Video: ಮರದ ಬೇಲಿ ದಾಟಲು ಹೋಗಿ ಮುಗ್ಗರಿಸಿ ಬಿದ್ದ ಮರಿಯಾನೆ, ವೈರಲ್‌ ಆಯ್ತು ದೃಶ್ಯ

ಆನೆಗಳ ಆಟ ತುಂಟಾಟಗಳನ್ನು ನೋಡುವುದೇ ಖುಷಿ. ಪುಟಾಣಿ ಆನೆಗಳು ನೋಡ ನೋಡುತ್ತಿದ್ದಂತೆ ಎಡವಟ್ಟು ಮಾಡಿಕೊಳ್ಳುವುದೇ ಹೆಚ್ಚು. ಇದೀಗ ಮರದ ಬೇಲಿ ದಾಟಲು ಹೋಗಿ ಮರಿಯಾನೆ ಮುಗ್ಗರಿಸಿ ಬಿದ್ದಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮರದ ಬೇಲಿ ದಾಟಲು ಹೋಗಿ ಮುಗ್ಗರಿಸಿ ಬಿದ್ದ ಮರಿಯಾನೆ, ವೈರಲ್‌ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Oct 16, 2026 | 11:58 AM

ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಈ ಆನೆಗಳ (Elephants) ಕ್ಯೂಟ್ ವಿಡಿಯೋ ನೋಡಿದ್ರೆ ಖುಷಿ ಎನಿಸುತ್ತದೆ. ಇದೀಗ ಮರಿಯಾನೆ ತುಂಟಾಟ ಮಾಡಿದೆ. ಹೌದು, ಅಡ್ಡಲಾಗಿ ಕಟ್ಟಿದ್ದ ಮರದ ಬೇಲಿ ದಾಟುತ್ತಿದ್ದಂತೆ ಮುಗ್ಗರಿಸಿ ಬಿದ್ದಿದ್ದು ತಾಯಾನೆ ಮರಿಯಾನೆಯನ್ನು ಮೇಲೆತ್ತಲು ಪ್ರಯತ್ನಿಸಿದೆ. ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬೇಲಿ ದಾಟಲು ಹೋಗಿ ಮುಗ್ಗರಿಸಿ ಬಿದ್ದ ಪುಟಾಣಿ ಆನೆ

ಜೈತೂನ್ ಕ್ಯಾಝೆ (zaitunkyzazze) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆನೆಗಳ ಹಿಂಡಿನಲ್ಲಿರುವ ಮರಿಯಾನೆ ಮರದ ತುಂಡುಗಳಿಂದ ಸುತ್ತಲೂ ಅಡ್ಡಲಾಗಿರುವ ಕಟ್ಟಿರುವ ಬೇಲಿ ದಾಟಲು ಮುಂದಾಗಿ ಮುಗ್ಗರಿಸಿ ಬಿದ್ದಿದೆ. ತನ್ನ ಕಂದಮ್ಮ ಬೀಳುತ್ತಿದ್ದಂತೆ ತಾಯಾನೆ ಸಹಾಯಕ್ಕೆ ಧಾವಿಸಿದೆ. ಬಿದ್ದ ಮರಿಯಾನೆ ಏನು ಆಗಿಲ್ಲ ಎನ್ನುವಂತೆ ಓಡೋಡಿ ಹೋಗಿ ಆನೆಗಳ ಗುಂಪು ಸೇರಿಕೊಂಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಯುವತಿ ರಿಕ್ವೆಸ್ಟ್ ಮಾಡುತ್ತಿದ್ದಂತೆ ಸೊಂಡಿಲೆತ್ತಿ ಆಶೀರ್ವಾದ ಮಾಡಿದ ಗಜರಾಜ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ನೆಸ್ ಗೆ ಫಿದಾ ಆದೆ ಎಂದಿದ್ದಾರೆ. ಇನ್ನೊಬ್ಬರು ಕಾಮೆಂಟ್ ನಲ್ಲಿ, ಪಾಪ ನಾಚಿಕೆ ಆಯ್ತು ಕಾಣಿಸುತ್ತೆ ಓಡಿ ಹೋದ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us