
ಈಗೆಲ್ಲಾ ಕಾಲ ಹೇಗಾಗಿದೆ ಎಂದ್ರೆ ಎರಡು ಮೂರು ವರ್ಷದ ಮಕ್ಕಳನ್ನು ಸಹ ನರ್ಸರಿ, ಪ್ರೀ-ಕೆಜಿ ಅಂತೆಲ್ಲಾ ಸ್ಕೂಲ್‌ಗೆ ತೆಗೆದುಕೊಂಡು ಹೋಗಿ ಬಿಡ್ತಿದ್ದಾರೆ. ಪ್ರತಿಯೊಂದು ವಿಷಯವನ್ನು ಕಲಿಯಲೇಬೇಕು, ಇಂಗ್ಲಿಷ್ ಮಾತಾಡ್ಲೇಬೇಕು ಎಂದು ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಮೇಲೆ ಒತ್ತಡ (Pressure) ಹೇರುತ್ತಾರೆ. ಇದರಿಂದ ಮಕ್ಕಳ ಪುಟ್ಟ ಮನಸ್ಸಿನ ಮೇಲೆ ಸಾಕಷ್ಟು ಒತ್ತಡ ಬೀಳುತ್ತದೆ ಮತ್ತು ಅವರು ತಮ್ಮ ಬಾಲ್ಯವನ್ನು ಖುಷಿಯಾಗಿ ಕಳೆಯಲು ಸಹ ಆಗುವುದಿಲ್ಲ. ಇದಕ್ಕೆ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಪುಟಾಣಿ ಬಾಲಕನೊಬ್ಬ ಶಾಲೆಯ ಮೆಟ್ಟಿಲ ಮೇಲೆಯೇ ಕುಳಿತು ತೂಕಡಿಸಿದ್ದಾನೆ (A little boy who fell asleep). ಈ ಹೃದಯ ವಿದ್ರಾವಕ ದೃಶ್ಯವನ್ನು ಕಂಡು, ಆಟ, ಊಟ, ನಿದ್ದೆ ಅಂತ ಒತ್ತಡ ಮುಕ್ತವಾದ ದಿನವನ್ನು ಆನಂದಿಸಬೇಕಾದ ಮಕ್ಕಳ ಸುಂದರ ಬಾಲ್ಯವನ್ನು ಕಿತ್ತುಕೊಳ್ಳಬೇಡಿ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಪೋಷರು ತಮ್ಮ ಪ್ರತಿಷ್ಠೆಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಅದು ಕಲಿಬೇಕು, ಇದು ಕಲಿಯಬೇಕು ಎಂದು ಒತ್ತಡ ಹೇರುತ್ತಾರೆ. ಆದರೆ ಮಕ್ಕಳಿಗೆ ಏನು ಇಷ್ಟ ಇದೆ ಅದ್ರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ ಮಗುವಿಗೆ ಕ್ರೀಡೆಯಲ್ಲಿ ತುಂಬಾನೇ ಆಸಕ್ತಿ ಇದ್ದರೆ, ಪೋಷಕರು ಅದನ್ನು ಪ್ರೋತ್ಸಾಹಿಸಬೇಕೇ ವಿನಃ, ಓದು ಓದು ಎಂದು ಯಾವುದೇ ಕಾರಣಕ್ಕೂ ಒತ್ತಡ ಹೇರಬಾರದು. ಹೀಗೆ ಒತ್ತಡ ಹೇರುವುದರಿಂದ ಮಕ್ಕಳ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುವ ವಿಡಿಯೋವನ್ನು jaykar928 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸ್ನೇಹಿತರು, ಆಟ ಅಂತೆಲ್ಲಾ ಸುಂದರ ಬಾಲ್ಯವನ್ನು ಕಳೆಯಬೇಕಿದ್ದ ಪುಟಾಣಿ ಬಾಲಕನೊಬ್ಬ ಒಂಟಿಯಾಗಿ ಶಾಲೆಯ ಮೆಟ್ಟಿಲಲ್ಲಿ ಕುಳಿತು ತೂಕಡಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ನಿಮ್ಮ ಶಾಲೆಯ ಸಹವಾಸ ಸಾಕು ಎಂದು ಬ್ಯಾಗ್ ಹಿಡಿದುಕೊಂಡು ಓಡಿದ ಪುಟ್ಟ ಬಾಲಕ, ಮನವೊಲಿಸಲು ಶಿಕ್ಷಕರು ಮಾಡಿದ್ದೇನು?
ಜೂನ್ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದಲು ಪೋಷಕರು ಮಕ್ಕಳಿಗೆ ಒಳ್ಳೆಯ ವ್ಯಕ್ತಿಯಾಗುವುದು ಹೇಗೆ, ಉತ್ತಮ ನಾಗರಿಕನಾಗಿ ಬಾಳುವುದು ಹೇಗೆ ಎಂಬುದನ್ನು ಕಲಿಸಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಡವಾಡುವ ವಯಸ್ಸಲ್ಲಿ ಒತ್ತಡ ಹೇರಿದರೆ ಪಾಪ ಆ ಮುಗ್ಧ ಮನಸ್ಸಿಗೆ ಹೇಗಾಗಬೇಡʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಕ್ಕಳಿಗೆ ಓದು ಓದು ಎಂದು ಒತ್ತಡ ಹೇರಬೇಡಿ, ಅವರ ಬಾಲ್ಯವನ್ನು ಆನಂದಿಸಲು ಬಿಡಿʼ ಎಂದು ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ