Viral Video : ಹಳೆಯ ವಸ್ತುಗಳೇನಾದರೂ ಸಿಕ್ಕಲ್ಲಿ ಆ ಬಗ್ಗೆ ಕುತೂಹಲ ಉಂಟಾಗುವುದರಲ್ಲಿ ಸಂಶಯವೇ ಇಲ್ಲ. ಇದು ಇಲ್ಲಿಗೆ ಹೇಗೆ ಬಂತು? ಯಾರು ಇದನ್ನಿಲ್ಲಿ ಇಟ್ಟರು? ಯಾಕಾಗಿ ಇಟ್ಟರು? ಇದರ ಹಿಂದಿನ ಕಥೆ ಏನು ಎಂಬೆಲ್ಲ ಪ್ರಶ್ನೆಗಳು ಏಳುವುದು ಸಹಜ ಅಲ್ಲವೆ? ಬಾಟಲಿಯಲ್ಲಿ ಸುತ್ತಿಟ್ಟ 135 ವರ್ಷದ ಹಿಂದಿನ ಚೀಟಿಯೊಂದು ಸ್ಕಾಟ್ಲ್ಯಾಂಡ್ನ ಪ್ಲಂಬರ್ಗೆ ಇದೀಗ ದೊರೆತಿದೆ. ಇದೀಗ ವೈರಲ್ ಆಗುತ್ತಿರುವ ಈ ಚೀಟಿಯಲ್ಲಿ ಏನು ಬರೆದಿದೆ ಎಂದು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ.
ಸ್ಕಾಟ್ಲ್ಯಾಂಡ್ನ ಪ್ಲಂಬರ್ ಇಲೀದ್ ಸ್ಟಿಂಫನ್ಸ್ ಎಂಬುವವರ ಮನೆಯ ಕೊಳಾಯಿ ರಿಪೇರಿಗೆಂದು ಬಂದಾಗ ಈ ಅಚ್ಚರಿಯ ಘಟನೆ ನಡೆದಿದೆ. ರಿಪೇರಿಗಾಗಿ ರಂಧ್ರ ಕೊರೆಯುತ್ತಿದ್ದಾಗ ಈ ಚೀಟಿ ಪತ್ತೆಯಾಗಿದೆ. ಇದನ್ನು ನೋಡಿದ ಪ್ಲಂಬರ್ ಆಶ್ಚರ್ಯದಿಂದ ತಕ್ಷಣವೇ ಮಾಲೀಕರಿಗೆ ತಿಳಿಸಿದ್ದಾರೆ. ನಂತರ ಬಾಟಲಿಯನ್ನು ಸುತ್ತಿಗೆಯಿಂದ ಹೊಡೆದು ಚೀಟಿಯನ್ನು ಹೊರತೆಗೆದಿದ್ದಾರೆ. ಫೇಸ್ಬುಕ್ನಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : ಸರ್ದಾರ್ಜೀ ಕನ್ನಡ ಪ್ರೇಮ; ಅದು ಡೋಸಾ ಅಲ್ಲ ದೋಸೆ ‘ಸಿಂಘವರು’ ಹೇಳುತ್ತಿದ್ದಾರೆ ಕೇಳಿರೈ ಕನ್ನಡಿಗರೇ
1887ರ ಅಕ್ಟೋಬರ್ನಲ್ಲಿ ಜೇಮ್ಸ್ ರಿಚಿ ಮತ್ತು ಜಾನ್ ಗ್ರೀವ್ ಎಂಬುವವರು ಇದನ್ನು ಹೀಗೆ ಬಾಟಲಿಯೊಳಗೆ ಚೀಟಿಯನ್ನು ಹಾಕಿಟ್ಟಿದ್ದರು. ನವೆಂಬರ್ 16ರಂದು ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. 300ಕ್ಕೂ ಹೆಚ್ಚು ಜನರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.
ಹಳೆಯ ವಸ್ತುಗಳ ಹಿಂದೆ ಒಂದೊಂದು ಕಥೆ ಇದ್ದೇ ಇರುತ್ತದೆ. ಆದರೆ ಈ ಚೀಟಿಯ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ದೊರೆತಿಲ್ಲ.
ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ
Published On - 5:11 pm, Wed, 23 November 22