ಜನಗಣಮನ ಈ ನಮ್ಮ ರಾಷ್ಟ್ರಗೀತೆ (national anthem) ಯನ್ನು ಕೇಳುವಾಗ ಮೈಮನವೆಲ್ಲಾ ಒಂದು ಕ್ಷಣ ರೋಮಾಂಚನವಾಗುತ್ತದೆ. ಹೌದು, ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸೂಚಿಸುವುದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಿದೆ. ಆದರೆ ಸುಶಿಕ್ಷಿತರೆನಿಸಿಕೊಂಡ ಜನರೇ ಅಗೌರವ ತೋರುವಂತಹ ಘಟನೆಗಳು ನಡೆಯುತ್ತಿರುತ್ತದೆ. ಇದೀಗ ಅಪರೂಪದ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದ್ದು, ಗೋಮಾತೆಯೊಂದು ರಾಷ್ಟ್ರಗೀತೆಗೆ ಗೌರವ ಕೊಟ್ಟು ದೇಶಭಕ್ತಿ ಮೆರೆದಿದ್ದು, ಈ ವಿಡಿಯೋ ನೋಡಿ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
malleshmumulgi ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಹಸುವೊಂದು ರಾಷ್ಟ್ರಗೀತೆಗೆ ಗೌರವ ಕೊಟ್ಟು ನಿಂತಿರುವುದನ್ನು ನೋಡಬಹುದು. ಈ ವಿಡಿಯೋಗೆ ಗೋಮಾತೆ ರಾಷ್ಟ್ರಗೀತೆಗೆ ಕೊಟ್ಟ ಸಮ್ಮಾನ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಶಾಲಾ ಆವರಣದಲ್ಲಿ ಸಾಲಾಗಿ ಮಕ್ಕಳು ನಿಂತುಕೊಂಡಿದ್ದು, ಶಿಕ್ಷಕರ ಜೊತೆ ಸೇರಿ ರಾಷ್ಟ್ರಗೀತೆಯನ್ನು ಹಾಡುತ್ತಿರುವುದನ್ನು ನೋಡಬಹುದು. ಈ ವೇಳೆಯಲ್ಲಿ ಅಲ್ಲೇ ಇದ್ದ ಹಸುವೊಂದು ಅತ್ತಿಂದ ಇತ್ತ ಅಲುಗಾಡದೇ ತಟಸ್ಥವಾಗಿ ನಿಂತುಕೊಳ್ಳುವ ಮೂಲಕ ಗೌರವ ಸೂಚಿಸಿದೆ.
ಇದನ್ನೂ ಓದಿ :Video: ರೀಲ್ಸ್ ಮಾಡಲು ಬಂದಾಕೆಗೆ ಜಾಡಿಸಿ ಒದ್ದ ಕುದುರೆ; ವಿಡಿಯೋ ವೈರಲ್
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಈ ವಿಡಿಯೋವೊಂದು ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಇದು ನಮ್ಮ ದೇಶ ಅಂದ್ರೆ, ಎಷ್ಟು ಚಂದ ನಿಂತಿದೆ ನೋಡ್ರಿ ಗೋಮಾತೆ, ಇದನ್ನು ನೋಡುವ ನಾವು ನಿಜಕ್ಕೂ ಪುಣ್ಯವಂತರು ಎಂದಿದ್ದಾರೆ. ಇನ್ನೊಬ್ಬರು, ನಮ್ಮ ದೇಶ, ನಮ್ಮ ಸಂಸ್ಕೃತಿಯನ್ನು ಯಾವತ್ತೂ ಯಾರು ಮರೆಯಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪುಣ್ಯ ಮಾಡಿದ್ದೇವೆ ನಾವು. ಸಂಸ್ಕಾರ, ಸಂಸ್ಕೃತಿ ಇರುವ ಭಾರತ ದೇಶದಲ್ಲಿ ಹುಟ್ಟಿದ್ದೇವೆ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ