Video: ತೂಗು ಉಯ್ಯಾಲೆಯಲ್ಲಿ ಕುತ್ಕೊಳ್ಳಲು ಮರಿಯಾನೆಯ ಸರ್ಕಸ್, ವೈರಲ್ ಆಯ್ತು ದೃಶ್ಯ

ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ಕ್ಯೂಟ್ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಮರಿಯಾನೆಯೊಂದು ತೂಗು ಉಯ್ಯಾಲೆ ಮೇಲೆ ಕುಳಿತುಕೊಳ್ಳಲು ಹರಸಾಹಾಸ ಪಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪುಟಾಣಿ ಆನೆಯ ಪರದಾಟ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತೂಗು ಉಯ್ಯಾಲೆಯಲ್ಲಿ ಕುತ್ಕೊಳ್ಳಲು ಮರಿಯಾನೆಯ ಸರ್ಕಸ್, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Oct 19, 2026 | 8:58 PM

ಮರಿಯಾನೆಗಳ (baby elephants) ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ. ಈ ಪುಟಾಣಿ ಆನೆಗಳ ಮುದ್ದು ಪೆದ್ದು ವಿಡಿಯೋಗಳು ಆಗಾಗ ನೆಟ್ಟಿಗರ ಕಣ್ಮನ ಸೆಳೆಯುತ್ತವೆ. ಇದೀಗ ಪುಟಾಣಿ ಆನೆಯೊಂದು ತೂಗು ಉಯ್ಯಾಲೆಯಲ್ಲಿ ಕುಳಿತುಕೊಳ್ಳಲು ಹರಸಾಹಸ ಪಡುತ್ತಿದೆ. ಥೈಲ್ಯಾಂಡ್ ನ ಚೋಕ್ಚೈ ಎಲಿಫೆಂಟ್ ಕ್ಯಾಂಪ್ ನಲ್ಲಿ ಕಂಡು ಬಂದ ದೃಶ್ಯ ಇದಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ತೂಗು ಉಯ್ಯಾಲೆಯಲ್ಲಿ ಕುತ್ಕೊಳ್ಳಲು ಮರಿಯಾನೆಯ ಒದ್ದಾಟ

ಚೋಕ್ಚೈ ಎಲಿಫೆಂಟ್ ಕ್ಯಾಂಪ್ (Chokchai Elephant Camp) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ನದಿ ತೀರದಲ್ಲಿ ತೂಗು ಉಯ್ಯಾಲೆಯೊಂದಿದೆ. ಮರಿಯಾನೆ ಈ ಉಯ್ಯಾಲೆಯಲ್ಲಿ ಕುಳಿತುಕೊಳ್ಳಲು ಪ್ರಯತ್ನ ಪಡುತ್ತಿದೆ. ಆದರೆ ಸಾಧ್ಯವಾಗದಿದ್ರೂ ಆನೆಯು ಹಿಂದೆ ಹೆಜ್ಜೆ ಹಾಕದೇ ಕುಳಿತುಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯವನ್ನು ನೀವು ನೋಡಬಹುದು.

Loading...

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: Video: ಚೆಂಡಾಟ ಆಡೋದಂದ್ರೆ ಈ ಪುಟಾಣಿ ಆನೆಗೆ ಎಷ್ಟು ಇಷ್ಟ ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಲವರು ಹಾರ್ಟ್ ಸಿಂಬಲ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ ಕ್ಯೂಟೆಸ್ಟ್ ವಿಡಿಯೋ ಎಂದರೆ, ಮತ್ತೊಬ್ಬರು, ಮರಿಯಾನೆಯ ಒದ್ದಾಟ ನೋಡಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು ಕ್ಯೂಟ್ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 8:57 pm, Mon, 19 October 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us