‘ಮೈ ಗರ್ಲ್​’ ಹಾಡುತ್ತಿರುವ ಈ ಅಪ್ಪ, ತಂತಿಗಳ ಮೇಲೆ ಬೆರಳಾಡಿಸುತ್ತಿರುವ ಮಗಳು

My Girl : ಗಿಟಾರಿನ ಅಂಚಿನ ಮೇಲೆ ಎಳೆಯ ಮಗಳನ್ನು ಮಲಗಿಸಿಕೊಂಡು ಈ ಅಪ್ಪ ಹಾಡುವ ಹಾಡು ನಿಮ್ಮ ಬಾಲ್ಯವನ್ನು ನೆನಪಿಸುವಂತಿದೆ. ಬಹಳ ಹೃದಯಸ್ಪರ್ಶಿಯಾಗಿದೆ ಈ ವಿಡಿಯೋ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನಿಸುತ್ತದೆ.

‘ಮೈ ಗರ್ಲ್​’ ಹಾಡುತ್ತಿರುವ ಈ ಅಪ್ಪ, ತಂತಿಗಳ ಮೇಲೆ ಬೆರಳಾಡಿಸುತ್ತಿರುವ ಮಗಳು
ಮಗಳಿಗಾಗಿ ಅಪ್ಪನ ಹಾಡು
TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Nov 23, 2022 | 3:04 PM

Viral Video : ಅಪ್ಪಂದಿರಿಗೆ ಹೆಣ್ಣುಮಕ್ಕಳೆಂದರೆ ಪಂಚಪ್ರಾಣ! ಈಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೋಡಿ, ಎಳೇಮಗಳನ್ನು ಗಿಟಾರಿನಗುಂಟ ಮಲಗಿಸಿ ಅವಳಿಗಾಗಿ ಹಾಡು ಹಾಡುತ್ತಿದ್ದಾನೆ. ಪುಟ್ಟಪುಟ್ಟ ಬೆರಳುಗಳನ್ನು ತಂತಿಯ ಮೇಲಾಡಿಸುತ್ತಿದೆ ಮುದ್ದುಕೂಸು. ದಿ ಟೆಂಪ್ಟೇಷನ್ಸ್​ನಲ್ಲಿರುವ ‘ಮೈ ಗರ್ಲ್​’ ಹಾಡನ್ನು ಈತ ಹಾಡುತ್ತಿದ್ದಾನೆ. ಸಂಗೀತಕ್ಕೆ ಮನಸೋಲದ ಜೀವ ಯಾವುದಿದೆ ಈ ಭೂಮಿಯ ಮೇಲೆ? ನೋಡಿ ಈ ಹೃದಯಸ್ಪರ್ಶಿಯಾದ ವಿಡಿಯೋ.

View this post on Instagram

A post shared by Sam Mac (@sammacinsta)

ನಾನು ಅಪ್ಪನಾಗಿದ್ದೇನೆ! ನನ್ನ ಮುದ್ದುಕೂಸು ಮಾರ್ಗೋಟ್​ ಈಗಾಗಲೇ ಉತ್ತಮ ಗಿಟಾರ್​ವಾದಕಿಯಾಗುವ ಲಕ್ಷಣಗಳನ್ನು ತೋರುತ್ತಿದ್ದಾಳೆ. ಎಂದು ಸ್ಯಾಮ್​ ಮ್ಯಾಕ್​ ತಮ್ಮ ಪೋಸ್ಟ್​ನಲ್ಲಿ ಹೇಳಿಕೊಂಡಿದ್ಧಾರೆ. ಇನ್ನೇನು ಈ ವಿಡಿಯೋ 80,000 ಜನರನ್ನು ತಲುಪುತ್ತದೆ. ನೆಟ್ಟಿಗರು ಈ ವಿಡಿಯೋ ನೋಡಿ ಕರಗುತ್ತಿದ್ದಾರೆ. ಅಯ್ಯೋ ನಾನು ನೋಡಿದ ಎಲ್ಲಾ ವಿಡಿಯೋಗಳಲ್ಲಿ ಇದು ಅತ್ಯಂತ ಉತ್ತಮವಾದದ್ದು ಎಂದಿದ್ದಾರೆ ಒಬ್ಬರು. ಓಹ್​ ಬಹಳ ಮುದ್ದಾಗಿದೆ, ನಿಮ್ಮ ಮಾರ್ಗೋಡ್​ ಮತ್ತು ನಿಮ್ಮ ಬಾಂಧವ್ಯ ಹೀಗೇ ಸುಮಧುರವಾಗಿರಲಿ ಎಂದು ಮತ್ತೊಬ್ಬರು ಹಾರೈಸಿದ್ದಾರೆ. ಈ ವಿಡಿಯೋ ಬಹಳ ಮೋಹಕವಾಗಿದೆ, ನನ್ನನ್ನು ಪದೇಪದೆ ಅಳಿಸುತ್ತಿದೆ ಎಂದಿದ್ಧಾರೆ ಮಗದೊಬ್ಬರು.

ಮಗು, ಸಂಗೀತ ಮತ್ತು ಮೃದುಮಧುರವಾದ ಏನೂ ನಿಮ್ಮನ್ನು ಅರಳಿಸದೇ ಇರದು. ಅಲ್ಲವೆ?

ಇದನ್ನೂ ಓದಿ

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada