ನೀವು ಬೆಳಿಗ್ಗೆಯಿಂದ ಸಪ್ಪಗಿದ್ದೀರಾ? ಹಾಗಾದರೆ ಈ ವಿಡಿಯೋ ನೋಡಿ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೋದಲ್ಲಿ ಒಂದು ಪುಟ್ಟ ಹುಡುಗ ತುಂಬಾ ಚೆನ್ನಾಗಿ ವೈದ್ಯರಂತೆ ನಟಿಸುತ್ತಾ ತಮ್ಮ ಮನೆಯ ನಾಯಿಯ ತಪಾಸಣೆ ಮಾಡುತ್ತಿದ್ದಾನೆ. ನೀವು ಈ ವೀಡಿಯೋವನ್ನು ನೋಡಿ ಮುಗಿಸುವುದರೊಳಗೆ ನಿಮ್ಮ ಮುಖದ ಮೇಲೆ ಒಂದು ವಿಶಾಲವಾದ ನಗು ಮೂಡದೆ ಇರೋದಕ್ಕೆ ಸಾಧ್ಯನೇ ಇಲ್ಲ.
ಈ ಮುದ್ದಾದ ವೀಡಿಯೊವನ್ನು @buitengebieden ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ನಾಯಿ ಮತ್ತು ಮಗು ಆಟವಾಡುವ ಪ್ರದೇಶದಲ್ಲಿ ಕುಳಿತಿರುವುದನ್ನು ತೋರಿಸಲಾಗುತ್ತದೆ. ಹುಡುಗ ಬೆಂಚಿನ ಮೇಲಿ ಕುಳಿತುಕೊಂಡಿದ್ದು ನಾಯಿ ನೆಲದ ಮೇಲೆ ಅವನನ್ನೇ ನೋಡುತ್ತಾ ಕುಳಿತಿದೆ. ವೀಡಿಯೋ ಮುಂದುವರಿಯುತ್ತಿದಂತೆ ಆ ಹುಡುಗ ತನ್ನ ಪಕ್ಕದಲ್ಲಿರುವ ಆಟಿಕೆಗಳನ್ನು ಒಂದೊಂದಾಗಿ ತೆಗೆದುಕೊಂಡು ತನ್ನ ಮುದ್ದಾದ ನಾಯಿಯ ತಪಾಸಣೆ ಮಾಡುತ್ತಿರುವಂತೆ ನಟಿಸುತ್ತಿದ್ದಾನೆ. ಈ ವೀಡಿಯೋ ಹಂಚಿಕೊಂಡವರು ಇದಕ್ಕೆ ಮುದ್ದಾದ ಶೀರ್ಷಿಕೆಯನ್ನೂ ನೀಡಿದ್ದು “ಭವಿಷ್ಯದ ಪಶುವೈದ್ಯರು ಮತ್ತು ಅವರ ರೋಗಿ” ಎಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
Future veterinarian and his patient.. ? pic.twitter.com/lJvTfDT57u
— Buitengebieden (@buitengebieden) April 25, 2023
ಇದನ್ನೂ ಓದಿ: 15 ನಿಮಿಷಗಳಲ್ಲಿ ಎಟಿಎಂ ಒಡೆಯುವುದನ್ನು ಯುವಕರಿಗೆ ಹೇಳಿಕೊಟ್ಟ ‘ಎಟಿಎಂ ಬಾಬಾ’; ಲಕ್ನೋ ಪೊಲೀಸರು ಶಾಕ್
ಈ ಪೋಸ್ಟ್ ಈಗಾಗಲೇ ಮೂರು ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, ಹಲವಾರು ಮಂದಿ ಶೇರ್ ಮಾಡಿದ್ದು ಅತೀ ಹೆಚ್ಚು ಲೈಕ್ ಮತ್ತು ಕಾಮೆಂಟ್ ಗಳನ್ನು ಸಹ ಹೊಂದಿದೆ. ಈ ವೀಡಿಯೋಗೆ ಕಾಮೆಂಟ್ ಮಾಡಿದ ಹಲವಾರು ಜನ ಈ ನಾಯಿ ಮುದ್ದಾಗಿದೆ ನಮಗೆ ಬೇಕು ಎಂದಿದ್ದಾರೆ. ಇನ್ನು ಕೆಲವು ಬಳಕೆದಾರರು “ಮುದ್ದಾದ ಹುಡುಗ ಮತ್ತು ಅವನ ನಾಯಿ, ಅದನ್ನು ಪ್ರೀತಿಸಿ!” ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವು ಬಳಕೆದಾರರು ನಾಯಿಗೆ ತುಂಬಾ ತಾಳ್ಮೆ ಇದೆ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;
Published On - 7:04 pm, Thu, 27 April 23