
ಶ್ವಾನಗಳನ್ನು (Dogs) ಮನುಷ್ಯನ ಉತ್ತಮ ಸ್ನೇಹಿತ ಅಂತ ಹೇಳ್ತಾರೆ. ಜನ ನಾಯಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುತ್ತಾರೆ. ನಾಯಿಗಳೂ ಅಷ್ಟೇ ತನ್ನ ಮಾಲೀಕ ಜೊತೆಗಿದ್ದರೆ ಮಗುವಿನಂತೆಯೇ ಆಗಿ ಬಿಡುತ್ತದೆ. ಅದರಲ್ಲೂ ಈ ಶ್ವಾನಗಳು ಮಕ್ಕಳ ಜೊತೆ ತುಸು ಹೆಚ್ಚೇ ತುಂಟಾಟಗಳನ್ನು ಆಡುತ್ತವೆ. ಹೀಗೆ ಮನುಷ್ಯ ಮತ್ತು ಶ್ವಾನಗಳ ನಡುವಿನ ಸ್ನೇಹ (Dog and Human Friendship) ಸಂಬಂಧಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ನಾಯಿಯೊಂದು ನಾನು ನಿಮ್ಮ ಜೊತೆ ಆಟಕ್ಕೆ ಬರ್ತೀನಿ ಎನ್ನುತ್ತಾ ಮೂವರು ಪುಟಾಣಿ ಮಕ್ಕಳ ಜೊತೆ ಸೇರಿ ಆಟವಾಡಿದೆ. ಮುಗ್ಧ ಮನಸ್ಸುಗಳ ಸಮ್ಮಿಲನ ದೃಶ್ಯ ಎಲ್ಲರ ಹೃದಯ ಗೆದ್ದಿದೆ.
ಮೂವರು ಮಕ್ಕಳು ರಸ್ತೆಬದಿಯಲ್ಲಿ ಕುಳಿತು ಆಟವಾಡುತ್ತಿದ್ದ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಶ್ವಾನವೊಂದು ನನ್ನನ್ನೂ ಆಟಕ್ಕೆ ಸೆರಿಸ್ರೋ ಎಂದು ಹೇಳುತ್ತಾ, ಆ ಪುಟಾಣಿಗಳ ಜೊತೆ ಸೇರಿ ತಾನೂ ಆಟವಾಡಿದೆ. ಈ ಮುದ್ದಾದ ವಿಡಿಯೋವನ್ನು ladbible ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು,”ಎಷ್ಟು ಸುಂದರವಾಗಿದೆ ಹುಡುಗರ ಗುಂಪು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ವೈರಲ್ ಆಗುತ್ತಿರುವ ಈ ದೃಶ್ಯದಲ್ಲಿ ರಸ್ತೆ ಬದಿಯಲ್ಲಿ ಕುಳಿತ ಮೂವರು ಪುಟಾಣಿಗಳ ಜೊತೆ ಶ್ವಾನದ ಸುಂದರ ಸ್ನೇಹದ ದೃಶ್ಯವನ್ನು ಕಾಣಬಹುದು. ಮೂವರು ಸ್ನೇಹಿತರು ಜೊತೆಯಾಗಿ ಕುಳಿತು ಆಟವಾಡುತ್ತಿದ್ದ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಶ್ವಾನ ತಾನೂ ಕೂಡಾ ಆ ಪುಟಾಣಿಗಳ ಜೊತೆ ಸೇರಿ ಮಕ್ಕಳಂತೆ ಆಟವಾಡಿದೆ.
ಇದನ್ನೂ ಓದಿ: ಪ್ಲೀಸ್ ನನ್ನ ಬಿಟ್ಟೋಗ್ಬೇಡ, ನಿನ್ನ ಜತೆ ನಾನು ಬರ್ತೀನಿ, ಇದೇ ನೋಡಿ ಪ್ರೀತಿ
ಜೂನ್ 10 ರಂದು ಶೇರ್ ಮಾಡಲಾದ ಈ ವಿಡಿಯೋ 2.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಕಂಡ ಅದ್ಭುತ ದೃಶ್ಯ ಇದಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಂತಹ ಸುಂದರ ಸ್ನೇಹʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾಯಿ ಮತ್ತು ಮಕ್ಕಳ ನಡುವಿನ ಸ್ನೇಹ ಬಲು ಸುಂದರವಾಗಿದೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ