾರ, ದಾರಿತಪ್ಪಿ ನೀರಿನಿಂದ ಹೊರಬಂದಿದ್ದ ಮತ್ತು ಮತ್ತೆ ನೀರಿಗೆ ಮರಳಲು ಸಹಾಯಕ್ಕಾಗಿ ಓಡಾಡುತ್ತಿದ್ದ ಮೊಸಳೆಯನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮದುವೆಯಾದ ಎರಡೇ ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಯುವತಿ; ಶಾಕ್​​ಗೆ ಒಳಗಾಗ ವರನ ಕುಟುಂಬ

ಅರಣ್ಯ ರೇಂಜ್ ಅಧಿಕಾರಿ ಮೋಹಿತ್ ಚೌಧರಿ ಅವರು ರಕ್ಷಣಾ ತಜ್ಞ ಪವನ್ ಕುಮಾರ್ ಅವರೊಂದಿಗೆ ಎಚ್ಚರಿಕೆಯಿಂದ ಪ್ರಯತ್ನದಿಂದ ಮೊಸಳೆಯನ್ನು ರಕ್ಷಿಸಿದ್ದಾರೆ ಎಂದು ಸುದ್ದಿ ವರದಿ ಉಲ್ಲೇಖಿಸಿದೆ. ಅಲ್ಲಿನ ಸಿಹಿನೀರಿನ ಕಾಲುವೆಯಿಂದ ತಪ್ಪಿಸಿಕೊಂಡ ಹೆಣ್ಣು ಮೊಸಳೆ ಎಂದು ಗುರುತಿಸಲಾಗಿದೆ. ನಂತರ, ಅದನ್ನು ಪಿಎಲ್‌ಜಿಸಿ ಕಾಲುವೆಯಲ್ಲಿ ಬಿಡಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ