Viral Video : ಅಪ್ಪ ಅಮ್ಮ ಮಗುವಿಗೆ ಎರೆದ ಪ್ರೀತಿ, ಕಾಳಜಿಯನ್ನೇ ತನ್ನ ಜೊತೆಗಿರುವವರಿಗೂ ಧಾರೆ ಎರೆಯುತ್ತದೆ ಮಗು. ಇಂಥವರಿಗೆ ಇಂಥದಕ್ಕೇ ಎಂದು ಗೆರೆ ಕೊರೆದುಕೊಂಡು ಬದುಕುವುದು ಮಗುವಿಗೆ ಗೊತ್ತಿಲ್ಲ. ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಎಲ್ಲವೂ ಎಲ್ಲರೂ ಒಂದೇ ಮಗುವಿನ ಚಿತ್ತದಲ್ಲಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಸೈಕಲ್ ತೆಗೆದುಕೊಂಡು ರಸ್ತೆಗಿಳಿದಿದೆ ಈ ಮಗು. ಅಲ್ಲಿ ಬಾತು ಮತ್ತು ಹುಂಜ ಕಂಡಿವೆ. ಆಟ ಮುಗಿಸಿ ವಾಪಸ್ ಹೋಗುವಾಗ ಹುಂಜಕ್ಕೆ ಡ್ರಾಪ್ ಕೊಡಬೇಕು ಎನ್ನಿಸಿದೆ ಮಗುವಿಗೆ.
ಈ ವಿಡಿಯೋ ಅನ್ನು 1.1 ಮಿಲಿಯನ್ ಜನರು ನೋಡಿದ್ದಾರೆ. 11 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಹೀಟರ್ ಬೋರ್ಜಸ್ ಎನ್ನುವವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮನೆಯ ಬಳಿ ಈ ಹುಂಜ ಮತ್ತು ಬಾತುಕೋಳಿಯೊಂದಿಗೆ ಆಟವಾಡಿದೆ ಈ ಮಗು. ವಾಪಸ್ ಹಿಂದಿರುಗುವಾಗ, ನನ್ನ ಸೈಕಲ್ ಇದ್ದರೂ ನೀ ಯಾಕೆ ನಡೆದುಕೊಂಡು ಬರುವುದು? ಬಾ ನಿನಗೆ ಡ್ರಾಪ್ ಕೊಡುತ್ತೇನೆ ಎಂದಿದ್ದಾನೆ ಈ ಮುದ್ದಣ್ಣ.
ಇದನ್ನೂ ನೋಡಿ : ಮ್ಯಾನ್ಹೋಲ್ ಸುತ್ತ ಕಲ್ಲನ್ನಿಟ್ಟು ದಾರಿಹೋಕರನ್ನು ಎಚ್ಚರಿಸಿದ ಈ ಮಕ್ಕಳ ವಿಡಿಯೋ ವೈರಲ್
ಅದೂ ಒಂದೇ ಮಾತಿಗೆ ಪುಟ್ಟ ಗಾಡಿಯನ್ನೇರಿ ಕುಳಿತಿದೆ. ಬೇರೆ ಹುಂಜವಾಗಿದ್ದರೆ ಇಷ್ಟೊತ್ತಿಗೆ ಓಡಿಹೋಗಿಬಿಡುತ್ತಿತ್ತು. ಆದರೆ ಅವ ಎತ್ತಿ ಕೂರಿಸುತ್ತಿದ್ದಂತೆ ಸುಮ್ಮನೇ ಕುಳಿತು ಪ್ರಯಾಣಿಸಿದೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ ವಿಡಿಯೋಗೆ. ಡ್ರೈವರ್ಗಿಂತ ಪ್ರಯಾಣಿಕನೇ ವೃತ್ತಿಪರ ಇದ್ದಂತಿದೆ ಎಂದಿದ್ದಾರೆ ಒಬ್ಬರು. ಏಕೆಂದರೆ ಆ ಮಣ್ಣಿನ ರಸ್ತೆ ಗಮನಿಸಿ. ಬಾಲ್ಯ ಎನ್ನುವುದು ಯಾವಾಗಲೂ ಪರಿಶುದ್ಧ ಎನ್ನುವುದು ಇಂಥ ಕಾಣರಗಳೀಗಾಗಿಯೇ ಎಂದಿದ್ದಾರೆ ಇನ್ನೊಬ್ಬರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:24 am, Wed, 7 December 22