AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಯುವತಿ ರಿಕ್ವೆಸ್ಟ್ ಮಾಡುತ್ತಿದ್ದಂತೆ ಸೊಂಡಿಲೆತ್ತಿ ಆಶೀರ್ವಾದ ಮಾಡಿದ ಗಜರಾಜ

ಆನೆಗಳು ಭಾವನಾತ್ಮಕ ಮಾತ್ರವಲ್ಲ, ಬುದ್ಧಿವಂತ ಜೀವಿಗಳು ಎನ್ನುವುದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಹೌದು, ಯುವತಿಯೊಬ್ಬಳ ಮನವಿಗೆ ಸೊಂಡಿಲೆತ್ತಿ ಆಶೀರ್ವಾದ ಮಾಡಿದ ಆನೆಯ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಆನೆಯ ಕ್ಯೂಟ್ ಪ್ರತಿಕ್ರಿಯೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಯುವತಿ ರಿಕ್ವೆಸ್ಟ್ ಮಾಡುತ್ತಿದ್ದಂತೆ ಸೊಂಡಿಲೆತ್ತಿ ಆಶೀರ್ವಾದ ಮಾಡಿದ ಗಜರಾಜ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Oct 14, 2026 | 6:45 PM

Share

ಬುದ್ಧಿವಂತ ಪ್ರಾಣಿಗಳಾಗಿರುವ ಆನೆಗಳು (Elephants) ಮನುಷ್ಯರಂತೆಯೇ ಭಾವನೆಗಳಿಗೆ ಸ್ಪಂದಿಸುತ್ತವೆ. ಈ ಆನೆಗಳ ಆಟ ತುಂಟಾಟ, ಪ್ರೀತಿ ವಾತ್ಸಲ್ಯಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಯುವತಿಯೊಬ್ಬಳು ಆನೆಯ ಮುಂದೆ ನಿಂತು ಸೊಂಡಿಲೆತ್ತಿ ಆಶೀರ್ವಾದ ಮಾಡಲು ಮನವಿ ಮಾಡಿಕೊಂಡಿದ್ದಾಳೆ. ಕೊನೆಗೂ ಯುವತಿಯ ವಿನಂತಿಗೆ ಸ್ಪಂದಿಸಿದ ಗಜರಾಜನ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೊಂಡಿಲೆತ್ತಿ ಯುವತಿಗೆ ಆಶೀರ್ವಾದ ಮಾಡಿದ ಆನೆ

ಪ್ರಿಯಾಂಕಾ ಬಿರಾದಾರ (Priyanka Biradar) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವತಿ ಆನೆ ಮುಂದೆ ನಿಂತು ಇನ್ನು ಒಂದೇ ಸಲ ಸೊಂಡಿಲು ಮೇಲೆತ್ತಿ ಆಶೀರ್ವಾದ ಮಾಡು ಎಂದು ವಿನಂತಿಸಿಕೊಂಡಿದ್ದಾಳೆ. ಈ ಯುವತಿ ಮನವಿಗೆ ಪ್ರಕ್ರಿಯಿಸಿದ ಗಜರಾಜ ಸೊಂಡಿಲೆತ್ತಿ ಆಶೀರ್ವಾದ ಮಾಡುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಲಗಿದ್ದ ಮಾಲೀಕನನ್ನು ಎಬ್ಬಿಸಲು ಪ್ರಯತ್ನಿಸಿದ ಮರಿಯಾನೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಈ ವಿಶ್ವದಲ್ಲಿ ಹುಡುಗಿಯರಿಗೆ ಮನಸೋಲದ ಜೀವವೇ ಇಲ್ಲ ಎಂದಿದ್ದಾರೆ. ಇನ್ನೊಬ್ಬರು, ಅದೃಷ್ಟವಂತರು ನೀವು ಎಂದು ಹೇಳಿದ್ದಾರೆ. ಮತ್ತೊಬ್ಬರು, ಹುಡ್ಗಿರು ಅಷ್ಟು ದೊಡ್ಡ ಆನೆಯನ್ನೇ ಪಳಗಿಸಿ ಬಿಡ್ತಾರೆ, ಇನ್ನು ಹುಡುಗರು ಯಾವ ಲೆಕ್ಕ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Wed, 14 October 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More